ಮೈಸೂರು: ದೇಶದಲ್ಲೇ ಹೆಚ್ಚು ಭದ್ರತೆ ಇರುವ ಸಂಸತ್ ಭವನದಲ್ಲಿ, ಭದ್ರತಾಲೋಪದಿಂದ ನಿನ್ನೆ ನಡೆದ ಘಟನೆ ಸಂಬಂಧಿಸಿದಂತೆ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರನ್ನು ಈ ಕೂಡಲೆ ಸಂಸದ ಸ್ಥಾನದಿಂದ ವಜಾಗೊಳಿಸಬೇಕು ಎಂದು ಬಿಜೆಪಿ ಎಂಎಲ್‌ಸಿ ಹೆಚ್.ವಿಶ್ವನಾಥ್ ಆಗ್ರಹಿಸಿದ್ದಾರೆ.
ಘಟನೆ ಬಗ್ಗೆ ಆಂದೋಲನ ಪತ್ರಿಕೆಗೆ ಪ್ರತಿಕ್ರಿಯೆ ನೀಡಿದ ಹೆಚ್.ವಿಶ್ವನಾಥ್, ನಿನ್ನೆ ಸಂಸತ್‌ನಲ್ಲಿ ನಡೆದ ಘಟನೆ ಖಂಡನೀಯ. ದೇಶದಲ್ಲೇ ಅತೀ ಹೆಚ್ಚು ಭದ್ರತೆ ಇರುವ ಸ್ಥಳದಲ್ಲೇ ಭದ್ರತಾಲೋಪವಾಗಿರುವುದು ವಿಪರ್ಯಾಸ ಎಂದಿದ್ದಾರೆ.
ಜವಬ್ಧಾರಿಯುತ ಸಂಸತ್ ಸದಸ್ಯರು ಯಾರಿಗೆ ಪಾಸ್ ನೀಡಬೇಕು ಎಂಬುದರ ಬಗ್ಗೆ ಸರಿಯಾದ ರೀತಿಯಲ್ಲಿ ತೀರ್ಮಾನ ಕೈಗೊಳ್ಳದಿದ್ದರೇ ಏನೆಲ್ಲಾ ಅನಾಹುತಗಳು ಆಗಬಹುದು ಎಂಬುದಕ್ಕೆ ನಿನ್ನೆ ನಡೆದ ಘಟನೆಯೇ ಸಾಕ್ಷಿ. ನಮ್ಮೂರಿನವರೇ ಆದಂತ ಸಂಸದ ಪ್ರತಾಪ್ ಸಿಂಹ, ಪಾಸ್ ನೀಡುವಂತ ಸಂದರ್ಭದಲ್ಲಿ ಅವರ ಪೂರ್ವಪರಗಳನ್ನು ತಿಳಿದಿರಬೇಕು .ನಾನೂ ಕೂಡ ಒಬ್ಬ ಸಂಸತ್ ಸದಸ್ಯನಾಗಿ ಕೆಲಸ ಮಾಡಿದವನು, ಒಬ್ಬ ಸಂಸತ್ ಸದಸ್ಯನಿಗೆ, ಸಂಸತ್‌ಗೆ ಭೇಟಿ ನೀಡುವವರಿಗೆ ಪಾಸ್ ನೀಡುವ ಅಧಿಕಾರವನ್ನು ನೀಡಲಾಗಿದೆ.
ಆದರೇ ಆ ಅಧಿಕಾರವನ್ನು ಸರಿಯಾಗಿ ಉಪಯೋಗ ಮಾಡಿಕೊಳ್ಳಬೇಕು. ಅದನ್ನು ಬಿಟ್ಟು ಎಲ್ಲರಿಗೂ ಒಳಗೆ ಪ್ರವೇಶ ನೀಡಿದರೆ ಏನೆಲ್ಲಾ ಅನಾಹುತವಾಗಹುದು ಎಂಬುದಕ್ಕೆ ಇದೇ ಸಾಕ್ಷಿ. ಈ ಕೂಡಲೇ ಸಂಸದ ಪ್ಎಂರತಾಪ್ದ ಸಿಂಹ ಅವರನ್ರುನು ಸಂಸದ ಸ್ಥಾನದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.
ಪ್ರತಾಪ್ ಸಿಂಹಗೆ ಪರಿಚಯಸ್ಥ ಹುಡುಗ:
ನಿನ್ನೆ ಸಂಸತ್‌ನಲ್ಲಿ ನಿರ್ಮಾಣವಾದ ಆತಂಕಕಾರಿ ಘಟನೆಯ ಆರೋಪಿಯಾಗಿರುವ ಮೈಸೂರಿನ ಹುಡುಗ ಮನೋರಂಜನ್ ಸಂಸದ ಪ್ರತಾಪ್ ಸಿಂಹ ಅವರಿಗೆ ತೀರ ಹತ್ತಿರದ ಒಡನಾಡಿ. ಈ ಬಗ್ಗೆ ಮನೋರಂಜನ್ ತಂದೆಯೇ ಹೇಳಿಕೆ ನೀಡಿದ್ದಾರೆ. ಆ ಹುಡುಗನ ನಡವಳಿಕೆ ಬಗ್ಗೆ ಪ್ರತಾಪ್ ಸಿಂಹರಿಗೆ ಚೆನ್ನಾಗಿಯೇ ತಿಳಿದಿರುತ್ತದೆ. ಒಂದು ವೇಳೆ ಪ್ರತಾಪ್ ಸಿಂಹ ಆ ಹುಡುಗ ಪರಿಚಯ ಇಲ್ಲ ಎಂದರೇ ಅದು ಶುದ್ಧ ಸುಳ್ಳು ಎಂದರು.
ಸಂಸತ್‌ನಲ್ಲಿ ಅಧಿಕಾರಿಗಳ ಸಮಸ್ಯೆ: ಭದ್ರತೆಗೆ ಸಂಬಂಧಿಸಿದಂತೆ ಸಂಸತ್ ಭವನದಲ್ಲಿ ಕೆಳ ಹಂತದ ಅಧಿಕಾರಿಗಳ ಕೊರತೆ ಇದೆ. ಮೇಲಧಿಕಾರಿಗಳು ಹೆಚ್ಚಾಗಿದ್ದಾರೆ ಹೊರತು ಕೆಳಹಂತದ ಅಧಿಕಾರಿಗಳು ಕಡಿಮೆ. ಕಾಯುವವರಿಗಿಂತಾ, ಕಾಯುವವರನ್ನು ಕಾಯುವ ಅಧಿಕಾರಿಗಳಿದ್ದಾರೆ. ಭದ್ರತಾಲೋಪಕ್ಕೆ ಇದೂ ಒಂದು ಕಾರಣವಾಗಿದೆ ಎಂದು ಹೆಚ್.ವಿಶ್ವನಾಥ್ ಆರೋಪಿಸಿದರು
ಸರ್ಕಾರದ ಮೇಲೆ ಜನರಿಗೆ ಅಪನಂಬಿಕೆ: ಈ ರೀರತಿಯ ಘಟನೆಗಳು ಪದೇ ಪದೇ ಆಗಿದ್ದರೂ ಮತ್ತೆ ಅದೇ ತಪ್ಪುಗಳನ್ನು ಮಾಡುತ್ತಿದ್ದೇವೆ. ಸಾವಿರಾರು ಕೋಟಿ ಕರ್ಚು ಮಾಡಿ ಕಟ್ಟಿರುವ ನೂತನ ಸಂಸತ್ ಭವನವನ್ನು ಇಂತಹ ಮನಸ್ಥಿತಿ ಇರುವ ಯುವಕರು ಒಂದು ವೇಳೆ ಒಡೆದು ಹಾಕಿದರೆ, ಸಂಸತ್ ಭವನವನ್ನೇ ರಕ್ಷಣೆ ಮಾಡದಂತ ಸರ್ಕಾರ ಭಾರತೀಯರಿಗೆ ಯಾವ ರೀತಿ ರಕ್ಷಣೆ ನೀಡುತ್ತದೆ ಎಂಬ ಪ್ರಶ್ನೆ ಜನರಲ್ಲಿ ಮೂಡುತ್ತದೆ. ಈಗಾಗಲೇ ಆ ರೀತಿಯ ಪ್ರಶ್ನೆ ಜನರಲ್ಲಿ ಮೂಡಿದೆ ಎಂದರು.
ಶ್ರೀರಂಗಪಟ್ಟಣ : ಸಿಗರೇಟ್ ಮತ್ತು ತಂಬಾಕು ಉತ್ಪನ್ನಗಳ ಸೇವನೆಯಿಂದ ಕ್ಯಾನ್ಸರ್, ಹೃದಯ, ಶ್ವಾಸಕೋಶ ಸಂಬಂಧಿತ ಮಾರಣಾಂತಿಕ ಕಾಯಿಲೆಗಳು ಬರುತ್ತವೆಂದು ಕ್ಷೇತ್ರ…
ಹೊಸದಿಲ್ಲಿ : ದೇಶದ ಎಲ್ಲ ನಗರಗಳ ರಸ್ತೆಗಳಲ್ಲಿ ಆಂಬ್ಯುಲೆನ್ಸ್‌ಗಳ ಸಂಚಾರಕ್ಕಾಗಿ ಪ್ರತ್ಯೇಕ ಮೀಸಲು ಮಾರ್ಗಗಳನ್ನು ಒದಗಿಸುವಂತೆ ಸಮಾಜವಾದಿ ಪಕ್ಷದ ಸಂಸದೆ…
ಗುಂಡ್ಲುಪೇಟೆ : ಜಾನುವಾರು ಹಾಗೂ ಜಾನುವಾರು ಮೇಯಿಸುತ್ತಿದ್ದ ರೈತರೊಬ್ಬರ ಮೇಲೆ ಹುಲಿ ದಾಳಿ ನಡೆಸಿದೆ. ಪರಿಣಾಮ ರೈತ ಗಾಯಗೊಂಡಿದ್ದಾನೆ. ಘಟನೆ…
ಮೈಸೂರು : ರಾಜ್ಯದ ಪ್ರತಿಯೊಂದೂ ಜಿಲ್ಲೆಗಳ ವಿಶೇಷ ಉತ್ಪನ್ನಗಳ ಪರಿಚಯ, ಮಾರಾಟಕ್ಕೆ ಅವಕಾಶ ಕಲ್ಪಿಸಿಕೊಡುವ ಉದ್ದೇಶದಿಂದ ಕೇಂದ್ರ ಸರ್ಕಾರ ನಿರ್ಮಿಸುತ್ತಿರುವ…
ಬೆಳಗಾವಿ : ದ್ವೇಷ ಭಾಷಣಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದ್ದು, ಈ…
ಮೈಸೂರು : ಮೈಸೂರು ವಿಶ್ವವಿದ್ಯಾನಿಲಯಕ್ಕೆ ಫ್ರಾನ್ಸ್ ದೇಶದ ರಾಯಭಾರಿಗಳ ನಿಯೋಗ ಭೇಟಿ ನೀಡಿ ಫ್ರೆಂಚ್ ಭಾಷೆ ವಿಭಾಗವನ್ನು ಮರು ಆರಂಭಿಸುವ…