ಬೆಂಗಳೂರು : ಸರ್ಕಾರದ ಅನುಮತಿಯನ್ನು ಪಡೆಯದೆ ದಾಖಲಾತಿ ಮಾಡಿಕೊಂಡಿರುವ ಸುಮಾರು 980 ಶಾಲೆಗಳಿಗೆ ಬೀಗಮುದ್ರೆ ಬೀಳುವ ಆತಂಕ ಎದುರಾಗಿದೆ.
2022-23 ರ ಶೈಕ್ಷಣಿಕ ವರ್ಷದ ಮಾನ್ಯತೆ ಅವಧಿ ಮುಕ್ತಾಯ ಅಥವಾ ಮಾನ್ಯತೆ ಇಲ್ಲದೆ ನಡೆಸುತ್ತಿರುವ ಶಾಲೆಗಳನ್ನು ಕಾನೂನು ಬಾಹಿರ ಎಂದು ಘೋಷಣೆ ಮಾಡುವಂತೆ ಬಿಇಒ ಗಳಿಗೆ ಸೂಚನೆಯನ್ನು ನೀಡಲಾಗಿದೆ.
ಶಿಕ್ಷಣ ಸಂಸ್ಥೆಗಳು ಹೊಸದಾಗಿ ಶಾಲೆಯನ್ನು ಪ್ರಾರಂಭವನ್ನು ಮಾಡಲು 2022-23ನೇ ಸಾಲಿಗೆ ಅರ್ಜಿಯನ್ನು ಸಲ್ಲಿಕೆಯನ್ನು ಮಾಡಿದ್ದವು. ಆದರೆ ಶಿಕ್ಷಣ ಇಲಾಖೆ ಅನುಮತಿಯನ್ನು ನೀಡುವ ಮೊದಲೇ ಅದೆಷ್ಟೋ ಶಾಲೆಗಳು ದಾಖಲಾತಿ ಪ್ರಕ್ರಿಯೆಯನ್ನೇ ಮುಗಿಸಿವೆ.
ಹೊಸದಾಗಿ ಅರ್ಜಿಯನ್ನು ಸಲ್ಲಿಸಿರುವ 980ಕ್ಕೂ ಹೆಚ್ಚು ಖಾಸಗಿ ಶಾಲೆಗಳು ಇದರಿಂದ ಅತಂತ್ರವಾಗಿವೆ. ಇದರಲ್ಲಿ ಕೆಲವು ಶಾಲೆಗಳಿಗೆ ಬರುವ ದಿನಗಳಲ್ಲಿ ಅನುಮತಿಯು ಸಿಗಬಹುದು. ಇನ್ನು ಕೆಲವು ಶಾಲೆಗಳಿಗೆ ನಿಯಮ ಉಲ್ಲಂಘನೆಯಡಿ ಅನುಮತಿಯನ್ನು ನಿರಾಕರಿಸಲುಬಹುದು. ಅನುಮತಿ ನಿರಾಕರಿಸದರೆ ಅಂತಹ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಶೈಕ್ಷಣಿಕ ಜೀವನವು ಅತಂತ್ರವಾಗಲಿದೆ. ಅಂದಾಜಿನ ಪ್ರಕಾರ 980 ಶಾಲೆಯ 30000 ಸಾವಿರ ವಿದ್ಯಾರ್ಥಿಗಳಿಗೆ ಸಂಕಷ್ಟ ಎದುರಾಗಲಿದೆ ಎನ್ನಲಾಗುತ್ತಿದೆ.
ಶಿಕ್ಷಣ ಇಲಾಖೆಯು ಅನುಮತಿಯನ್ನು ನೀಡುವ ಮೊದಲೇ ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳು ದಾಖಲಾತಿಯನ್ನು ಮಾಡಿಕೊಂಡಿವೆ. ಮೇ ಮತ್ತು ಜೂನ್ ತಿಂಗಳಲ್ಲಿ ದಾಖಲಾತಿಯನ್ನು ಮಾಡಿಕೊಂಡಿರುವ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳ ಜೀವನದಲ್ಲಿ ಚೆಲ್ಲಾಟವನ್ನು ಆಡಲು ಹೊರಡಿವೆ. ಇದರಿಂದಾಗಿ ಎಚ್ಚೆತ್ತ ಶಿಕ್ಷಣ ಇಲಾಖೆ ಇಂತಹ ಶಾಲೆಗಳನ್ನು ಸಮೀಪದ ಪೊಲೀಸರಿಗೆ ದೂರು ನೀಡಿ ಮುಚ್ಚಿಸಲು ಮುಂದಾಗಿದೆ.
ಜುಲೈ23: ಖಾಸಗಿ ಶಾಲೆಗಳಿಗೆ ಅನುಮತಿಯನ್ನು ನೀಡಲು ಆನ್ಲೈನ್ ನಲ್ಲಿ ಶಿಕ್ಷಣ ಇಲಾಖೆ ಅರ್ಜಿಯನ್ನು ಆಹ್ವಾನಿಸಲಾಗಿತ್ತು. ಜುಲೈ 25ರವರೆಗೆಗೂ ಅವಕಾಶವನ್ನು ಕಲ್ಪಿಸಲಾಗಿತ್ತು. ಈ ನಡುವೆ ಹೊಸದಾಗಿ ಅರ್ಜಿಯನ್ನು ಸಲ್ಲಿಸಿರುವ 980ಕ್ಕೂ ಖಾಸಗಿ ಶಿಕ್ಷಣ ಸಂಸ್ಥೆಗಳು ಅತಂತ್ರವಾಗುವ ಹಂತವನ್ನು ತಲುಪಿವೆ.
ಶಾಲೆಗಳು ಅರ್ಜಿಯನ್ನು ಸಲ್ಲಿಸಿದ ಮಾತ್ರಕ್ಕೆ ಶಾಲೆಗಳಿಗೆ ಅನುಮತಿಯನ್ನು ನೀಡಬೇಕೆಂದಿಲ್ಲ. ಶಾಲೆಗಳು ಅರ್ಜಿಯನ್ನು ಸಲ್ಲಿಸುವ ವೇಳೆಯಲ್ಲಿ ವಿದ್ಯಾರ್ಥಿಗಳನ್ನು ದಾಖಲೆಯನ್ನು ಮಾಡಿಕೊಳ್ಳಲು ಅನುಮತಿಯನ್ನು ನೀಡಿರುವುದಿಲ್ಲ. ಶಿಕ್ಷಣ ಇಲಾಖೆಯಿಂದ ಮಾನ್ಯತೆ ದೊರೆಯಬೇಕಾದರೆ ಇಲಾಖೆಯ ಎಲ್ಲಾ ನಿಯಮವನ್ನು ಪಾಲಿಸಿರಬೇಕಾಗುತ್ತದೆ.
ಆ ನಿಯಮ ಪರಿಪಾಲನೆಯ ಪರಿಶೀಲನೆಯ ಬಳಿಕವಷ್ಟೇ ಶಾಲೆಗೆ ಮಾನ್ಯತೆಯನ್ನು ನೀಡಬೇಕೋ ಬೇಡವೋ ಎಂಬುದನ್ನು ತೀರ್ಮಾನವನ್ನು ಮಾಡಲಾಗುತ್ತದೆ. ಆದರೆ ಅನುಮತಿ ಸಿಗುವ ಮೊದಲೇ ಶಾಲೆಗಳು ತೆರೆಯಲಾಗಿದ್ದ ಅಂತಹ ಶಿಕ್ಷಣ ಸಂಸ್ಥೆ ಅತಂತ್ರವಾಗಲಿವೆ.
ಅನಧಿಕೃತ ಶಾಲೆಯನ್ನು ಮುಚ್ಚಿಸುವಂತೆ ಆದೇಶ.
ಶಿಕ್ಷಣ ಇಲಾಖೆಯ ಆದೇಶದಿಂದ ಹೊಸ ಶಾಲೆಗೆ ಭೀತಿ
ಶಿಕ್ಷಣ ಇಲಾಖೆ ಅಥವಾ ಕೇಂದ್ರ ಇಲಾಖೆಗಳಿಂದ ಅನುಮತಿಯನ್ನು ಪಡೆಯದೆ ಶಾಲೆಯನ್ನು ನಡೆಸುವಂತಿಲ್ಲ. ಅಂತಹ ಶಾಲೆಗಳು ಗಮನಕ್ಕೆ ಬಂದರೇ ಪೋಷಕರಿಗೆ ಅನಧಿಕೃತ ಶಾಲೆಯ ಬಗ್ಗೆ ಸ್ಥಳೀಯ ಪತ್ರಿಕೆಯಲ್ಲಿ ಸ್ಥಳೀಯವಾಗಿ ಅನಧಿಕೃತ ಶಾಲೆ ಎಂಬುದನ್ನು ಪ್ರಕಟಿಸಬೇಕು. ಅನಧಿಕೃತ ಶಾಲೆಯಲ್ಲಿ ವ್ಯಾಸಂಗ ಮಾಡಿದ ಮಕ್ಕಳಿಗೆ ಶೈಕ್ಷಣಿಕ ಉದ್ದೇಶಕ್ಕಾಗಿ ಅಧಿಕೃತ ಮಾನ್ಯತೆ ನೀಡಲು ಬರುವುದಿಲ್ಲ.
ಮಕ್ಕಳ ಶೈಕ್ಷಣಿಕ ಭವಿಷ್ಯ ಹಾಳಾಗುವ ಉದ್ದೇಶದಿಂದ ಸ್ಥಳೀಯ ಪೊಲೀಸ್ ಠಾಣೆಗೆ ಸಿಆರ್ಪಿ, ಬಿಆರ್ಪಿ, ಶಿಕ್ಷಣ ಸಂಯೋಜಕರೇ ದೂರನ್ನು ನೀಡುವ ಮೂಲಕ ಅನಧಿಕೃತ ಶಾಲೆಯನ್ನು ಮುಚ್ಚುವ ಕೆಲಸವನ್ನು ಮಾಡಬೇಕು ಎಂದು ಆದೇಶಿಸಲಾಗಿದೆ. ಆ ಮೂಲಕ ಶಿಕ್ಷಣ ಇಲಾಖೆ ಅನಧಿಕೃತ ಸಂಸ್ಥೆಯನ್ನು ಮುಚ್ಚಿಸುವ ಕೆಲಸಕ್ಕೂ ಮುಂದಾಗಿದೆ.
ಅರ್ಜಿ ಸಲ್ಲಿಸಲು ಜುಲೈ 25 ರವರೆಗೆ ಆನ್ಲೈನ್ ನಲ್ಲಿ ಅವಕಾಶ ನೀಡಲಾಗಿತ್ತು ಇದಕ್ಕಾಗಿ ಕೊನೆಯ ಅವಕಾಶ ಎಂಬಂತೆ ಶಿಕ್ಷಣ ಇಲಾಖೆ ಜುಲೈ 19 ರಂದು ಸುತ್ತೋಲೆ ಹೊರಡಿಸಿತ್ತು. ಈ ನಡುವೆ ಶಿಕ್ಷಣ ಇಲಾಖೆ ಇನ್ನೊಂದು ಆದೇಶವನ್ನು ಹೊರಡಿಸಿದೆ.
ಶಿಕ್ಷಣ ಸಂಸ್ಥೆಯನ್ನು ಪ್ರಾರಂಭಿಸಲು ಜನವರಿಯಲ್ಲೇ ಅರ್ಜಿಯನ್ನು ಆಹ್ವಾನಿಸಲಾಗುತ್ತದೆ. 2022-23ನೇ ಸಾಲಿಗೆ ಎಂದೇ ಅರ್ಜಿಯನ್ನು ಆಹ್ವಾನಿಸಲಾಗುತ್ತದೆ. ಅರ್ಜಿಯನ್ನು ಸಲ್ಲಿಸುವ ವೇಳೆ ಕಟ್ಟಡ ಹೊಂದಿರಬೇಕು, ಅಗ್ನಿಸುರಕ್ಷತೆ, ಲೋಕೋಪಯೋಗಿ ಇಲಾಖೆಯ ಬಿಲ್ಡಿಂಗ್ ಸೆಫ್ಟಿ ಪತ್ರ, ಶಾಲೆಗೆ ಬೇಕಾಗಿರುವ ಡೆಸ್ಕ್, ಮೇಜು ಸೇರಿದಂತೆ ಪೀಠೋಪಕರಣ, ಆಟೋಪಕರಣ, ವಾಹನ, ಶೌಚಾಲಯ, ನೀರಿನ ವ್ಯವಸ್ಥೆ ಹೀಗೆ ಎಲ್ಲ ಸೌಲಭ್ಯವನ್ನು ಸರಿಮಾಡಿಕೊಂಡು ಅರ್ಜಿಯನ್ನು ಹಾಕಬೇಕಾಗಿರುತ್ತದೆ.