ಬೆಂಗಳೂರು: ಸೆಪ್ಟೆಂಬರ್ನಲ್ಲಿ ಅರ್ಭಟಿಸಿದ್ದ ಮಳೆ ಕಳೆದ ಒಂದು ವಾರದಿಂದ ಕ್ಷೀಣಿಸಿದೆ. ರಾಜ್ಯದಲ್ಲಿ ಕಳೆದ ಒಂದು ವಾರದಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದು, ಹಲವೆಡೆ ಒಣ ಹವೆ ಮುಂದುವರೆದಿದೆ.
ಕೆಲವೆಡೆ ಮಾತ್ರ ಚದುರಿದಂತೆ ಅಲ್ಲಲ್ಲಿ ಸಾಧಾರಣ ಪ್ರಮಾಣದ ಮಳೆಯಾದ ವರದಿಯಾಗಿದೆ. ಜೂನ್ನಿಂದ ಸೆಪ್ಟೆಂಬರ್ ಅಂತ್ಯದ ನಡುವಿನ ಅವಯಲ್ಲಿ ರಾಜ್ಯದಲ್ಲಿ ವಾಡಿಕೆಗಿಂತ ಶೇ.೨೦ರಷ್ಟು ಅಧಿಕ ಪ್ರಮಾಣದ ಮಳೆಯಾಗಿದೆ. ಈ ಅವಧಿಯಲ್ಲಿ ಸರಾಸರಿ ೮೫೨ ಮಿಮೀ ರಾಜ್ಯದ ವಾಡಿಕೆ ಮಳೆಯ ಪ್ರಮಾಣವಾಗಿದ್ದುಘಿ, ೧೦೧೯ ಮಿಮೀನಷ್ಟು ಮಳೆಯಾಗಿದೆ.
ಈ ಅವಧಿಯಲ್ಲಿ ಉತ್ತರ ಒಳನಾಡಿನಲ್ಲಿ ಶೇ.೨೬, ದಕ್ಷಿಣ ಒಳನಾಡಿನಲ್ಲಿ ಶೇ.೭೯, ಮಲೆನಾಡಿನಲ್ಲಿ ಶೇ.೧೧ರಷ್ಟು ಮಳೆಯಾಗಿದ್ದುಘಿ, ಕರಾವಳಿ ಭಾಗದಲ್ಲಿ ಮಾತ್ರ ವಾಡಿಕೆ ಪ್ರಮಾಣದ ೩೧೦೭ಮಿಮೀನಷ್ಟು ಮಳೆಯಾಗಿದೆ.
ಸೆಪ್ಟೆಂಬರ್ನಲ್ಲಿ ರಾಜ್ಯದಲ್ಲಿ ೧೬೧ ಮಿ.ಮೀ. ವಾಡಿಕೆ ಮಳೆಯಾಗಿದ್ದು, ೧೭೫ಮಿಮೀನಷ್ಟು ಮಳೆಯಾಗಿದೆ. ಒಟ್ಟಾರೆ ಶೇ.೯ರಷ್ಟು ಹೆಚ್ಚು ಮಳೆಯಾಗಿದೆ. ಕರಾವಳಿಯಲ್ಲಿ ಶೇ.೨೨, ಮಲೆನಾಡಿನಲ್ಲಿ ಶೇ.೯, ಉತ್ತರ ಒಳನಾಡಿನಲ್ಲಿ ಶೇ.೧೫ರಷ್ಟು ಮಳೆಯಾಗಿದೆ.