ರಾಜ್ಯ

ಕುಡಿದ ಅಮಲಿನಲ್ಲಿ ಕಟ್ಟಡದಿಂದ ತಳ್ಳಿ ಸ್ನೇಹಿತನ ಕೊಲೆ

ಬೆಂಗಳೂರು : ಕುಡಿದ ಅಮಲಿನಲ್ಲಿ ಇಬ್ಬರು ಸ್ನೇಹಿತ ನಡುವೆ ಗಲಾಟೆ ನಡೆದಿದ್ದು, ಓರ್ವ ಸ್ನೇಹಿತ ತನ್ನ ಸ್ನೇಹಿತನನ್ನ ಕಟ್ಟಡದಿಂದ ತಳ್ಳಿ ಕೊಲೆ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ.

ವಿಶಾಲ್‌ ಯಾದವ್‌ ಕೊಲೆಯಾದ ಯುವಕನಾಗಿದ್ದು, ಅಭಿಷೇಕ್ ಎಂಬಾತ ಕೊಲೆ ಮಾಡಿದ ಆರೋಪಿಯಾಗಿದ್ದಾನೆ. ಉತ್ತರ ಪ್ರದೇಶ ಮೂಲದ ಇಬ್ಬರು ತಲಘಟ್ಟಪುರದ ಅಂಜನಾಪುರದಲ್ಲಿ ನಿರ್ಮಾಣ ಹಂತದ ಕಟ್ಟದಲ್ಲಿ ದಿನಗೂಲಿ ನೌಕರರಾಗಿ ಕೆಲಸ ಮಾಡುತ್ತಿದ್ದರು. ನಿನ್ನೆ ರಾತ್ರಿ ಪಾರ್ಟಿ ಮಾಡುವ ವೇಳೆ ಘಟನೆ ಸಂಭವಿಸಿದ್ದು, ತಲಘಟ್ಟಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ಪರಾರಿಯಾಗಿರುವ ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಸವಿತಾ ಆಕಾಂಕ್ಷ್‌

ಮೂಲತಃ ಮೈಸೂರು ಜಿಲ್ಲೆಯ ಗೆಜ್ಜಗಳ್ಳಿ ಗ್ರಾಮದ ನಿವಾಸಿಯಾಗಿರುವ ನಾನು ಮೈಸೂರಿನ ಜೆಎಸ್‌ ಎಸ್‌ ಕಾಲೇಜಿನಲ್ಲಿ ಪದವಿ ಪಡೆದುಕೊಂಡಿದ್ದೇನೆ. ಬಳಿಕ ಮೈಸೂರಿನ ಸ್ಥಳೀಯ ಮಟ್ಟದ ಖಾಸಗಿ ಸುದ್ದಿ ವಾಹಿನಿಗಳಲ್ಲಿ ಹಾಗೂ ಪ್ರಾದೇಶಿಕ ದಿನಪತ್ರಿಕೆಯಲ್ಲಿ ಕೆಲಸ ಮಾಡಿದ್ದು, ಆರೂವರೆ ವರ್ಷಗಳ ಅನುಭವ ಪಡೆದಿದ್ದೇನೆ. ಸದ್ಯ ಮೈಸೂರಿನ ಪ್ರತಿಷ್ಠಿತ ಆಂದೋಲನ ಪತ್ರಿಕೆಯ ಡಿಜಿಟಲ್‌ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕಾಡುಪ್ರಾಣಿಗಳ ರಕ್ಷಣೆ ಮತ್ತು ಅರಣ್ಯ ಸಂರಕ್ಷಣೆ ಹಾಗೂ ವನ್ಯಜೀವಿಗಳ ಅಧ್ಯಯನ ಮಾಡುತ್ತಾ ಹೊಸ ಹೊಸ ವಿಷಯ ತಿಳಿದುಕೊಳ್ಳುವುದರಲ್ಲಿ ನನಗೆ ಆಸಕ್ತಿ ಹೆಚ್ಚಿದೆ. ಸಿಗುವ ಒಂದಷ್ಟು ಸಮಯ ಕುಟುಂಬಸ್ಥರೊಟ್ಟಿಗೆ ಕಾಲ ಕಳೆಯುತ್ತೇನೆ. ಜೊತೆಗೆ ವನ್ಯಜೀವಿಗಳ ಕುರಿತ ಪುಸ್ತಕ ಓದುವುದು ನನ್ನ ಮತ್ತೊಂದು ಹವ್ಯಾಸವಾಗಿದೆ.

Recent Posts

ಚಾಮರಾಜನಗರದಲ್ಲಿ ಬೋನಿಗೆ ಬಿದ್ದ ಹುಲಿ

ಚಾಮರಾಜನಗರ: ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಹುಲಿಗಳ ಉಪಟಳ ಹೆಚ್ಚಾಗಿದ್ದು, ದೇಪಾಪುರ ಗ್ರಾಮದ ಹೊರವಲಯದಲ್ಲಿ ಹುಲಿಯೊಂದು ಬೋನಿಗೆ ಬಿದ್ದಿದೆ. ಹುಲಿಯನ್ನು ನೋಡಲು…

25 mins ago

ರಾಜ್ಯದಲ್ಲಿ ಬೆಳಗಿನ ವೇಳೆ ದಟ್ಟ ಮಂಜು: ಹವಾಮಾನ ತಜ್ಞರು ಹೇಳಿದ್ದಿಷ್ಟು.!

ಬೆಂಗಳೂರು: ರಾಜ್ಯದಲ್ಲಿ ತೀವ್ರ ಚಳಿ, ಶೀತಗಾಳಿಯ ಜೊತೆಗೆ ಬೆಳಗಿನ ವೇಳೆ ಕೆಲವೆಡೆ ದಟ್ಟವಾದ ಮಂಜು ಆವರಿಸುತ್ತಿದೆ. ಬೆಳಗಿನ ವೇಳೆಯಲ್ಲಿ ದಟ್ಟವಾದ…

33 mins ago

ಶಬರಿಮಲೆ ದೇವಸ್ಥಾನದ ಚಿನ್ನ ನಾಪತ್ತೆ ಪ್ರಕರಣ: ಸಿಎಂ ಪಿಣರಾಯಿ ವಿಜಯನ್‌ ಹೇಳಿದ್ದಿಷ್ಟು.!

ತಿರುವನಂತಪುರಂ: ಶಬರಿಮಲೆ ದೇವಸ್ಥಾನದ ಚಿನ್ನ ನಾಪತ್ತೆ ಪ್ರಕರಣದ ಆರೋಪಿಗಳ ಜೊತೆಗೆ ಸೋನಿಯಾ ಗಾಂಧಿ ನಂಟಿದೆ ಎಂದು ಸಿಎಂ ಪಿಣರಾಯಿ ವಿಜಯನ್‌…

1 hour ago

ಬಹುನಿರೀಕ್ಷಿತ ಮಾರ್ಕ್‌ ಹಾಗೂ 45 ಸಿನಿಮಾ ಬಿಡುಗಡೆ

ಸ್ಯಾಂಡಲ್‌ವುಡ್‌ನಲ್ಲಿ ಇಂದು ಕ್ರಿಸ್‌ಮಸ್‌ ಹಬ್ಬದ ಸಡಗರದ ನಡುವೆ ಎರಡು ಬಹುನಿರೀಕ್ಷಿತ ಸಿನಿಮಾಗಳು ಅಬ್ಬರದಿಂದ ತೆರೆಗೆ ಬಂದಿವೆ, ಹ್ಯಾಟ್ರಿಕ್‌ ಹೀರೋ ಶಿವರಾಜ್‌ಕುಮಾರ್‌,…

2 hours ago

ಕಾಡಾನೆಗಳು ಊರಿಗೆ ಬರದಂತೆ ಎಐ ಆಧಾರಿತ ಕ್ಯಾಮರಾ ಅಳವಡಿಕೆ

ಮೈಸೂರು: ಕಾಡಾನೆಗಳು ಊರಿಗೆ ಬರದಂತೆ ಅರಣ್ಯ ಇಲಾಖೆಯು ಎಐ ಆಧಾರಿರ ಕೂಗು ಕ್ಯಾಮರಾವನ್ನು ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿ ಅಳವಡಿಸಿದೆ.…

2 hours ago

ಚಿತ್ರದುರ್ಗದಲ್ಲಿ ಬಸ್‌ ಅಪಘಾತ ಪ್ರಕರಣ: ಮೃತರ ಕುಟುಂಬಸ್ಥರಿಗೆ ತಲಾ 5 ಲಕ್ಷ ಪರಿಹಾರ ಘೋಷಿಸಿದ ಸಿಎಂ ಸಿದ್ದರಾಮಯ್ಯ

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆ ಹಿರಿಯೂರು ಬಳಿ ಸಂಭವಿಸಿದ ಭೀಕರ ಬಸ್‌ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ 5 ಲಕ್ಷ ರೂ…

3 hours ago