ರಾಜ್ಯ

ಚಾಲಕ ಆತ್ಮಹತ್ಯೆ ಪ್ರಕರಣ: ಎಫ್‌ಐಆರ್‌ ರದ್ದು ಕೋರಿ ಹೈಕೋರ್ಟ್‌ ಮೊರೆ ಹೋದ ಸಂಸದ ಕೆ.ಸುಧಾಕರ್‌

ಚಿಕ್ಕಬಳ್ಳಾಪುರ: ಜಿಲ್ಲಾ ಪಂಚಾಯಿತಿ ಸಿಇಓ ಕಾರು ಚಾಲಕ ಬಾಬು ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್‌ ರದ್ದು ಕೋರಿ ಸಂಸದ ಡಾ.ಕೆ.ಸುಧಾಕರ್‌ ಹೈಕೋರ್ಟ್‌ ಮೊರೆ ಹೋಗಿದ್ದಾರೆ.

ಕಳೆದ ಐದು ದಿನಗಳ ಹಿಂದೆ ಜಿಲ್ಲಾ ಪಂಚಾಯಿತಿ ಸಿಇಓ ಕಾರು ಚಾಲಕನಾಗಿದ್ದ ಬಾಬು ಎಂಬಾತ ಜಿಲ್ಲಾ ಪಂಚಾಯಿತಿ ಹಿಂಭಾಗದಲ್ಲಿರುವ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದನು.

ನನ್ನ ಸಾವಿಗೆ ಸಂಸದ ಡಾ.ಕೆ.ಸುಧಾಕರ್‌ ಅವರೇ ಕಾರಣ ಎಂದು ಡೆತ್‌ನೋಟ್‌ನಲ್ಲಿ ಬಾಬು ಉಲ್ಲೇಖಿಸಿದ್ದನು.

ಪ್ರಕರಣ ಸಂಬಂಧ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಸಂಸದ ಸುಧಾಕರ್‌ ವಿರುದ್ಧ ಎಫ್‌ಐಆರ್‌ ದಾಖಲಾಗಿದ್ದು, ಅಟ್ರಾಸಿಟಿ ಕೇಸ್‌ ಕೂಡ ದಾಖಲಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಎಫ್‌ಐಆರ್‌ ರದ್ದು ಕೋರಿ ಸುಧಾಕರ್‌ ಪರ ವಕೀಲರು ಅರ್ಜಿ ಸಲ್ಲಿಸಿದ್ದು, ತುರ್ತು ವಿಚಾರಣೆ ನಡೆಸುವಂತೆ ಮನವಿ ಮಾಡಿದ್ದಾರೆ.

ಆಂದೋಲನ ಡೆಸ್ಕ್

Recent Posts

ಇರಾನ್‌ನ ಭದ್ರತಾ ಮುಖ್ಯಸ್ಥ ಹತ್ಯೆ : ಇಸ್ರೆಲ್‌

ಜೆರುಸಲೆಮ್ : ಇಸ್ರೇಲ್‌ನ ಸೇನಾ ದಾಳಿಯಲ್ಲಿ ಇರಾನ್‌ನ ಹಿರಿಯ ಭದ್ರತಾ ಅಧಿಕಾರಿ ಅಲಿ ಲಾರಿಜಾನಿ ಹತ್ಯೆಯಾದ್ದಾರೆ ಎಂದು ಇಸ್ರೇಲ್‌ ರಕ್ಷಣಾ…

38 mins ago

SSLC EXAM | ನಾಳೆಯಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ

ಬೆಂಗಳೂರು : ನಾಳೆಯಿಂದ ರಾಜ್ಯಾದ್ಯಂತ 2026ರ ಎಸ್ಎಸ್ಎಲ್‌ಸಿ ಪರೀಕ್ಷೆ-1 ಆರಂಭವಾಗಲಿದ್ದು, ಒಟ್ಟು 9,02,899 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ. ಏಪ್ರಿಲ್ 2ರ ವರೆಗೂ…

1 hour ago

ಕಾಬೂಲ್‌ ಆಸ್ಪತ್ರೆ ಮೇಲೆ ಪಾಕ್‌ ದಾಳಿ : 400 ಮಂದಿ ಸಾವು; ಭಾರತ ಖಂಡನೆ

ಕಾಬೂಲ್‌ : ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವಿನ ಗಡಿ ಸಂಘರ್ಷ ಈಗ ಭೀಕರ ಯುದ್ಧಕ್ಕೆ ತಿರುಗಿದ್ದು, ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌…

1 hour ago

ಶಿವಾಲಿಕ್‌ ಬಳಿಕ ಎಲ್‌ಪಿಜಿ ಹೊತ್ತ ನಂದಾದೇವಿ ಹಡಗು ಗುಜರಾತ್‌ಗೆ ಆಗಮನ

ಅಹಮದಬಾದ್‌ : 47,000 ಟನ್ ಎಲ್‌ಪಿಜಿ ಹೊತ್ತ ನಂದಾದೇವಿ ಹಡಗು ಗುಜರಾತ್‌ನ ಕಾಂಡ್ಲಾ ಬಂದರಿಗೆ ಸುರಕ್ಷಿತವಾಗಿ ಇಂದು(ಮಾರ್ಚ್.‌17) ತಲುಪಿರುವುದಾಗಿ ವರದಿಯಾಗಿದೆ.…

2 hours ago

ಇರಾನ್‌ ಹೋರಾಟ ಕಂಡು ಆಘಾತಗೊಂಡೆವು, ಶೀಘ್ರದಲ್ಲೇ ಯುದ್ಧ ನಿಲ್ಲಲಿದೆ : ಡೊನಾಲ್ಡ್ ಟ್ರಂಪ್‌

ವಾಷಿಂಗ್ಟನ್‌ : ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್‌ನ ಪ್ರತೀಕಾರಿ ದಾಳಿಗಳನ್ನು ಕಂಡು "ನಾವು ನಿಜಕ್ಕೂ ಆಘಾತಗೊಂಡಿದ್ದೇವೆ" ಎಂದು…

3 hours ago

ಹೊರ್ಮುಜ್‌ ಜಲಸಂಧಿ | ಮನವಿ ತಿರಸ್ಕರಿಸಿದ ಮಿತ್ರ ರಾಷ್ಟ್ರಗಳು : ಟ್ರಂಪ್‌ಗೆ ಹಿನ್ನಡೆ

ವಾಷಿಂಗ್ಟನ್‌ : ಇರಾನ್ ವಿರುದ್ಧದ ಅಮೆರಿಕಾ-ಇಸ್ರೇಲ್ ಯುದ್ಧದ ಪರಿಣಾಮ ಪ್ರಪಂಚದ ಅತಿ ಮುಖ್ಯ ತೈಲ ಮಾರ್ಗ ಹೊರ್ಮುಜ್‌ ಜಲಸಂಧಿಯ ಮೂಲಕ…

3 hours ago