ಬೆಂಗಳೂರು : ಇಂದು ಬೆಳಿಗ್ಗೆ ಸರ್ಕಾರವು ಪ್ರವಾಸೋದ್ಯಮ, ಪರಿಸರ, ಜೀವಶಾಸ್ತ್ರ ಸಚಿವರಾದ ಆನಂದ್ ಸಿಂಗ್ ಅವರನ್ನು ವಿಜಯನಗರ ಜಿಲ್ಲೆಗೆ ಉಸ್ತುವಾರಿ ಸಚಿವರನ್ನಾಗಿ ನೇಮಿಸಿತ್ತು ಮತ್ತು ಮುಜರಾಯಿ ಇಲಾಖೆ ಸಚಿವೆ ಶಶಿಕಲಾ ಅಣ್ಣಾಸಾಹೇಬ್ ಜೊಲ್ಲೆ ಅವರನ್ನು ಕೊಪ್ಪಳ ಜಿಲ್ಲೆಯ ಉಸ್ತುವಾರಿಯನ್ನಾಗಿ ಆದೇಶವನ್ನು ಹೊರಡಿಸಿತ್ತು.ಇದೀಗ ಸರ್ಕಾರ ಬದಲಾವಣೆ ಆದೇಶ ವಾಪಸ್ ಪಡೆದಿದೆ.
ಕಾರ್ಯಕ್ರಮ ಮತ್ತು ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಸರ್ಕಾರ ಅಧೀನ ಕಾರ್ಯದರ್ಶಿ ಮಾಲತಿ.ಸಿ ಅವರು ಆದೇಶವನ್ನು ಹೊರಡಿಸಿದ್ದಾರೆ.
ಇದಕ್ಕೂ ಮುನ್ನ ಸರ್ಕಾರವು ಪ್ರವಾಸೋದ್ಯಮ, ಪರಿಸರ, ಜೀವಶಾಸ್ತ್ರ ಸಚಿವರಾದ ಆನಂದ್ ಸಿಂಗ್ ಅವರನ್ನು ವಿಜಯನಗರ ಜಿಲ್ಲೆಗೆ ಉಸ್ತುವಾರಿ ಸಚಿವ ಆನಂದ್ ಸಿಂಗ್ ಅವರನ್ನು ಕೊಪ್ಪಳದಿಂದ ವಿಜಯನಗರಕ್ಕೆ ಹಾಗೂ ಮುಜರಾಯಿ ಖಾತೆ ಸಚಿವೆ ಶಶಿಕಲಾ ಜೊಲ್ಲೆ ಅವರನ್ನು ಕೊಪ್ಪಳ ಜಿಲ್ಲೆ ಉಸ್ತುವಾರಿ ಸಚಿವರಾಗಿ ಆದೇಶ ಹೊರಡಿಸಿತ್ತು ಇದೀಗ ಅದನ್ನೆ ಮುಂದುವರಿಯುವಂತೆ ಸರ್ಕಾರ ಹೇಳಿದೆ.