ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ಅಮೆರಿಕಾದಲ್ಲಿರುವಾಗಲೇ ಆ ದೇಶ ಭಾರತೀಯ ನಾಗರೀಕರನ್ನು ತುಚ್ಛವಾಗಿ ನಡೆಸಿಕೊಂಡು, ಕೋಳ ಹಾಕಿ ಭಾರತಕ್ಕೆ ಕಳುಹಿಸಿದ್ದಾರೆ. ಈ ವಿಚಾರ ಗೊತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳದೇ ಮೌನಕ್ಕೆ ಶರಣಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ಸ್ವಯಂಘೋಷಿತ ವಿಶ್ವಗುರು ಮೋದಿಯವರು ಅಮೆರಿಕ ಪ್ರವಾಸದಲ್ಲಿದ್ದಾಗಲೇ 116 ವಲಸಿಗ ಭಾರತೀಯರನ್ನು ಅಮೆರಿಕ ಕೋಳ ಹಾಕಿ ಭಾರತಕ್ಕೆ ಕಳಿಸಿದೆ. ಇದಕ್ಕಿಂತ ನಾಚಿಕೆಗೇಡಿನ ಸಂಗತಿ ಇನ್ಯಾವುದಿದೆ.? ಕಳೆದ ವಾರ 104 ವಲಸಿಗ ಭಾರತೀಯರನ್ನು ಅಮೆರಿಕ, ಕೋಳ- ಸರಪಳಿ ಹಾಕಿ ಕಳಿಸುವ ಮೂಲಕ ಅಮಾನವೀಯವಾಗಿ ವರ್ತಿಸಿತ್ತು. ಈಗ ಮೋದಿಯವರು ಅಮೆರಿಕ ಪ್ರವಾಸದಲ್ಲಿದ್ದ ಸಂದರ್ಭದಲ್ಲೇ ಮತ್ತದೆ ಧಾರ್ಷ್ಟ್ಯ ತೋರಿದೆ. ಇಷ್ಟಾದರೂ ಮೋದಿ ಬಾಬಾ ಮೌನಕ್ಕೆ ಶರಣಾಗಿದ್ದಾರೆ ಎಂದು ಕಿಡಿಕಾರಿದ್ದಾರೆ.
ಮೋದಿಯವರು ಅಮೆರಿಕದಲ್ಲಿರುವಾಗಲೇ ಆ ದೇಶ ಭಾರತೀಯ ನಾಗರಿಕರನ್ನು ತುಚ್ಛವಾಗಿ ನಡೆಸಿಕೊಂಡಿದೆ. ಇದರರ್ಥ ಮೋದಿಯವರನ್ನು ಅಮೆರಿಕ ಲೆಕ್ಕಕ್ಕೇ ಇಟ್ಟಿಲ್ಲ ಎಂದು ಭಾಸವಾಗುತ್ತಿದೆ. ಮೋದಿಯವರು ಮನೆಯಲ್ಲಿ ಹುಲಿ, ಬೀದಿಯಲ್ಲಿ ಇಲಿಯಂತಾದರೆ ಏನು ಪ್ರಯೋಜನ? ಮೋದಿಯವರು ಇನ್ನಾದರೂ ಅಮೇರಿಕದ ಜೊತೆಗಿನ ವಿದೇಶಾಂಗ ನೀತಿ ಬದಲಾಯಿಸುವತ್ತ ಚಿತ್ತ ಹರಿಸಲಿ. ಆದರೆ ಸ್ವಾಭಿಮಾನ ಬಿಟ್ಟು ವರ್ತಿಸಿದರೆ ಅಮೆರಿಕ ಮೋದಿಯವರನ್ನು ಹಾಕು ಮಣೆ-ನೂಕು ಮಣೆ-ಯಾಕೆ ಮಣೆ? ಎಂಬಂತೆ ಸತ್ಕಾರ ಮಾಡುತ್ತದೆ ಎಂದು ಹೇಳಿದ್ದಾರೆ.
ಕೊನೆಗೂ ಘೋಷಣೆಯಾಗಿದೆ ತಾತ್ಕಾಲಿಕ ಕದನ ವಿರಾಮ ತೆರೆಬಿದ್ದಿದೆ ಕೊಲ್ಲಿ ಯುದ್ಧಕೆ ನಿಟ್ಟುಸಿರು ಬಿಟ್ಟಿದೆ ಜನಜಗ! ಸಿಟ್ಟು ಸೆಡವು ಬದಿಗಿರಿಸಿ ನಡೆಯಲಿ…
ಕೊಲ್ಲಿ ಯುದ್ಧದ ನೆಪದಲ್ಲಿ ಬಂಡವಾಳಶಾಹಿಗಳು ಕೆಜಿಗೆ ರೂ. ೮೯ ಇದ್ದ ಆಟೋ ಗ್ಯಾಸ್ ಗ್ಯಾಸ್ ಅನ್ನು ರೂ. ೧೭೦ಕ್ಕೆ ಮಾರುತ್ತಾ…
ಇರಾನ್ ಮೇಲೆ ಇಸ್ರೇಲ್-ಅಮೆರಿಕ ಕಳೆದ ೪೦ ದಿನಗಳಿಂದ ನಡೆಸುತ್ತಿದ್ದ ಯುದ್ಧಕ್ಕೆ ಅಲ್ಪ ವಿರಾಮವನ್ನು ಘೋಷಿಸಲಾಗಿದೆ. ಈ ಯುದ್ಧದಿಂದಾಗಿ ಜಾಗತಿಕ ಆರ್ಥಿಕತೆಯ…
ಮೈಸೂರು ಜಿಲ್ಲೆಯ ಸರಗೂರನ್ನು ತಾಲ್ಲೂಕು ಕೇಂದ್ರವನ್ನಾಗಿ ಘೋಷಿಸಲಾಗಿದ್ದರೂ ಸರಗೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ೧೦೮ ಆಂಬ್ಯುಲೆನ್ಸ್ ಸೌಲಭ್ಯವಿಲ್ಲದೇ ತುರ್ತು ಸಂದರ್ಭದಲ್ಲಿ…
ಹಾಲಿವುಡ್‌ನ ಪ್ರಖ್ಯಾತ ನಿರ್ದೇಶಕ ಚಾಡ್ ಸ್ಟಹೆಲ್ಸ್ಕಿ ನಿರ್ದೇಶನದ john wick" ಸರಣಿ ಚಿತ್ರಗಳಲ್ಲಿನ ಅಂತ್ಯವಿಲ್ಲದ ಶವಗಳ ಎಣಿಕೆ, ಕ್ವೆಂಟಿನ್ ಟರೆಂಟಿನೋ…
ಪ್ರೇಮ್ ನಿರ್ದೇಶನದ ‘ಕೆಡಿ’ ಚಿತ್ರದ ಹಾಡೊಂದು ದೇಶಾದ್ಯಂತ ಸುದ್ದಿ ಮಾಡಿತಷ್ಟೇ. ಅದರ ಪ್ರಸ್ತಾಪ ಲೋಕಸಭೆಯಲ್ಲೂ ಆಯಿತು. ವಾರ್ತಾ ಮತ್ತು ಪ್ರಸಾರ…