ಬೆಂಗಳೂರು:ಪ್ರತಿ ಲೀಟರ್ ಹಾಲಿಗೆ 2 ರೂ. ಹಾಗೂ ಪ್ರತಿ ಕೆಜಿ ಮೊಸರಿಗೆ 2 ರೂಪಾಯಿ ಏರಿಕೆ ಮಾಡಲು ರಾಜ್ಯ ಹಾಲು ಒಕ್ಕೂಟ ನಿರ್ಧರಿಸಿದ್ದು, ಮಧ್ಯರಾತ್ರಿಯಿಂದಲೇ ಪರಿಷ್ಕೃತ ದರ ಜಾರಿಯಾಗಿದೆ.
ಹಾಲು ಒಕ್ಕೂಟದ ಕಚೇರಿಯಲ್ಲಿ ಬುಧವಾರ ನಡೆದ ನಿರ್ದೇಶಕರ ಮಂಡಳಿಯ ಸಭೆಯ ನಂತರ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು. ನಿರ್ದೇಶಕರ ಅಭಿಪ್ರಾಯ ಪಡೆದು ದರ ಹೇರಿಕೆ ಮಾಡಲಾಗಿದೆ. ಕೆಎಂಎಫ್ಗೆ ಒತ್ತಡ ಆದರೂ ರೈತರಿಗೆ 193 ಕೋಟಿ ಕೋಟಿ ಸಬ್ಸಿಡಿ ರೂಪದಲ್ಲಿ ನೀಡಿದ್ದೇವೆ. ನೇರವಾಗಿ ರೈತರಿಗೆ ಈ ಹಣ ನೀಡಲಾಗುತ್ತದೆ ಎಂದರು.
ಭಾರತದಲ್ಲಿ ಹಾಲಿನ ದರದಲ್ಲಿ 8ನೇ ಸ್ಥಾನದಲ್ಲಿ ನಾವಿದ್ದೇವೆ. ದೀಪಾವಳಿ ಸಂದರ್ಭದಲ್ಲಿ ಮಾತ್ರ ತುಪ್ಪದ ಬೆಲೆ ಜಾಸ್ತಿಯಾಗಿತ್ತು. ಅನಿವಾರ್ಯ ಕಾರಣದಿಂದ ಜಾಸ್ತಿ ಮಾಡಿದ್ದು ನಿಜ. ಇನ್ನು ಜಾಸ್ತಿ ಮಾಡಲ್ಲ ಎಂದರು.
ಗ್ರಾಹಕರು ನಮಗೆ ಬೆಂಬಲ ನೀಡಬೇಕು. ರೈತರಿಗೆ ಅನುಕೂಲ ಆಗಬೇಕು. 77 ಲಕ್ಷ ಲೀಟರ್ ಹಾಲು ಬರುತ್ತಿದೆ. 27 ಲಕ್ಷ ಲೀಟರ್ನಷ್ಟು ಹಾಲು ಪೌಡರ್ ಆಗುತ್ತಿದೆ. ಅದರ ಹಣ ನಿಧಾನವಾಗುತ್ತೆ 50 ಲಕ್ಷ ಲೀಟರ್ ಹಾಲಿನ ಹಣ ಕೂಡಲೇ ಸಿಗುತ್ತದೆ ಎಂದರು. ಕ್ಷೀರಭಾಗ್ಯ ಯೋಜನೆಯಡಿ ಪ್ರತಿನಿತ್ಯ 8 ಲಕ್ಷ ಲೀಟರ್ ಹಾಲು ನೀಡುತ್ತಿದ್ದೇವೆ. ಸಾಮಾನ್ಯ ದರಕ್ಕಿಂತ ಕಡಿಮೆ ದರಕ್ಕೆ ನೀಡಲಾಗುತ್ತಿದೆ.ಇದರಿಂದ ತಿಂಗಳಿಗೆ ಸುಮಾರು 10 ಕೋಟಿ ನಷ್ಟ ಆಗುತ್ತಿದೆ ಎಂದು ತಿಳಿಸಿದರು.