ಬೆಂಗಳೂರು : ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ 1 ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯ ವೇಳಾಪಟ್ಟಿಯನ್ನು ಬುಧವಾರ ಪ್ರಕಟಿಸಲಾಗಿದೆ.
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯು ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಅಧಿಕೃತವಾಗಿ ಪ್ರಕಟಿಸಿದೆ ವೇಳಾಪಟ್ಟಿಯ ಪ್ರಕಾರ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಮಾರ್ಚ್ 23ರಿಂದ ಏಪ್ರಿಲ್ ೨ರವರೆಗೆ ನಡೆಯುಲಿದ್ದು, ಇನ್ನು ಪಿಯುಸಿ ಪರೀಕ್ಷೆ-೧ರ ಪರೀಕ್ಷೆಗಳು 2026 ರ ಫೆಬ್ರವರಿ ೨೮ರಿಂದ ಮಾರ್ಚ್ 17ರ ವರೆಗೆ ನಡೆಯಲಿ. ಹಾಗೆ ಪಿಯುಸಿ ಪರೀಕ್ಷೆ-೨ ಏಪ್ರಿಲ್ 25ರಿಂದ ಮೇ೯ರವರೆಗೂ ನಡೆಯಲಿವೆ.
2026ನೇ ಸಾಲಿನ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿ.ಯು.ಸಿ. ಪರೀಕ್ಷೆ-೧ ಮತ್ತು ಪರೀಕ್ಷೆ-೨ ರ ಅಂತಿಮ ವೇಳಾಪಟ್ಟಿಯನ್ನು ಮಂಡಲಿಯ ಜಾಲತಾಣದಲ್ಲಿ ಪ್ರಕಟಿಸಲಾಗಿದೆ. ರಾಜ್ಯದ ಎಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರುಗಳು ಹಾಗೂ ಪ್ರೌಢಶಾಲಾ ಮುಖ್ಯ ಶಿಕ್ಷಕರು ತಮ್ಮ ಶಾಲಾ, ಕಾಲೇಜುಗಳ ಪ್ರಕಟಣಾ ಫಲಕದಲ್ಲಿ (ನೋಟಿಸ್ ಬೋರ್ಡ್ ) ವೇಳಾಪಟ್ಟಿಯನ್ನು ಪ್ರಕಟಿಸಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲು ತಿಳಿಸಿದೆ ಪರೀಕ್ಷಾ ಮಂಡಳಿ ತಿಳಿಸಿದೆ.
ಇದನ್ನು ಓದಿ: ಗೇಟ್ ಪರೀಕ್ಷೆ ಒಂದು; ಅವಕಾಶಗಳು ಹಲವು
ಎಸ್‌ಎಸ್‌ಎಲ್‌ಸಿ ವೇಳಾಪಟ್ಟಿ
ಮಾರ್ಚ್ 18 (ಪ್ರಥಮ ಭಾಷೆ)- ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್, ಸಂಸ್ಕೃತ
ಮಾರ್ಚ್ 23- ವಿಜ್ಞಾನ, ರಾಜ್ಯಶಾಸ್ತ್ರ, ಹಿಂದೂಸ್ಥಾನಿ ಸಂಗೀತ, ಕರ್ನಾಟಕ ಸಂಗೀತ
ಮಾರ್ಚ್ 25 (ದ್ವಿತೀಯ ಭಾಷೆ) ಇಂಗ್ಲಿಷ್, ಕನ್ನಡ
ಮಾರ್ಚ್ 28 ಗಣಿತ, ಸಮಾಜಶಾಸ್ತ್ರ
ಮಾರ್ಚ್ 30(ತೃತೀಯ ಭಾಷೆ) ಹಿಂದಿ, ಕನ್ನಡ, ಇಂಗ್ಲಿಷ್, ಅರೇಬಿಕ್, ಉರ್ದು, ಸಂಸ್ಕೃತ, ಕೊಂಕಣಿ, ತುಳು, ಮರಾಠಿ
ಏಪ್ರಿಲ್ 01 ಅರ್ಥಶಾಸ್ತ್ರ, ಎಲಿಮೆಂಟ್ಸ್ ಆಫ್ ಎಲೆಕ್ಟ್ರಿಕಲ್ ಇಂಜಿನಿಯರ್, ಎಲಿಮೆಂಟ್ಸ್ ಆಫ್ ಮೆಕ್ಯಾನಕಲ್ ಇಂಜಿನಿಯರ್,
ಏಪ್ರಿಲ್ 2- ಸಮಾಜ ವಿಜ್ಞಾನ
ಪಿಯುಸಿ ಪರೀಕ್ಷೆ 1
28-2-2026- ಕನ್ನಡ, ಅರಬಿಕ್
2-3-26-ಭೂಗೋಳಶಾಸ್ತ್ರ, ಮನಶಾಸ್ತ್ರ, ಸಂಖ್ಯಾಶಾಸ್ತ್ರ
3-3-26- ಇಂಗ್ಲಿಷ್
4-3-26- ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್
5 -3-26- ಇತಿಹಾಸ
6-3-26-ಭೌತಶಾಸ್ತ್ರ
7-3-26-ಐಚ್ಛಿಕ ಕನ್ನಡ, ವ್ಯವಹಾರ ಅಧ್ಯಯನ, ಭೂಗರ್ಭಶಾಸ್ತ್ರ
9-3-26- ರಸಾಯನಶಾಸ್ತ್ರ, ಶಿಕ್ಷಣಶಾಸ್ತ್ರ, ಮೂಲಗಣಿತ
10-3-26- ಅರ್ಥಶಾಸ್ತ್ರ
11-3-26- ತರ್ಕಶಾಸ, ವಿದ್ಯುನ್ಮಾನ ಶಾಸ್ತ್ರ, ಗೃಹವಿಜ್ಞಾನ
12-3-26-ಹಿಂದಿ
13-3-26-ರಾಜ್ಯಶಾಸ್ತ್ರ
14-3-26- ಲೆಕ್ಕಶಾಸ್ತ್ರ, ಗಣಿತ
16-3-26- ಸಮಾಜಶಾಸ್ತ್ರ, ಜೀವಶಾಸ್ತ್ರ, ಗಣಕವಿಜ್ಞಾನ
17-3-26- ಹಿಂದೂಸ್ಥಾನಿ ಸಂಗೀತ, ಆಟೋಮೊಬೈಲ್, ಆರೋಗ್ಯ ರಕ್ಷಣೆ, ಬ್ಯೂಟಿ ಅಂಡ್ ವೆಲ್‌ನೆಸ್
ಪಿಯುಸಿ ಪರೀಕ್ಷೆ 2
ಏಪ್ರಿಲ್ 25-2026: ಕನ್ನಡ, ಅರಬಿಕ್
ಏಪ್ರಿಲ್ 27-2026: ಐಚ್ಚಿಕ ಕನ್ನಡ, ತರ್ಕಶಾಸ್ತ್ರ, ಲೆಕ್ಕಶಾಸ್ತ್ರ, ಜೀವಶಾಸ್ತ್ರ
ಏಪ್ರಿಲ್ 28-2026: ರಾಜ್ಯಶಾಸ್ತ್ರ, ವಿದ್ಯುನ್ಮಾನ ಶಾಸ್ತ್ರ, ಗಣಕ ವಿಜ್ಞಾನ
ಏಪ್ರಿಲ್ 29: ಗಣಿತ, ಗೃಹ ಗಣಿತ, ಮೂಲ ವಿಜ್ಞಾನ
ಏಪ್ರಿಲ್ 30: ಅರ್ಥಶಾಸ್ತ್ರ
ಮೇ 2: ಇತಿಹಾಸ, ರಸಾಯನಶಾಸ್ತ್ರ
ಮೇ 4: ಇಂಗ್ಲಿಷ್
ಮೇ 5: ಹಿಂದಿ
ಮೇ 6: ವ್ಯವಹಾರ ಅಧ್ಯಯನ, ಭೌತಶಾಸ್ತ್ರ, ಶಿಕ್ಷಣ ಶಾಸ್ತ್ರ
ಮೇ 7: ಸಮಾಜ ಶಾಸ್ತ್ರ, ಸಂಖ್ಯಾಶಾಸ್ತ್ರ
ಮೇ 8: ಮನಶಾಸ್ತ್ರ, ಭೂಗೋಳ ಶಾಸ್ತ್ರ, ಭೂಗರ್ಭ ಶಾಸ್ತ್ರ
ಮೇ 9: ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್
ಬೆಂಗಳೂರು: ಲೋಕ್ ಅದಾಲತ್‌ನಲ್ಲಿ ಗಾಂಜಾ ಆರೋಪದ ಕೇಸುಗಳನ್ನು ಸೆಟಲ್ ಮಾಡಲಾಗುತ್ತದೆಯೇ ಎಂದು ಹೈಕೋರ್ಟ್ ತೀವ್ರ ಆಶ್ಚರ್ಯ ವ್ಯಕ್ತಪಡಿಸಿದೆ. ಗಾಂಜಾ ಮಾರಾಟದ…
ಮಡಿಕೇರಿ: ಅನಧಿಕೃತವಾಗಿ ವಾಹನದ ಸ್ವರೂಪ ಬದಲಾಯಿಸಿಕೊಂಡು ಕರ್ಕಶ ಶಬ್ಧದ ಸೈಲೆನ್ಸರ್ ಅಳವಡಿಸಿಕೊಂಡು ಸಾರ್ವಜನಿಕರಿಗೆ ಭಾರೀ ಕಿರಿಕಿರಿ ಮಾಡುತ್ತಿದ್ದ ಜಿಪ್ಸಿ ವಾಹನವೊಂದನ್ನು…
ಹಾಸನ: ಪುಂಡರಿಬ್ಬರು ವ್ಹೀಲಿಂಗ್ ಮಾಡಿ ವಾಹನ ಸವಾರರಿಗೆ ಕಿರಿಕಿರಿ ಉಂಟು ಮಾಡಿರುವ ಘಟನೆ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಮುದುಡಿ ರಸ್ತೆಯಲ್ಲಿ…
ಚಿಕ್ಕಮಗಳೂರು: ಚಾರ್ಮಾಡಿ ಅರಣ್ಯದಲ್ಲಿ ಭಾರೀ ಬೆಂಕಿ ಅನಾಹುತವಾಗಿದ್ದು, ಸೂಕ್ಷ್ಮ ಹುಲ್ಲುಗಾವಲು ಬೆಂಕಿಯಲ್ಲಿ ಭಸ್ಮವಾಗಿದೆ. ಮೂಡಿಗೆರೆ ತಾಲ್ಲೂಕಿನ ಕೊಟ್ಟಿಗೆಹಾರ ಸಮೀಪವಿರುವ ಚಾರ್ಮಾಡಿ…
ವಿರಾಜಪೇಟೆ: ಟಿಪ್ಪರ್ ಮೇಲೆ ಮಣ್ಣು ಕುಸಿದು ಚಾಲಕ ಮೃತಪಟ್ಟಿದ್ದು, ಮತ್ತೋರ್ವ ಕಾರ್ಮಿಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ವಿರಾಜಪೇಟೆಯ ಕದನೂರಿನಲ್ಲಿ ನಡೆದಿದೆ.…
ಕುಶಾಲನಗರ: ಪುರಸಭೆ ವ್ಯಾಪ್ತಿಯ ಎರಡನೇ ವಾರ್ಡ್‌ನ ನಿಂಗೇಗೌಡ ಬಡಾವಣೆಯ ರಸ್ತೆಯ ಕಾಮಗಾರಿ ಉದ್ಘಾಟನೆಗೆ ಬಂದ ಶಾಸಕರು ಕಾಮಗಾರಿ ವೀಕ್ಷಿಸಿ ಅತೃಪ್ತಗೊಂಡು…