ಬಾಗಲಕೋಟೆ: ಯಾವುದೇ ಕಾರಣಕ್ಕೂ ಹಿಂದೂ ದೇವರುಗಳಿಗೆ ಅಪಮಾನ ಮಾಡಬೇಡಿ ಎಂದು ಸಿದ್ದರಾಮಯ್ಯ ವಿರುದ್ಧ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಗರಂ ಆಗಿದ್ದಾರೆ.
ಚೌತಿ ಗಣಪತಿ ಪ್ರಸಾದ ಪರೀಕ್ಷೆ ಮಾಡಿ ವಿತರಣೆ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಿಂದೂ ದೇವರುಗಳಿಗೆ ಅಪಮಾನ ಮಾಡಬೇಡಿ. ಸಿಎಂಗೆ ಯಾಕೆ ಹಿಂದೂಗಳ ಬಗ್ಗೆ ನಿಕೃಷ್ಟ ಭಾವನೆ ಎಂದು ಪ್ರಶ್ನೆ ಮಾಡಿದರು.
ರಾಜ್ಯ ಮಾತ್ರವಲ್ಲ ದೇಶದ ತುಂಬೆಲ್ಲಾ ಗಣಪತಿ ಕೂರಿಸಲಾಗುತ್ತದೆ. ಕಾಂಗ್ರೆಸ್ ಪಕ್ಷ ಹುಟ್ಟೋಕ್ಕಿಂತ ಮುಂಚೆ ದೇಶದಲ್ಲಿ ಗಣಪತಿ ಕೂರಿಸಲಾಗುತ್ತಿದೆ. ಈಗ ಸರ್ಕಾರ ಹೊಸ ವ್ಯವಸ್ಥೆ ಮಾಡಿದೆ ಎಂದು ಕಿಡಿಕಾರಿದರು.
ಪ್ರಸಾದ ಪರೀಕ್ಷೆ ಮಾಡಿ ನೀಡುವ ಕಾನೂನು ತಂದಿದ್ದಾರೆ. ನೀವು ಮಸೀದಿ, ಚರ್ಚ್‌ಗಳಲ್ಲಿ ತಿನ್ನುವ ಪದಾರ್ಥಗಳ ಪರೀಕ್ಷೆ ಮಾಡಿದ್ದೀರಾ ಎಂದು ರಾಜ್ಯ ಸರ್ಕಾರಕ್ಕೆ ಪ್ರಶ್ನೆ ಮಾಡಿದರು.
ನಮ್ಮ ದೇಶದ ಇತಿಹಾಸದಲ್ಲಿ ಕರ್ನಾಟಕದ ಈಗಿನ ರಾಜಕಾರಣ ಬಹಳ ಕೀಳುಮಟ್ಟಕ್ಕೆ ಇಳಿದಿದೆ. ಆಡಳಿತ ಪಕ್ಷ ಭ್ರಷ್ಟಾಚಾರ ಮಾಡಿರುವುದಕ್ಕೆ ವಿರೋಧ ಪಕ್ಷ ಆಪಾದನೆ ಮಾಡೋದು ತಪ್ಪಲ್ಲ. ಈಗಿನ ಸರ್ಕಾರದ ಸ್ಥಿತಿ ನೋಡಿದರೆ ನಾವು ಯಾವುದೇ ಕಾರಣಕ್ಕೂ ರಾಜಕಾರಣಕ್ಕೆ ಬರಬಾರದು ಅಂತ ತೀರ್ಮಾನ ಮಾಡುವ ಸ್ಥಿತಿ ಎದುರಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.
ಮೈಸೂರು : ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಗಳಿಗೆ…
ನವದೆಹಲಿ : ಇಲ್ಲಿನ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎರಡು ವಿಮಾನಗಳ ನಡುವ ಡಿಕ್ಕಿ ಸಂಭವಿಸಿದ್ದು, ಭಾರೀ ಅನಾಹುತ ತಪ್ಪಿದೆ.…
ರಾಯಚೂರು : ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯ ಚಿಲಕಣಡೋಣ ಗ್ರಾಮದ ಸಮೀಪ ಗುರುವಾರ ಬೆಳಗಿನ ಜಾವ ಸಂಭವಿಸಿದ ಭೀಕರ ರಸ್ತೆ…
ಬೆಂಗಳೂರು : ರಾಜ್ಯದ ಐದು ಜಿಲ್ಲೆಗಳನ್ನು ಹೊರತುಪಡಿಸಿ ಬೇರೆ ಎಲ್ಲಾ ಜಿಲ್ಲೆಗಳಲ್ಲಿ ಮುಂಗಾರು ಕೊರತೆಯಾಗುವ ಸಾಧ್ಯತೆಯಿದ್ದು, ಕುಡಿಯುವ ನೀರಿಗೆ ತೊಂದರೆಯಾಗದಂತೆ…
ಟರ್ಕಿ : ಟರ್ಕಿಯ ಕಹ್ರಮನ್ಮರಾಸ್ ಪ್ರಾಂತ್ಯದ ಶಾಲೆಯಲ್ಲಿ 14 ವರ್ಷದ ವಿದ್ಯಾರ್ಥಿಯೊಬ್ಬ ತನ್ನ ತಂದೆಯ (ಮಾಜಿ ಪೊಲೀಸ್ ಅಧಿಕಾರಿ) ಬಂದೂಕನ್ನು…
ಬೆಂಗಳೂರು : ಇಷ್ಟು ವರ್ಷ ನಾಪತ್ತೆ ಆಗಿದ್ದ ನಟ ದರ್ಶನ್ ಮಾಜಿ ಮ್ಯಾನೇಜರ್ ಮಲ್ಲಿಕಾರ್ಜುನ ಅವರು ಈಗ ಮರಳಿ ಬಂದಿದ್ದಾರೆ.…