ಮಂಡ್ಯ: ಮಂಡ್ಯ ಸಬ್ ರಿಜಿಸ್ಟ್ರಾರ್ ಕಚೇರಿ ಮತ್ತೆ ಲಂಚಬಾಕತನಕ್ಕೆ ಹೆಸರುವಾಸಿಯಾಗಿದೆ. ಹೀಗಾಗಿ ಇಂದು ಮಂಡ್ಯ ಸಬ್ ರಿಜಿಸ್ಟ್ರಾರ್ ಕಚೇರಿ ಮುಂದೆ ರೈತಪರ ಸಂಘಟನೆಯಿಂದ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗಿದೆ.
ಮಂಡ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಹೀಗಾಗಿ ಇದಕ್ಕೆ ಬೇಸತ್ತ ರೈತರು ಮಂಡ್ಯ ಸಬ್ ರಿಜಿಸ್ಟ್ರಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ನೋಂದಣಿ ವಿಚಾರಕ್ಕೆ ಸಬ್ ರಿಜಿಸ್ಟ್ರಾರ್ ರುಕ್ಮಿಣಿ ಲಂಚ ಪಡೆದಿದ್ದಾರೆಂದು ರೈತ ಸಂಘಟನೆಗಳು ಆರೋಪಿಸುತ್ತಿವೆ. ಪ್ರತಿ ಕೆಲಸಕ್ಕೆ ಕಂಪ್ಯೂಟರ್ ಆಪರೇಟರ್ ಗೆ ಇಂತಿಷ್ಟು ಹಣ ಕೊಡ್ಲೆ ಬೇಕು ಎಂದು ಚೆನ್ನಿ ಎಂಬುವವರು ಉಪ ನೋಂದಣಾಧಿಕಾರಿ ಕಚೇರಿ ಸಿಬ್ಬಂದಿ ಮೇಲೆ ಗಂಭೀರ ಆರೋಪ ಮಾಡಿದ್ದಾರೆ.
ಇನ್ನು ರೈತ ಸಂಘಟನೆಗಳ ಆರೋಪಕ್ಕೆ ಸಬ್ ರಿಜಿಸ್ಟ್ರಾರ್ ರುಕ್ಮುಣಿ ಸ್ಪಷ್ಟನೆ ನೀಡಿದ್ದಾರೆ. ನಾವು ಯಾರ ಬಳಿಯೂ ಲಂಚ ಪಡೆದಿಲ್ಲ ಇದೆಲ್ಲ ಬ್ರೋಕರ್ ಗಳ ಕೆಲಸವೆಂದು ಜಾರಿಕೊಂಡಿದ್ದಾರೆ. ನಾವು ಯಾರ ಬಳಿಯೂ ಲಂಚವನ್ನ ಹಣವನ್ನ ಪಡೆದಿಲ್ಲ. ಯಾರು ಯಾರಿಗೆ ಹಣಕೊಟ್ಟಿದ್ದಾರೆಂಬುದು ಗೊತ್ತಿಲ್ಲ ಅವರು ಹೆಸರನ್ನ ಸಹ ಹೇಳದೆ ಆರೋಪಿಸುತ್ತಿದ್ದಾರೆ. ನಾವು ನಾಮ ಫಲಕವನ್ನೆ ಹಾಕಿದ್ದೇವೆ ನೇರ ಸಂಪರ್ಕ ಮಾಡಿ ಎಂದು ಆದ್ರೆ ಯಾರು ನೇರವಾಗಿ ಬರೋದಿಲ್ಲ ಇದು ಸಮಸ್ಯೆ. ನಮ್ಮ ಹೆಸರನ್ನ ಹೇಳಿ ಕೊಂಡು ಬ್ರೋಕರ್ ಗಳು ಹಣ ಪಡೆಯುತ್ತಿದ್ದಾರೆ. ಅಂತವರು ಯಾರು ಅಂತ ತಿಳಿದು ಬಂದ್ರೆ ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳಲಾಗುವುದೆಂದು ಉಪ ನೊಂದಣಾಧಿಕಾರಿ ರುಕ್ಮಿಣಿ ಟಿವಿ9 ಗೆ ಪ್ರತಿಕ್ರಿಯೆ ನೀಡಿದ್ರು.
ಮತ್ತೊಂದು ಕಡೆ ಈ ಬಗ್ಗೆ ದೂರುದಾರ ಚೆನ್ನಿ ಕೂಡ ತಮ್ಮ ಆರೋಪಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಮಂಡ್ಯದ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಏನೇ ಕೆಲಸ ಆಗ್ಬೇಕು ಅಂದ್ರೆ ಹಣವನ್ನ ಕೊಡ್ಲೇ ಬೇಕು. ಕಂಪ್ಯೂಟರ್ ಆಪರೇಟರ್ ರಿಂದ ಇಡ್ಕೊಂಡು ಸಬ್ ರಿಜಿಸ್ಟ್ರಾರ್ ವರ್ಗೂ ಪ್ರತಿಯೊಬ್ರಿಗೂ ಲಂಚ ಕೊಡ್ಬೇಕು 300 ರೂಪಾಯಿ ಲಂಚ ಕೊಟ್ರೆ ಅಷ್ಟೇ ಕೆಲಸ ಆಗುತ್ತೆ ಇಲ್ಲಾಂದ್ರೆ ಆಗೋಲ್ಲ. ನೋಂದಣಿ ಮಾಡಿಸುವುದರಿಂದ ಹಿಡಿದು ಪ್ರತಿಯೊಂದಕ್ಕು ಹಣ ಕೊಟ್ಟು ಸಾಕಾಗಿದೆ ಇಂತವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಚೆನ್ನಿ ಆರೋಪಿಸಿದ್ದಾರೆ.