ರಾಜ್ಯ

ರಾಜ್ಯದಲ್ಲಿ ಡೀಸೆಲ್‌ ದರ 2 ರೂ. ಏರಿಕೆ

ಬೆಂಗಳೂರು: ಹಾಲು, ವಿದ್ಯುತ್‌ ದರ ಏರಿಕೆ ಬೆನ್ನಲ್ಲೇ ಈಗ ಡೀಸೆಲ್‌ ದರ 2 ರೂ. ಏರಿಕೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಏಪ್ರಿಲ್‌ 1ರ ರಾತ್ರಿಯಿಂದ ರಾಜ್ಯಾದ್ಯಾಂತ ಅನ್ವಯವಾಗುವಂತೆ ಪರಿಷ್ಕೃತ ದರ ಜಾರಿಯಾಗಲಿದೆ.

ರಾಜ್ಯ ಸರ್ಕಾರವು ಡೀಸೆಲ್‌ ಮೇಲಿನ ಮಾರಾಟ ತೆರಿಗೆಯನ್ನು ಶೇ18.44 ರಿಂದ 21.77 ರಷ್ಟಕ್ಕೆ ಏರಿಕೆ ಮಾಡಿ ಆದೇಶಿಸಲಾಗಿದೆ. ಬೆಂಗಳೂರಿನಲ್ಲಿ 89.02ರಷ್ಟು ಇದ್ದ ಡೀಸೆಲ್‌ ಬೆಲೆ 91.02ರಷ್ಟಾಗಲಿದೆ. ಉಳಿದ ಜಿಲ್ಲೆಗಳಲ್ಲಿ ಈಗಿರುವ ದರಕ್ಕೆ ಅನುಗುಣವಾಗಿ ಶೇ. 3.33ರಷ್ಟು ಹೆಚ್ಚಾಗಲಿದೆ.

ದರ ಏರಿಕೆಯ ನಂತರ ಮಾರಾಟ ಬೆಲೆ ಹೆಚ್ಚಳವಾದರೂ ನೆರೆಯ ರಾಜ್ಯಗಳಿಗಿಂತ ಕರ್ನಾಟಕದಲ್ಲಿಯೇ ಡೀಸೆಲ್‌ ಬೆಲೆ ಕಡಿಮೆ ಇರಲಿದೆ ಎಂದು ಸರ್ಕಾರ ತಿಳಿಸಿದೆ.

ಆಂದೋಲನ ಡೆಸ್ಕ್

Recent Posts

ಏಪ್ರಿಲ್.‌10ರಂದು ಬೆಂಗಳೂರಿನಲ್ಲಿ ಮಾಂಸ ಮಾರಾಟ ನಿಷೇಧ

ಬೆಂಗಳೂರು: ಇದೇ ಏಪ್ರಿಲ್.‌10ರಂದು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮಾಂಸ ಮಾರಾಟಕ್ಕೆ ನಿಷೇಧ ಹೇರಲಾಗಿದೆ. ಅಂದು ಮಹಾವೀರ ಜಯಂತಿ…

4 hours ago

ವಕ್ಫ್‌ ಕಾನೂನು ಜಾರಿಗೆ ಅಧಿಸೂಚನೆ

ನವದೆಹಲಿ: ವಕ್ಫ್‌ ತಿದ್ದುಪಡಿ ಕಾಯ್ದೆ ಇಂದಿನಿಂದ ಜಾರಿಯಾಗಲಿದೆ. ಅಧಿಸೂಚನೆ ಪ್ರಕಾರ ಇಂದಿನಿಂದ ಅಧಿಕೃತವಾಗಿ ಜಾರಿಗೆ ಬರಲಿದೆ ಎಂದು ಘೋಷಣೆ ಮಾಡಲಾಗಿದೆ.…

4 hours ago

ಮಿನರಲ್‌ ವಾಟರ್‌ ಬಾಟಲ್‌ ಆರೋಗ್ಯಕ್ಕೆ ಹಾನಿಕರ: ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದ್ದಿಷ್ಟು

ಬೆಂಗಳೂರು: ಮಿನರಲ್‌ ವಾಟರ್‌ ಬಾಟಲ್‌ಗಳಲ್ಲಿಯೂ ಬ್ಯಾಕ್ಟೀರಿಯಾ ಪತ್ತೆಯಾಗಿದ್ದು, ಜನತೆಯಲ್ಲಿ ಆತಂಕ ಮನೆಮಾಡಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌…

5 hours ago

ನಾಳೆ ದಕ್ಷಿಣಕಾಶಿ ನಂಜನಗೂಡಿನಲ್ಲಿ ವಿಜೃಂಭಣೆಯ ಪಂಚ ಮಹಾರಥೋತ್ಸವ

ಮೈಸೂರು: ದಕ್ಷಿಣ ಕಾಶಿ ನಂಜನಗೂಡಿನ ಶ್ರೀಕಂಠೇಶ್ವರಸ್ವಾಮಿ ದೇವಾಲಯಲ್ಲಿ ನಾಳೆ ಪಂಚ ಮಹಾರಥೋತ್ಸವ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಇಂದು ದೇವಸ್ಥಾನದ ಪ್ರಧಾನ…

6 hours ago

ಪ್ರವಾಸಿ ತಾಣವಾಗಿ ವಿಧಾನಸೌಧ: ವೀಕ್ಷಣೆಗೆ ಶುಲ್ಕ

ಬೆಂಗಳೂರು: ವಿಧಾನಸೌಧದಲ್ಲಿ ಟೂರ್‌ ಗೈಡ್‌ ವ್ಯವಸ್ಥೆಗೆ ರಾಜ್ಯ ಸರ್ಕಾರ ನಿರ್ಧರಿಸಿದ್ದು, ವೀಕ್ಷಣೆಗೆ ಪ್ರವಾಸಿಗರಿಂದ ಶುಲ್ಕ ವಸೂಲಿ ಮಾಡಲು ಮುಂದಾಗಿದೆ. ಪ್ರವಾಸೋದ್ಯಮ…

6 hours ago

IPL2025: ಸೂಪರ್‌ ಜೈಂಟ್ಸ್‌ಗೆ ವಿರೋಚಿತ ಜಯ

ಕೊಲ್ಕತ್ತಾ: ಈಡನ್‌ ಗಾರ್ಡನ್‌ ಕ್ರೀಡಾಂಗಣದಲ್ಲಿ ಕೋಲ್ಕತ್ತಾ ವಿರುದ್ದ ನಡೆದ ಐಪಿಎಲ್‌ ಪಂದ್ಯದಲ್ಲಿ ಲಕ್ನೋ ಸೂಪರ್‌ ಜೈಂಟ್ಸ್‌ 4 ರನ್‌ಗಳ ವಿರೋಚಿತ…

6 hours ago