ನಮ್ಮ ಮೆಟ್ರೊ ಚಾಲಕರಹಿತ ಮೆಟ್ರೊ ರೈಲನ್ನು ಬೆಂಗಳೂರಿನಲ್ಲಿ ಓಡಿಸಲು ಸಜ್ಜಾಗುತ್ತಿದ್ದು, ಆರ್‌ವಿ ರಸ್ತೆ ಹಾಗೂ ಎಲೆಕ್ಟ್ರಾನಿಕ್ ಸಿಟಿ ನಡುವೆ ಈ ರೈಲು ಸಂಚರಿಸಲಿದೆ. ಚೀನಾದಿಂದ ಬೆಂಗಳೂರಿಗೆ ಈ 6 ಬೋಗಿಗಳುಳ್ಳ ಚಾಲಕರಹಿತ ಮೆಟ್ರೊ ರೈಲನ್ನು ಕಳುಹಿಸಲಾಗಿದ್ದು, ಬಿಎಂಆರ್‌ಸಿಎಲ್ ಅಧಿಕಾರಿಗಳು ಫ್ಯಾಕ್ಟರಿ ಪರೀಕ್ಷೆ ಹಾಗೂ ತಪಾಸಣೆ ನಡೆಸಿದ ಬಳಿಕ ಜನವರಿ 20ರಂದು ಹಡಗಿಗೆ ಲೋಡ್ ಮಾಡಿದ್ದಾರೆ.
ಚಾಲಕರಹಿತ ಮೆಟ್ರೊ ರೈಲು ಹೊತ್ತ ಹಡಗು ಫೆಬ್ರವರಿ ಮಧ್ಯದಲ್ಲಿ ಅಥವಾ ಅಂತ್ಯದ ವೇಳೆಗೆ ಚೆನ್ನೈ ತಲುಪಲಿದ್ದು, ಬಳಿಕ ಚೆನ್ನೈನಿಂದ ರಸ್ತೆ ಮಾರ್ಗದ ಮೂಲಕ ಬೆಂಗಳೂರಿಗೆ ರೈಲನ್ನು ತಂದು ಹೆಬ್ಬಗೋಡಿ ಡಿಪೊಗೆ ಸಾಗಿಸಲಾಗುತ್ತದೆ. ನಂತರ ಈ ರೈಲಿಗೆ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಜೋಡಣೆ ಮಾಡಿ ಸುಮಾರು ಮೂರು ತಿಂಗಳುಗಳ ಕಾಲ ಪ್ರಯೋಗಗಳನ್ನು ನಡೆಸಲಾಗುವುದು.
ಇನ್ನು ಈ ಮೆಟ್ರೊ ರೈಲು ಆರ್‌ವಿ ರಸ್ತೆ ಹಾಗೂ ಎಲೆಕ್ಟ್ರಾನಿಕ್ ಸಿಟಿ ನಡುವಿನ 19 ಕಿಲೊಮೀಟರ್ ಅಂತರದಲ್ಲಿ ಸಂಚರಿಸಲಿದ್ದು ಸೆಪ್ಟೆಂಬರ್ ತಿಂಗಳಲ್ಲಿ ರೈಲಿಗೆ ಚಾಲನೆ ದೊರೆಯುವ ನಿರೀಕ್ಷೆ ಇದೆ. ಈ ರೈಲು ಪ್ರೋಗ್ರಾಂ ಆಧಾರದ ಮೇಲೆ ಚಾಲಕನಿಲ್ಲದಿದ್ದರೂ ಚಲಿಸಲಿದ್ದು, ಕಂಟ್ರೋಲ್ ರೂಮ್‌ನಲ್ಲಿ ನಿಗಾ ವಹಿಸಲಾಗುತ್ತದೆ. ಗಂಟೆಗೆ 80 ಕಿಲೋಮೀಟರ್ ವೇಗದಲ್ಲಿ ಈ ರೈಲು ಓಡಲಿದ್ದು, ಒಂದು ವೇಳೆ ಸಮಸ್ಯೆ ಉಂಟಾದರೆ ಆಪರೇಷನ್ ಕಂಟ್ರೋಲ್ ಸೆಂಟರ್‌ಗೆ ಸಂದೇಶ ರವಾನಿಸಲಿದೆ. ಈ ಮೂಲಕ ತಕ್ಷಣವೇ ರೈಲಿನ ಸಂಚಾರವನ್ನು ನಿಲ್ಲಿಸಲಾಗುತ್ತದೆ.
ಮೈಸೂರು: ಸಕ್ಕರೆ ನಾಡು ಮಂಡ್ಯದಲ್ಲಿ ಇಂದಿನಿಂದ (ಡಿ.20) 87ನೇ ಕನ್ನಡ ಸಾಹಿತ್ಯ ಸಮ್ಮೇಳನ ಶುರುವಾಗಿದೆ. ಆದರೆ ಈ ಸಮ್ಮೇಳನವನ್ನು ಯಾವ…
ಮಂಡ್ಯ: ಹಾಸ್ಯ ಸಾಹಿತ್ಯ ಆಧುನಿಕ ಬದುಕಿನಗೆ ಔಷಧಿಯಾಗಿದೆ ಎಂದು ಪ್ರಾಧ್ಯಾಪಕ ಡಾ.ಜೆ.ಕರಿಯಪ್ಪ ಮಾಳಿಗೆ ಹೇಳಿದರು. 87ಅಖಿಲ ಭಾರತ ಕನ್ನಡ ಸಾಹಿತ್ಯ…
ಮಡಿಕೇರಿ: ಸಿ ಮತ್ತು ಡಿ ಭೂಮಿಗೆ ಸಂಬಂಧಿಸಿದಂತೆ ಕಂದಾಯ ಸಚಿವರು ಉನ್ನತ ಮಟ್ಟದ ಸಮಿತಿ ರಚನೆಗೆ ಮುಂದಾಗಿದ್ದು, ಸಮಸ್ಯೆ ಪರಿಹಾರವಾಗಲಿ…
ಬೆಂಗಳೂರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅಕ್ಷೇಪಾರ್ಹ ಪದ ಬಳಸಿದ್ದಾರೆ ಎಂಬ ಆರೋಪದ ಮೇಲೆ ಎಂಎಲ್‌ಸಿ ಸಿ.ಟಿ.ರವಿಯವರನ್ನು ಪೊಲೀಸರೇ ಕೊಲೆ…
ವಿರಾಜಪೇಟೆ: ಗೋಣಿಕೊಪ್ಪ-ಕೇರಳ ಹೆದ್ದಾರಿಯ ಬಿಟ್ಟಂಗಾಲ ಆಟೋ ನಿಲ್ದಾಣದ ಬಳಿ ಚಿರತೆ ಬೆಕ್ಕೊಂದು ಅಪಘಾತಕೀಡಾಗಿ ಸಾವನಪ್ಪಿದ ಘಟನೆ ಶುಕ್ರವಾರ ರಾತ್ರಿ 9…
ಮೈಸೂರು: ನಟ ದರ್ಶನ್ ಅವರು ಮೈಸೂರಿನ ತಿ.ನರಸೀಪುರ ಮುಖ್ಯರಸ್ತೆಯಲ್ಲಿರುವ ಕೆಂಪಯ್ಯನಹುಂಡಿ ಬಳಿಯ ತಮ್ಮ ಫಾರ್ಮ್‌ಹೌಸ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಶುಕ್ರವಾರ ಇಲ್ಲಿಗ…