ರಾಜ್ಯ

ಸೊಸೆಗೆ ವರದಕ್ಷಿಣೆ ಕಿರುಕುಳ ಆರೋಪ: ನಿರ್ದೇಶಕ ಎಸ್.ನಾರಾಯಣ್ ಹಾಗೂ ಕುಟುಂಬದ ವಿರುದ್ಧ ಎಫ್‌ಐಆರ್‌ ದಾಖಲು

ಬೆಂಗಳೂರು: ಕನ್ನಡ ಚಿತ್ರರಂಗದ ನಿರ್ದೇಶಕ ಎಸ್.ನಾರಾಯಣ್‌ ಹಾಗೂ ಅವರ ಕುಟುಂಬದ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಸೊಸೆಗೆ ವರದಕ್ಷಿಣೆ ಕಿರುಕುಳ ನೀಡಿದ ಆರೋಪದ ಮೇರೆಗೆ ಬೆಂಗಳೂರಿನ ಜ್ಞಾನಭಾರತಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಬಗ್ಗೆ ಎಸ್.ನಾರಾಯಣ್‌ ಸೊಸೆ ಪವಿತ್ರ ಗಂಭೀರ ಆರೋಪ ಮಾಡಿದ್ದಾರೆ. ಕಳೆದ 2021ರಲ್ಲಿ ಎಸ್‌.ನಾರಾಯಣ್‌ ಪುತ್ರ ಪವನ್‌ ಹಾಗೂ ಪವಿತ್ರ ಮದುವೆ ಆಗಿದ್ದರು.

ನನ್ನ ಮದುವೆ ಅವಧಿಯಲ್ಲಿ 1 ಲಕ್ಷದ ಉಂಗುರ ಹಾಗೂ ಖರ್ಚು ವೆಚ್ಚದ ಹಣ ಪಡೆದಿದ್ದಾರೆ. ನನ್ನ ಪತಿ ಪವನ್‌ ಓದಿರಲಿಲ್ಲ. ಎಲ್ಲಿಯೂ ಕೂಡ ಕೆಲಸ ಸಿಕ್ಕಿರಲಿಲ್ಲ. ನಾನೇ ಎಲ್ಲಾ ಕೆಲಸ ಮಾಡಿ ಮನೆಯ ಸಂಸಾರ ಸಾಗಿಸುತ್ತಿದ್ದೆ. ಇದರ ನಡುವೆ ಫಿಲ್ಮ್‌ ಇನ್ಸ್‌ಸ್ಟಿಟ್ಯೂಟ್‌ ಕೂಡ ಆರಂಭಿಸಲಾಗಿತ್ತು. ಇದನ್ನು ಶುರು ಮಾಡಲು ಪವನ್‌ ನಮ್ಮ ಬಳಿ ಹಣ ಕೇಳಿದ್ದರು. ಆಗ ನಾವು ಒಡವೆಗಳನ್ನು ಅಟ ಇಟ್ಟು ಹಣ ಕೊಟ್ಟಿದ್ದೆವು. ನಂತರ ಸಂಸ್ಥೆ ನಷ್ಟದಲ್ಲಿ ಮುಳುಗಿತು. ಆಗ ನಾವು 10 ಲಕ್ಷ ರೂ ಹಣವನ್ನು ಪವನ್‌ಗೆ ನೀಡಿದ್ದೆವು. ಇದಾದ ನಂತರವೂ ಪವನ್‌ ಹಾಗೂ ಅವರ ತಂದೆ, ತಾಯಿ ನನಗೆ ವರದಕ್ಷಿಣೆ ತರುವಂತೆ ಕಿರುಕುಳ ನೀಡಿದ್ದರು ಎಂದು ಪವಿತ್ರ ಗಂಭೀರ ಆರೋಪ ಮಾಡಿದ್ದಾರೆ.

ವರದಕ್ಷಿಣೆ ತರುವಂತೆ ನನ್ನನ್ನು ಮನೆಯಿಂದ ಹೊರಹಾಕಿದ್ದಾರೆ ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಆರೋಪ ಪ್ರಕರಣದಲ್ಲಿ ಪವನ್‌ ಮೊದಲ ಆರೋಪಿಯಾಗಿದ್ದು, ಎಸ್.ನಾರಾಯಣ್‌ ಎರಡನೇ ಆರೋಪಿ ಆಗಿದ್ದಾರೆ.

ಆಂದೋಲನ ಡೆಸ್ಕ್

Recent Posts

ಅಯೋಧ್ಯೆ ರಾಮಮಂದಿರಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿ

ಲಕ್ನೋ: ರಾಷ್ಟ್ರಪತಿ ದ್ರೌಪತಿ ಮುರ್ಮು ಅವರು ಅಯೋಧ್ಯೆಯ ರಾಮಮಂದಿರಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಉತ್ತರ ಪ್ರದೇಶದ ರಾಜ್ಯಪಾಲರಾದ…

8 hours ago

ಮುಕ್ತಾಯ ಹಂತಕ್ಕೆ ತಲುಪಿದ ರಾಯ್‌ ಆತ್ಮಹತ್ಯೆ ಪ್ರಕರಣದ ತನಿಖೆ

ಬೆಂಗಳೂರು: ಉದ್ಯಮಿ ಸಿಜೆ ರಾಯ್‌ ಆತ್ಮಹತ್ಯೆ ಪ್ರಕರಣದ ತನಿಖೆ ಬಹುತೇಕ ಮುಕ್ತಾಯದ ಹಂತಕ್ಕೆ ಬಂದಿದ್ದು, ಮುಂದಿನ ವಾರದಲ್ಲಿ ತನಿಖಾ ತಂಡ…

8 hours ago

ರಾಮಚಂದ್ರರಾವ್‌ ರಾಸಲೀಲೆ ಪ್ರಕರಣ: ವಿಡಿಯೋ ಅಸಲಿ ಎಂದ ತನಿಖಾ ತಂಡ

ಬೆಂಗಳೂರು: ಕಚೇರಿಯಲ್ಲಿ ಮಹಿಳೆಯರೊಂದಿಗೆ ರಾಮಚಂದ್ರರಾವ್‌ ಅನುಚಿತ ವರ್ತನೆ ಕುರಿತ ವೈರಲ್‌ ವಿಡಿಯೋಗಳು ಅಸಲಿ ಎಂದು ತನಿಖಾ ತಂಡ ದೃಢಪಡಿಸಿದೆ. ಸಮವಸ್ತ್ರದಲ್ಲಿಯೇ…

9 hours ago

ಮಧ್ಯಪ್ರಾಚ್ಯದಲ್ಲಿ ಬಿಕ್ಕಟ್ಟು ಪರಿಹಾರಕ್ಕೆ ಯತ್ನ: ಮ್ಯಾಕ್ರನ್‌ ಜೊತೆ ಮೋದಿ ಮಾತುಕತೆ

ನವದೆಹಲಿ: ಮಧ್ಯ ಏಷ್ಯಾದಲ್ಲಿ ಬಿಕ್ಕಟ್ಟು ಪರಿಹಾರ ಮಾಡುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಫ್ರಾನ್ಸ್‌ ಅಧ್ಯಕ್ಷ ಎಮ್ಯಾನುಯೆಲ್‌ ಮ್ಯಾಕ್ರನ್‌ ಜೊತೆ…

9 hours ago

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಸಹೋದರಿ ನಿಧನ

ಹಾಸನ: ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಸಹೋದರಿ ಜವರಮ್ಮ ವಯೋಸಹಜ ಖಾಯಿಲೆಯಿಂದ ನಿಧನರಾಗಿದ್ದಾರೆ. ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು.…

11 hours ago

ರಾಜ್ಯದಲ್ಲಿ ಮತ್ತೆರಡು ದಿನ ಅಬ್ಬರಿಸಲಿದ್ದಾನೆ ವರುಣ

ಬೆಂಗಳೂರು: ಕರ್ನಾಟಕದ ಹಲವೆಡೆ ಮುಂದಿನ ಎರಡು ದಿನ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಬೀದರ್‌, ಕಲಬುರ್ಗಿ,…

12 hours ago