ನ.30ಕ್ಕೆ ‘ಗರೀಬ್ ಕಲ್ಯಾಣ್ ಯೋಜನೆ’ ಅಂತ್ಯ

ನವದೆಹಲಿ: ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ ಅಡಿಯಲ್ಲಿ, ನವೆಂಬರ್ 30ರ ನಂತರ ಬಡವರಿಗೆ ಉಚಿತ ಪಡಿತರ ಸಿಗುವುದಿಲ್ಲ.

ಕೇಂದ್ರ ಸರ್ಕಾರದ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ಸುಧಾಂಶು ಪಾಂಡೆ ಅವರು, ಈ ಕುರಿತು ಸ್ಪಷ್ಟನೆ ನೀಡಿದ್ದು, ನವೆಂಬರ್ ನಂತರ ಈ ಯೋಜನೆಯಡಿ ಉಚಿತ ಪಡಿತರ ವಿತರಣೆಯನ್ನ ವಿಸ್ತರಿಸುವ ಯಾವುದೇ ಪ್ರಸ್ತಾಪವಿಲ್ಲ ಎಂದು ಹೇಳಿದರು.
ದೇಶದ ಆರ್ಥಿಕತೆ ಮತ್ತೆ ಹಳಿಗೆ ಮರಳುತ್ತಿದೆ, ಆದ್ದರಿಂದ ಉಚಿತ ಪಡಿತರ ಒದಗಿಸುವ ಯೋಜನೆಯನ್ನ ಮುಂದಕ್ಕೆ ಕೊಂಡೊಯ್ಯುವ ಯಾವುದೇ ಪ್ರಸ್ತಾಪವಿಲ್ಲ ಎಂದು ಪಾಂಡೆ ಸ್ಪಷ್ಟಪಡಿಸಿದರು.

ಕೇಂದ್ರ ಸರ್ಕಾರ ಕಳೆದ ವರ್ಷದಿಂದ ಈ ಯೋಜನೆಯಡಿ ಬಡ ಕುಟುಂಬಗಳಿಗೆ ಉಚಿತ ಪಡಿತರ ಒದಗಿಸುತ್ತಿದ್ದುದನ್ನು ಸ್ಮರಿಸಬಹುದು. ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯನ್ನ ಕಳೆದ ವರ್ಷ ಮಾರ್ಚ್‌ನಲ್ಲಿ ಘೋಷಿಸಲಾಯಿತು. ಆರಂಭದಲ್ಲಿ ಈ ಯೋಜನೆಯನ್ನ ಏಪ್ರಿಲ್-ಜೂನ್ 2020ರ ಅವಧಿಗೆ ಪ್ರಾರಂಭಿಸಲಾಯಿತಾದ್ರು, ನಂತರ ನವೆಂಬರ್ ೩೦, ೨೦೨೧ ಕ್ಕೆ ವಿಸ್ತರಿಸಲಾಯಿತು.

’ಆರ್ಥಿಕತೆಯು ಮತ್ತೆ ಹಳಿಗೆ ಮರಳುತ್ತಿರುವುದರಿಂದ ಮತ್ತು ನಮ್ಮ ಒಎಂಎಸ್‌ಎಸ್ (ಮುಕ್ತ ಮಾರುಕಟ್ಟೆ ಮಾರಾಟ ಯೋಜನೆ) ಸಹ ಈ ವರ್ಷ ಉತ್ತಮವಾಗಿದೆ. ಆದ್ದರಿಂದ, ಪಿಎಂಜಿಕೆವೈ ವಿಸ್ತರಿಸುವ ಯಾವುದೇ ಪ್ರಸ್ತಾಪವಿಲ್ಲ’ – ಪಾಂಡೆ, ಆಹಾರ ಕಾರ್ಯದರ್ಶಿ

ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (ಎನ್‌ಎಫ್‌ಎಸ್‌ಎ) ಅಡಿಯಲ್ಲಿ 80 ಕೋಟಿ ಪಡಿತರ ಚೀಟಿದಾರರಿಗೆ ಉಚಿತ ಪಡಿತರವನ್ನು ಗುರುತಿಸಲಾಗಿದೆ. ಅವರಿಗೆ ವಿತರಿಸಬೇಕಾದ ಸಬ್ಸಿಡಿ ಆಹಾರ ಧಾನ್ಯಗಳ ಜೊತೆಗೆ ಪಡಿತರ ಅಂಗಡಿಗಳ ಮೂಲಕ ಉಚಿತ ಪಡಿತರವನ್ನು ನೀಡಲಾಗುತ್ತತ್ತು.

× Chat with us