ಕೊಪ್ಪಳದಲ್ಲಿ ಕತ್ತೆ ಹಾಲಿಗೆ ಬೇಡಿಕೆ ಹೆಚ್ಚಳ

ಕೊಪ್ಪಳ: ಕೊಪ್ಪಳದಲ್ಲಿ ಕತ್ತೆ ಹಾಲಿಗೆ ಭಾರೀ ಬೇಡಿಕೆ ಶುರುವಾಗಿದೆ. ಜನರು ಕತ್ತೆ ಹಾಲಿಗೆ ಮುಗಿ ಬೀಳುತ್ತಿದ್ದಾರೆ. ಹಲವಾರು ಖಾಯಿಲೆಗಳಿಗೆ ಕತ್ತೆ ಹಾಲು ರಾಮಬಾಣ ಎಂಬ ಕಾರಣದಿಣದ ಕತ್ತೆ ಹಾಲಿಗೆ ಜನರು ಮುಗಿಬೀಳುತ್ತಾರೆ.

ಮಕ್ಕಳ ಜ್ಞಾಪಕ ಶಕ್ತಿ ವೃದ್ಧಿಗೆ ಕತ್ತೆ ಹಾಲು ಶ್ರೇಷ್ಠ ಎಂಬ ನಂಬಿಕೆ ಜನರಲ್ಲಿದೆ. ಮಕ್ಕಳು ಹಾಗೂ ವೃದ್ಧರಿಗೆ ಡೇಂಗ್ಯೂ, ವೈರಲ್‌ ಸೋಂಕುಗಳು, ಮೈಕೈ ನೋವು, ಜ್ವರ ಇದ್ದರೆ, ಜೊತೆಗೆ ಕೆಮ್ಮು, ಕಾಮಾಲೆ ಅಸ್ತಮಾ, ಗ್ಯಾಸ್ಟ್ರಿಕ್‌ ತೊಂದರೆಗೆ ಕತ್ತೆ ಹಾಲು ಔಷಧಿಯಾಗಿದೆ! ಕತ್ತೆಯ ಹಾಲು ಎಲ್ಲಕ್ಕೂ ರಾಮಬಾಣ ಎಂಬ ಉಲ್ಲೇಖ ಆಯುರ್ವೇದದಲ್ಲಿದೆ. ಕತ್ತೆ ಹಾಲು ದೇಶದ ಔಷಧಿಗಳ ಪೈಕಿ ಶ್ರೇಷ್ಠ ಸ್ಥಾನ ಪಡೆದಿದೆ. ಜೊತೆಗೆ ಪಾಶ್ಚಾತ್ಯ ದೇಶಗಳಲ್ಲಿ ಸೌಂದರ್ಯವೃದ್ಧಿ, ಆಹಾರ ಉತ್ಪನ್ನಗಳಲ್ಲಿ ಕತ್ತೆ ಹಾಲು ಬಳಕೆ ಮಾಡಲಾಗುತ್ತದೆ.

ಕತ್ತೆ ಸಾಗಾಣಿಕ ಕುಟುಂಬಗಳು ಕತ್ತೆಗಳನ್ನು ಹಿಡಿದು ಊರು, ಗ್ರಾಮಗಳನ್ನು ಸುತ್ತುತ್ತಾರೆ. ಒಂದು ಲೋಟಕ್ಕೆ 50 ರಿಂದ 100 ರೂ ನಿಗದಿಪಡಿಸಲಾಗಿದೆ.

× Chat with us