ಬೆಂಗಳೂರು: ವೈದ್ಯಕೀಯ ಚಿಕಿತ್ಸಾ ಪದ್ಧತಿಗಳಲ್ಲಿ ಪ್ರಕೃತಿ ಚಿಕಿತ್ಸೆ ಅಥವಾ ನ್ಯಾಚುರೋಪಥಿ ಚಿಕಿತ್ಸೆ ಬಹಳ ಮಹತ್ವದ್ದು ಈ ನಿಟ್ಟಿನಲ್ಲಿ ಮಹಾತ್ಮ ಗಾಂಧಿಯವರು ಪ್ರಾರಂಭದಿಂದಲೆ ಈ ಚಿಕಿತ್ಸಾ ಪದ್ದತಿಗೆ ಹೆಚ್ಚಿನ ಒತ್ತು ಕೊಡುತಿದ್ದರು ಎಂದು ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ಅವರು ಹೇಳಿದರು.
ಬೆಂಗಳೂರಿನ ಕುಮಾರಪಾರ್ಕ್ ರಸ್ತೆಯ ಗಾಂಧಿ ಭವನದಲ್ಲಿ ಕರ್ನಾಟಕ ಪ್ರದೇಶ ಪ್ರಕೃತಿ ಚಿಕಿತ್ಸಾ ಪರಿಷತ್, ಅಂತರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ಸಂಸ್ಥೆ (ಐ.ಎನ್.ಓ), ರಾಷ್ಟ್ರೀಯ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಅಕಾಡೆಮಿ ಹಾಗೂ ಕರ್ನಾಟಕ ಗಾಂಧಿ ಸ್ಮಾರಕ ವಿಧಿ ಸಹಯೋಗದಲ್ಲಿ ಡಾ.ಹೊ.ಶ್ರೀನಿವಾಸಯ್ಯ ಶತಮಾನೋತ್ಸವ ಪ್ರಯುಕ್ತ ಪ್ರಕೃತಿ ಚಿಕಿತ್ಸೆಗೆ ಮಹಾತ್ಮ ಗಾಂಧಿಯವರ ಕೊಡುಗೆ ಕುರಿತು ಶನಿವಾರ (ಆಗಸ್ಟ್ 11) ಆಯೋಜಿಸಿದ ವಿಚಾರ ಸಂಕೀರ್ಣ ಉದ್ಘಾಟಿಸಿ ಅವರು ಮಾತನಾಡಿದರು.
ಗಾಂಧಿಜಿಯವರು ಪ್ರಕೃತಿ ಚಿಕಿತ್ಸೆಯಲ್ಲಿ ಬಹಳ ಆಳವಾದ ನಂಬಿಕೆಯನಿಟ್ಟಿದ್ದರು ತಾವು ಹೋದಲೆಲ್ಲಾ ಅನೇಕರಿಗೆ ಇದರ ಬಗ್ಗೆಯೆ ಒತ್ತು ಹೇಳುತಿದ್ದರು ಜೊತೆಗೆ ತಾವು ಅದನ್ನೆ ಅನುಸರಿಸುತಿದ್ದರು ನಾವು ಕೂಡ ಪ್ರಕೃತಿ ಚಿಕಿತ್ಸಾ ಪದ್ದತಿಯನ್ನು ಉಳಿಸಿ ಬೇಳೆಸಬೇಕಿದೆ ಎಂದರು.
ಅಂತರಾಷ್ಟ್ರೀಯ ಪ್ರಾಕೃತಿಕ ಚಿಕಿತ್ಸಾ ಸಂಸ್ಥೆಯ ರಾಷ್ಟ್ರೀಯ ಅಧ್ಯಕ್ಷರಾದ ಅನಂತ ಬಿರಾದಾರ ಅವರು ಮಾತನಾಡಿ ಪ್ರಕೃತಿ ಚಿಕಿತ್ಸೆ ಪದ್ದತಿ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ದೇಶಾದ್ಯಂತ ಕೆಲಸ ಮಾಡುತ್ತಿದೆ ಆರೋಗ್ಯ ಕ್ಷೇತ್ರಕ್ಕೆ ಸರ್ಕಾರಗಳ ಬಜೆಟ್ ಕಡಿಮೆಯಾಗಬೆಕು ಮುನ್ನೆಚ್ಚರಿಕೆ ದೃಷ್ಟಿಯಿಂದ ಪ್ರತಿಯೊಬ್ಬರು ಪ್ರಕೃತಿ ಚಿಕಿತ್ಸೆಯನ್ನು ಅಳವಡಿಸಿಕೊಳ್ಳಬೇಕು ಇದಕ್ಕೆ ಸರ್ಕಾರಗಳು ಕೂಡ ಕೈಜೊಡಿಸಬೇಕು ಜನರಲ್ಲಿ ಇನ್ನು ಹೆಚ್ಚಿನ ಜಾಗೃತಿ ಮೂಡಿಸುವ ಕೆಲಸ ಮಾಡಬೇಕಿದೆ ಎಂದರು.
ಐ.ಎನ್.ಓ ರಾಷ್ಟ್ರೀಯ ಉಪಾದ್ಯಕ್ಷರಾದ ಡಾ.ಹರಿಷ ಆರ್ ಮಾತನಾಡಿ ಪ್ರಾಕೃತಿಕ ಚಿಕಿತ್ಸಾ ಪದ್ದತಿಯ ಬೆಳವಣಿಗೆಯಲ್ಲಿ ಅನಂತ ಬಿರಾದಾರ ಅವರು ಕಳೆದ ಎರಡುವರೆ ದಶಕಗಳಿಂದ ಅಹರ್ನಿಶಿಯಾಗಿ ಶ್ರಮಿಸುತಿದ್ದಾರೆ ಅವರ ಸೇವೆಯನ್ನ ಗುರುತಿಸಬೇಕು ಮತ್ತು ಅವರ ಕೆಲಸಕ್ಕೆ ಸಹಕರಿಸಬೇಕು ಎಂದರು.
ಐ.ಎನ್.ಓ ರಾಜ್ಯದ್ಯಕ್ಷರಾದ ಡಾ.ಬಿ.ಟಿ ಚಿದಾನಂದ ಮೂರ್ತಿ ಅವರು ಯೋಗ, ಆಯುರ್ವೇದ, ಹೋಮಿಯೋಪತಿ ಮತ್ತು ಪ್ರಾಕೃತಿಕ ಚಿಕಿತ್ಸಾ ಕ್ಷೇತ್ರದ ಕುರಿತ ತಮ್ಮ ಬೇಡಿಕೆಗಳನ್ನು ಆರೋಗ್ಯ ಸಚಿವರಾದ ದಿನೇಶ ಗುಂಡುರಾವ ಅವರ ಮಂಡಿಸಿದರು ಸಚಿವರು ಕೂಡ ಸಕರಾತ್ಮಕವಾಗಿ ಸ್ಪಂದಿಸಿದರು.
ವಿಚಾರ ಸಂಕಿರಣದ ಅದ್ಯಕ್ಷತೆಯನ್ನು ನಾಡೋಜ ಡಾ.ವೂಡೆ ಕೃಷ್ಣ ವಹಿಸಿದ್ದರು ಡಾ.ವೆಂಕಟಾಚಲಪತಿ, ಡಾ.ರಾಜಶೇಖರ್, ಡಾ.ಜಗದೀಶ್ ಮತ್ತು ಡಾ.ವಿಕಾಸ ಕಾಮತ್ ಉಪನ್ಯಾಸ ಮಾಡಿದರು.
ಈ ಸಂದರ್ಭದಲ್ಲಿ ಐ.ಎನ್.ಓ ರಾಜ್ಯ ಪ್ರಧಾನ ಕಾರ್ಯದರ್ಶಿ ಮಂಜುನಾಥ ಸ್ವಾಮಿ, ರಾಜ್ಯ ಕಾರ್ಯದರ್ಶಿ ಯೋಗೆಂದ್ರ ಎದಲಾಪುರೆ ಸೇರಿದಂತೆ ಇತರರಿದ್ದರು.
ಮಂಡ್ಯ: ನಾಗಮಂಗಲ ತಾಲೂಕು ಯರಗಟ್ಟಿ ಗೇಟ್ ಬಳಿ ಶುಕ್ರವಾರ ರಾತ್ರಿ ಅಪಘಾತಕ್ಕೊಳಗಾದ ಸ್ಕಾರ್ಪಿಯೋ ಕಾರಿನಲ್ಲಿ ಮೃತಪಟ್ಟಿರುವ ಹತ್ತಕ್ಕೂ ಹೆಚ್ಚು ಕರುಗಳು…
ಮದ್ದೂರು: ದುಷ್ಕರ್ಮಿಗಳು ದೇವಾಲಯಗಳ ಬಾಗಿಲು ಮುರಿದು ಸರಣಿ ಕಳ್ಳತನ ಮಾಡಿರುವ ಘಟನೆ ತಾಲ್ಲೂಕಿನ ಕೆಸ್ತೂರು ಪೊಲೀಸ್ ಠಾಣೆ ವ್ಯಾಪ್ತಿಯ ಅಡಗನಹಳ್ಳಿ…
ಮೈಸೂರು : ಎನ್‌ಸಿಬಿ ಪೊಲೀಸರು ನಗರದ ಹೆಬ್ಬಾಳು ಕೈಗಾರಿಕಾ ಪ್ರದೇಶದ ರಾಸಾಯನಿಕ ತಯಾರಿಕಾ ಘಟಕದ ಮೇಲೆ ದಾಳಿ ನಡೆಸಿದ ನಂತರ…
ಚಿಕ್ಕಬಳ್ಳಾಪುರ : ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತಾ ಗೌಡ ಅವರಿಗೆ ಬೆದರಿಕೆ ಹಾಕಿದ್ದ ಪ್ರಕರಣದಲ್ಲಿ ಆರೋಪಿ ರಾಜೀವ್ ಗೌಡಗೆ ಜಾಮೀನು…
ಬೆಂಗಳೂರು : ದಕ್ಷಿಣ ಭಾರತದ ಪ್ರಮುಖ ರಿಯಲ್ ಎಸ್ಟೇಟ್ ಕಂಪನಿ ಕಾನ್ಫಿಡೆಂಟ್ ಗ್ರೂಪ್‌ನ ಸ್ಥಾಪಕ ಮತ್ತು ಚೇರ್ಮನ್ ಡಾ.ಸಿ.ಜೆ. ರಾಯ್…
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಇತರ ಸಚಿವರನ್ನು ಗುರಿಯಾಗಿಸಿಕೊಂಡು ‘ಮಾನಹಾನಿಕರ’ ಪೋಸ್ಟ್‌ನ್ನು ಬಿಜೆಪಿಯ ‘ಎಕ್ಸ್’ ಖಾತೆಯಲ್ಲಿ…