ಬೆಂಗಳೂರು: ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ವಿರುದ್ಧ ಪುತ್ರ ಶ್ರವಣ್ ನಕಲಿ ಸಹಿ ಮಾಡಿರುವುದಾಗಿ ಆರೋಪಿಸಿ ಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ್ದು ಲಿಖಿತ ಆಫಿಡವಿಟ್ ಸಲ್ಲಿಸುವಂತೆ ಆದೇಶ ನೀಡಿದೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ವಿಚಾರಣೆ ನಡೆಸಿದ 19ನೇ ಸೇಷನ್ಸ್ ಕೋರ್ಟ್ ಸಿ.ಪಿ.ಯೋಗೇಶ್ವರ್ ಪರ ವಕೀಲರಿಗೆ ಲಿಖಿತ ಉತ್ತರ ನೀಡಲು ಸೂಚಿಸಿದೆ. ಬಳಿಕ ಸಿ.ಪಿ.ಯೋಗೇಶ್ವರ್ ಅವರು ಲಿಖಿತ ದಾಖಲೆಯ ಆಫಿಡವಿಟ್ ಸಲ್ಲಿಸುವಂತೆ ಆದೇಶ ನೀಡಿದೆ.
ಏನಿದು ಪ್ರಕರಣ?
ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಅವರ ಮೊದಲ ಪತ್ನಿ ಮಂಜುಳಾ ಹಾಗೂ ಪುತ್ರ ಶ್ರವಣ್ ಎರಡೂವರೆ ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಮನೆ ಖರೀದಿ ಮಾಡಿದ್ದು, ಆ ಮನೆ ಇಬ್ಬರ ಹೆಸರಿನಲ್ಲಿ ನೋಂದಣಿಯಾಗಿತ್ತು. ಬಳಿಕ ಆ ಮನೆಯನ್ನು ಪುತ್ರಿ ನಿಶಾ ಯೋಗೇಶ್ವರ್‌ಗೆ ಉಡುಗೊರೆಯಾಗಿ ನೀಡಿದ್ದರು. ಇದಾದ ಮೇಲೆ 2024ರ ಅಕ್ಟೋಬರ್‌ನಲ್ಲಿ ನಮ್ಮ ತಂದೆಯ ಪಿಎ ಮೂಲಕ ಒಂದು ಡ್ರಾಫ್ಟ್ ಬಂದಿದ್ದು, ಆ ಡ್ರಾಫ್ಟ್‌ಗೆ ನನ್ನ ಅನುಮತಿ ಇಲ್ಲದೆ ನಕಲಿ ಸಹಿ ಹಾಕಿ ಆ ಮನೆಯ ಬಗ್ಗೆ ಪಾಲು ಕೇಳಿರುವಂತೆ ಕೇಸ್ ದಾಖಲಿಸಿದ್ದಾರೆ ಎಂದು ದೂರು ನೀಡಿದ್ದಾರೆ.
ಈ ದೂರಿನ್ವಯ ನಾನು ಕೋರ್ಟ್ ಮೊರೆ ಹೋಗಿದ್ದು, ನಾನು ಯಾವುದೇ ಸಹಿ ಮಾಡಿಲ್ಲ. ನಾನು ಆ ಮನೆಯಲ್ಲಿ ಯಾವುದೇ ಭಾಗವನ್ನು ಕೇಳಿಲ್ಲ ಎಂದು ಶ್ರವಣ್ ಸ್ಪಷ್ಟಪಡಿಸಿದ್ದರು.
ಮಂಡ್ಯ: ೮೭ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಹಿನ್ನೆಲೆ ಗುರುವಾರ ಸಂಜೆ ನಗರಕ್ಕೆ…
ಬೆಳಗಾವಿ: ಸುವರ್ಣ ಸೌಧದಲ್ಲಿ ಗುರುವಾರ ನಡೆದ ವಿಧಾನ ಪರಿಷತ್ ಕಲಾಪದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ…
ಬೆಳಗಾವಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅವಾಚ್ಯ ಪದ ಬಳಕೆ ಮಾಡಿರುವ ಬಗ್ಗೆ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿಯವರ ವಿರುದ್ಧ…
ಮೈಸೂರು: ಸಂಸತ್‌ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಅವಮಾನ ಎಸಗಿರುವುದನ್ನು ಖಂಡಿಸಿ ಮೈಸೂರು ವಿಶ್ವವಿದ್ಯಾನಿಲಯದ…
ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಬಗ್ಗೆ ಬಿಜೆಪಿ ಎಂಎಲ್‌ಸಿ ಸಿ.ಟಿ. ರವಿ…
ಬೆಳಗಾವಿ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಕ್ಷೇಪಾರ್ಹ ಹೇಳಿಕೆ ಖಂಡಿಸಿ ಕಾಂಗ್ರೆಸ್…