ಬೆಂಗಳೂರು : ರವಿಶಂಕರ್ ಗುರೂಜಿಯೊಂದಿಗೆ ದೀಪಾವಳಿ ಸಂಭ್ರಮದಲ್ಲಿ ಭಾಗಿಯಾದ ಸಿಎಂ ಬಸವರಾಜ ಬೊಮ್ಮಾಯಿ, ಗುಣಮಟ್ಟದ ಜೀವನ ನಡೆಸಲು ಆರ್ಟ್ ಆಫ್ ಲಿವಿಂಗ್ ಕೇಂದ್ರಕ್ಕೆ ಬರಬೇಕು. ಕೆಲವೇ ಮನುಷ್ಯರು ನಿಸ್ವಾರ್ಥ ಸೇವೆ ಮಾಡಿ ಯುಗಪುರುಷರಾಗುತ್ತಾರೆ. ಅವರಲ್ಲಿ ಒಬ್ಬ ಶ್ರೇಷ್ಟ ಗುರು ರವಿಶಂಕರ್ ಗುರೂಜಿ ಎಂದರು.
ಆರ್ಟ್ ಆಫ್ ಲಿವಿಂಗ್, ಬದುಕಿನ ಕ್ಲಿಷ್ಟವಾದ ಪ್ರಶ್ನೆಗಳಿಗೆ ಉತ್ತರಗಳನ್ನು ಅರ್ಥೈಸಿಕೊಳ್ಳುವ ಒಂದು ಆಧ್ಯಾತ್ಮಿಕ ಕೇಂದ್ರ. ಜೀವನದ ಅರ್ಥವನ್ನು ಸರಳ ರೀತಿಯಲ್ಲಿ ಕಂಡುಕೊಳ್ಳುವ ವಿಧಾನ ಪದ್ಧತಿಗಳನ್ನು ತಿಳಿಯಲು ಈ ಕೇಂದ್ರಕ್ಕೆ ಬರಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು