ಬೆಳಗಾವಿ: ನಗರದ ಜ್ಯೋತಿ ಕಾಲೇಜಿನಲ್ಲಿ ನಡೆಯುತ್ತಿರುವ ಮತ ಎಣಿಕೆ ಪ್ರಕ್ರಿಯೆಯಲ್ಲಿ ಸಿಕ್ಕಿರುವ ಹೆಚ್ಚುವರಿ 2 ಮತಗಳು ಗೊಂದಲ ಉಂಟುಮಾಡಿದೆ.
ಹೌದು ಎರಡು ಪದವೀಧರ ಹಾಗೂ ಎರಡು ಶಿಕ್ಷಕರ ಕ್ಷೇತ್ರಗಳಿಗೆ ಜೂನ್ 13ರಂದು ನಡೆದ ಚುನಾವಣೆಯ ಮತ ಎಣಿಕೆ ಕಾರ್ಯ ನಡೆಯುತ್ತಿದ್ದು ಇದರಲ್ಲಿ ಅಧಿಕಾರಿಗಳು ಮರು ಮತ ಎಣಿಕೆ ಮಾಡಿದರು ಸಹ ಹೆಚ್ಚುವರಿಯಾಗಿ ಎರಡು ಮತಗಳು ಬಂದಿದೆ. ಪಶ್ಚಿಮ ಶಿಕ್ಷಕರ ಕ್ಷೇತ್ರದ ಒಟ್ಟು 77 ಮತಗಟ್ಟೆಗಳ ಮತಪೆಟಗೆ ತೆರೆದು ಮತ ಎಣಿಕೆ ಮಾಡಲಾಗಿತ್ತು. ಈ ವೇಳೆ ಹುಬ್ಬಳ್ಳಿಯ ರೋಟರಿ ಶಾಲೆ ಮತಗಟ್ಟೆಯಲ್ಲಿ ಹೆಚ್ಚುವರಿ ಮತಗಳು ಸಿಕ್ಕಿದೆ ಎಂದು ತಿಳಿದುಬಂದಿದೆ. 757 ಮತಗಳು ಚಲಾವಣೆಗೊಂಡಿದ್ದರೆ, 759 ಮತಪೆಟ್ಟಿಗೆಯಲ್ಲಿ ಪತ್ತೆಯಾಗಿವೆ.
ಈ ಬಗ್ಗೆ ಅಭ್ಯರ್ಥಿಗಳು ಆಕ್ಷೇಪ ವ್ಯಕ್ತಪಡಿಸಿದಾಗ ಅಧಿಕಾರಿಗಳು ಮತಎಣಿಕೆ ಮಾಡಿದರೂ ಸಹ ಎರಡು ಮತಗಳು ಹೆಚ್ಚಿಗೆ ಬಂದಿದೆ ಇದರಿಂದ ಅಧಿಕಾರಿಗಳು ಅಲ್ಲಿನ ಮತಗಳ ಸಂಖ್ಯೆಯನ್ನು 759 ಎಂದೇ ದಾಖಲಿಸಿದ್ದಾರೆ.