ಗೌರಿ ಲಂಕೇಶ್ ಹತ್ಯೆ ಪ್ರಕರಣ; ಆರೋಪಿ ಮೋಹನ್ ನಾಯಕ್ ವಿರುದ್ಧ ಕೋಕಾ ಮರುಸ್ಥಾಪನೆ

ಹೊಸದಿಲ್ಲಿ: ಖ್ಯಾತ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿ ಮೋಹನ್ ನಾಯಕ್ ವಿರುದ್ಧ ಸೆಪ್ಟೆಂಬರ್ ೮, ೨೦೨೧ರಂದು ಹಿಂದಕ್ಕೆ ಪಡೆಯಲಾಗಿದ್ದ ಕರ್ನಾಟಕ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ (ಕೆಸಿಒಸಿಎ) ಅಡಿಯಲ್ಲಿ ಆರೋಪಗಳನ್ನು ಸರ್ವೋಚ್ಚ ನ್ಯಾಯಾಲಯ ಗುರುವಾರ ಮರುಸ್ಥಾಪಿಸಿದೆ.

ಗೌರಿ ಲಂಕೇಶ್ ಅವರ ಸಹೋದರಿ ಕವಿತಾ ಲಂಕೇಶ್ ಸಲ್ಲಿಸಿದ ಮೇಲ್ಮನವಿಗೆ ಅನುಮತಿ ನೀಡಿ, ನ್ಯಾಯಮೂರ್ತಿಗಳಾದ ಎ.ಎಂ.ಖಾನ್ವಿಲ್ಕರ್, ದಿನೇಶ್ ಮಹೇಶ್ವರಿ ಮತ್ತು ಸಿ.ಟಿ.ರವಿಕುಮಾರ್ ಅವರನ್ನೊಳಗೊಂಡ ನ್ಯಾಯಪೀಠವು ಮೋಹನ್ ನಾಯಕ್ ವಿರುದ್ಧ ಕೆಸಿಒಸಿಎ (ಕೋಕಾ) ಆರೋಪಗಳನ್ನು ರದ್ದುಗೊಳಿಸಿದ ಕರ್ನಾಟಕ ಉಚ್ಚ ನ್ಯಾಯಾಲಯದ ತೀರ್ಪನ್ನು ರದ್ದುಗೊಳಿಸಿತು.

ಸೆಪ್ಟೆಂಬರ್ ೨೧, ೨೦೨೧ ರಂದು ಸವೋಚ್ಚ ನ್ಯಾಯಾಲಯದ ಹಿರಿಯ ವಕೀಲ ಹುಝಾಫಾ ಅಹ್ಮದಿ ಅವರ ವಿವರವಾದ ಸಲ್ಲಿಕೆ ಮತ್ತು ವಾದಗಳನ್ನು ಆಲಿಸಿದ ನಂತರ ನ್ಯಾಯಾಲಯ ತನ್ನ ಆದೇಶಗಳನ್ನು ಕಾಯ್ದಿರಿಸಿತ್ತು.

ನ್ಯಾಯಾಲಯದ ಮುಂದೆ ಸಲ್ಲಿಸಿದ ಅರ್ಜಿಯು ನ್ಯಾಯಾಲಯದ ಮುಂದೆ ಪರಿಗಣನೆಗೆ ಬಂದಿರುವ ಸಣ್ಣ ಪ್ರಶ್ನೆ ಏನೆಂದರೆ ಸೆಕ್ಷನ್ ೨೪ (೧) ಅಡಿಯಲ್ಲಿ ನೀಡಲಾದ ಅನುಮೋದನೆಗೆ ಸಂಬಂಧಿಸಿದೆ. ಮತ್ತು ಕೋಕಾ ಕಾಯ್ದೆ ಮತ್ತು ಅದರ ಮೇಲೆ ತೆಗೆದುಕೊಳ್ಳಲಾದ ಅರಿವು ಮತ್ತು ಆರೋಪಪಟ್ಟಿ ಸಲ್ಲಿಸಲಾಗಿದೆ. ಆರೋಪಿಗೆ ಸಂಬಂಧಪಟ್ಟಂತೆ ಈ ಕಾಯಿದೆಯು ಅನ್ವಯವಾಗುವುದಿಲ್ಲ ಎಂದು ಉಚ್ಚ ನ್ಯಾಯಾಲಯ ಒಂದು ದೃಷ್ಟಿಕೋನವನ್ನು ತೆಗೆದುಕೊಂಡಿದೆ, ಆದರೆ ನ್ಯಾಯಾಲಯವು ಕೋಕಾ ಅನ್ವಯಿಸುವುದಿಲ್ಲ ಎಂಬ ತೀರ್ಮಾನಕ್ಕೆ ಬರುವಲ್ಲಿ ತಪ್ಪಾಗಿದೆ ಎಂದು ವಾದ ಮಂಡಿಸಿದ್ದರು.

ಆರೋಪಿ ಮೋಹನ್ ನಾಯಕ್ ವಿರುದ್ಧ ‘ಕೋಕಾ‘ ಅಡಿ ತನಿಖೆ ನಡೆಸುವುದಕ್ಕಾಗಿ ಅನುಮತಿ ನೀಡುವಂತೆ ಕೋರಿ ಪೊಲೀಸ್ ಇಲಾಖೆ ಸಲ್ಲಿಸಿದ್ದ ಮನವಿಯನ್ನು ಉಚ್ಚ ನ್ಯಾಯಾಲಯ ಆಗಸ್ಟ್ ೧೪, ೨೦೧೮ ರಂದು ರದ್ದುಗೊಳಿಸಿ ತೀರ್ಪು ನೀಡಿತ್ತು. ೨೦೧೭ರ ಸೆ.೫ ರಂದು ಬೆಂಗಳೂರಿನ ರಾಜರಾಜೇಶ್ವರಿ ನಗರದ ಅವರ ನಿವಾಸದೆದುರು ಗೌರಿ ಲಂಕೇಶ್ ಅವರನ್ನು ಹತ್ಯೆ ಮಾಡಲಾಗಿತ್ತು.

× Chat with us