ಸಿಎಪಿಸಿ ವರದಿ ವಿರುದ್ಧ ರೈತಸಂಘ ಆಕ್ರೋಶ

ಮಳವಳ್ಳಿ: ರೈತರು ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಸರಬರಾಜು ವಾಡಿದ ನಂತರ ಕಾರ್ಖಾನೆ ವಾಲೀಕರು 3 ಕಂತುಗಳಲ್ಲಿ ಹಣ ಪಾವತಿಸಬಹುದೆಂದು ಪ್ರಸ್ತಾವನೆ ಸಲ್ಲಿಸಿರುವ ಕೇಂದ್ರದ ಕೃಷಿ ವೆಚ್ಚಗಳು ಮತ್ತು ಬೆಲೆಗಳ ಆೋಂಗ (ಸಿಎಸಿಪಿ)ದ ಶಿಫಾರಸ್ಸು ರೈತ ವಿರೋಧಿಯಾಗಿದ್ದು, ಸಕ್ಕರೆ ಕಂಪೆನಿಗಳ ಲಾಬಿಗೆ ಕೇಂದ್ರ ಸರ್ಕಾರ ಮಣಿದಿದೆ. ಇದನ್ನು ತಿರಸ್ಕರಿಸಿ 14 ದಿನಗಳೊಳಗೆ ಹಣ ಪಾವತಿ ವಾಡಬೇಕೆಂದು ಕರ್ನಾಟಕ ಕಬ್ಬು ಬೆಳೆಗಾರರ ಸಂಘ ಮತ್ತು ಕರ್ನಾಟಕ ಪ್ರಾಂತ ರೈತ ಸಂಘ ಒತ್ತಾಯಿಸಿದೆ.

ಮಳವಳ್ಳಿಯ ಪ್ರಾಂತ ರೈತ ಸಂಘದ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ವಾತನಾಡಿದ ಕರ್ನಾಟಕ ಕಬ್ಬು ಬೆಳೆಗಾರರ ಸಂಘದ ರಾಜ್ಯ ಸಂಚಾಲಕರಾದ ಎನ್.ಎಲ್.ಭರತ್‌ರಾಜ್ ಕೃಷಿ ವೆಚ್ಚಗಳು ಮತ್ತು ಬೆಲೆಗಳ ಆೋಂಗ (ಸಿಎಸಿಪಿ) ಕೇಂದ್ರ ಸರ್ಕಾರ ಘೋಷಿಸಿದ ಎಫ್‌ಆರ್‌ಪಿ ಬೆಲೆಗಳಿಗೆ ಅನುಗುಣವಾಗಿ ಸಕ್ಕರೆ ಕಾರ್ಖಾನೆಗಳು ರೈತರ ಕಬ್ಬಿಗೆ ಮೂರು ಕಂತುಗಳಲ್ಲಿ ಹಣ ಪಾವತಿಸಬಹುದು. ಹಾಗೂ ಇದು ಪ್ರಸ್ತುತ 2021-22ನೇ ಸಾಲಿನಿಂದ ಜಾರಿಗೆ ಬರಬಹುದೆಂದು ತಿಳಿಸಿದೆ. ಇದು ರೈತರ ಹಿತಾಸಕ್ತಿಗೆ ವಾರಕವಾಗಿದ್ದು, ಕಾರ್ಪೋರೇಟ್ ಕಂಪೆನಿಗಳ ಪರವಾದ ಶಿಫಾರಸ್ಸಾಗಿದೆ. ಇದನ್ನು ಎಲ್ಲರೂ ತಿರಸ್ಕರಿಸಬೇಕು ಎಂದು ಒತ್ತಾಯಿಸಿದರು.

ಸಹಕಾರ ಸಂಘಗಳಲ್ಲಿ ರೈತರು ಪಡೆದ ಬೆಳೆ ಸಾಲವನ್ನು 12 ತಿಂಗಳೊಳಗೆ ಮರು ಪಾವತಿಸಿದರೆ ಬಡ್ಡಿುಂ ರಿಾಂಯಿತಿ ಇರುತ್ತದೆ. ಆದರೆ ಬೆಲೆ ಆೋಂಗದಂತೆ ಹಣ ಪಾವತಿ ವಿಳಂಬವಾದರೆ ರೈತರಿಗೆ ಬಡ್ಡಿ ರಹಿತ ಸಾಲ ಪಡೆುಂಲು ಸಾಧ್ಯವಾಗುವುದಿಲ್ಲ. ಹಣಕ್ಕಾಗಿ ಕನಿಷ್ಠ ೬ ತಿಂಗಳಾದರೂ ಬೇಕಾಗುತ್ತದೆ. ಮೊದಲ ಕಂತಿನ ಹಣ ಕಟಾವು ವೆಚ್ಚ ಸಾಗಾಣಿಕೆ ವೆಚ್ಚ ಇತರ ಖರ್ಚಿಗೆ ಮುಗಿದು ಹೋಗುತ್ತದೆ. ಸಾಲ ಮರುಪಾವತಿಗೆ ಹಾಗೂ ಮುಂದಿನ ಕೃಷಿ ವೆಚ್ಚಕ್ಕೆ ರೈತರ ಬಳಿ ಹಣವಿರುವುದಿಲ್ಲ. ರಸಗೊಬ್ಬರ, ಕ್ರಿಮಿನಾಶಕ, ಬಿತ್ತನೆ ಇತರೆ ಆಳುಕಾಳುಗಳ ವೆಚ್ಚವೂ ದುಬಾರಿಾಂದ ಕಾರಣ ಒಂದು ಟನ್ ಕಬ್ಬಿಗೆ ೩,೨೦೦ ರಿಂದ ೩,೩೦೦ ರೂ.ಗಳಷ್ಟು ಖರ್ಚು ಬರುತ್ತದೆ. ಆದರೆ ಒಂದು ಟನ್ ಕಬ್ಬಿಗೆ ಕೇವಲ 2,750 ರೂ.ಗಳನ್ನು ನಿಗಧಿಗೊಳಿಸಿ ರೈತರಿಗೆ ವಂಚಿಸುತ್ತಿದ್ದಾರೆಂದು ರೈತರು ಕಿಡಿಕಾರಿದರು.

ಸಿಎಸಿಪಿ ಶಿಫಾರಸ್ಸನ್ನು ಕೇಂದ್ರ ಸರ್ಕಾರ ತಿರಸ್ಕರಿಸಬೇಕು. ದೇಶದಲ್ಲಿ ರೈತರ ಕಬ್ಬಿನ ಬಾಕಿ ಹಣ 23 ಸಾವಿರ ಕೋಟಿ ರೂ. ಪಾವತಿಸಲು ಕೇಂದ್ರ, ರಾಜ್ಯ ಸರ್ಕಾರಗಳು ಸಕ್ಕರೆ ವಾಲೀಕರ ಮೇಲೆ ಒತ್ತಡ ತರಬೇಕು ಎಂದು ಒತ್ತಾಯಿಸಿದರು.

ಪ್ರಾಂತ ರೈತ ಸಂಘದ ಕಾರ್ಯದರ್ಶಿ ಎನ್.ಲಿಂಗರಾಜಮೂರ್ತಿ, ಕಬ್ಬು ಬೆಳೆಗಾರರ ಸಂಘದ ಮುಖಂಡರಾದ ಪ್ರವೀಣ್, ಕೆ.ಪಿ.ಧ್ರುವ, ನಾಗೇಗೌಡ, ಪೇಟೆ ಶಿವಣ್ಣ, ಸಿದ್ದರಾಜು, ಮರಿಲಿಂಗ್ಂಯು, ಮಹಾದೇವ ಸ್ವಾಮಿ, ಶಿವಕುವಾರ್, ನಾಗೇಶ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

 

 

× Chat with us