ರಾಜ್ಯ

ಚಿಕ್ಕಮಗಳೂರಲ್ಲಿ ಮತ್ತೊಮ್ಮೆ ಹೆಲಿ ಟೂರಿಸಂಗೆ ನಿರ್ಧಾರ : ಪರಿಸರ ಸಂಘಟನೆಗಳಿಂದ ತೀವ್ರ ವಿರೋಧ

ಚಿಕ್ಕಮಗಳೂರು : ಅತ್ಯಂತ ಪರಿಸರ ಸೂಕ್ಷ ಸ್ಥಳಗಳನ್ನು ಹೊಂದಿರುವ ಚಿಕ್ಕಮಗಳೂರು ಜಿಲ್ಲೆಯಲ್ಲಿ ಪರಿಸರದ ಮೇಲೆ ಆಗುವ ದುಷ್ಪರಿಣಾಮಗಳನ್ನು ಗಣನೆಗೆ ತೆಗೆದುಕೊಳ್ಳದೆ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಯಿಂದ ಕ್ರಿಸ್‌ಮಸ್ ಮತ್ತು ಹೊಸ ವರ್ಷದ ಹೆಸರಿನಲ್ಲಿ ಮತ್ತೊಮ್ಮೆ ಹೆಲಿ ಟೂರಿಸಂಗೆ ನಿರ್ಧರಿಸಿದ್ದು, ಈ ತೀರ್ಮಾನವನ್ನು ಪರಿಸರ ಪ್ರೇಮಿಗಳು ತೀವ್ರವಾಗಿ ಆಕ್ಷೇಪಿಸಿದ್ದಾರೆ.

ಭದ್ರಾ ವೈಲ್ಡ್‌ಲೈಫ್ ಕನ್ಸರ್ವೇಶನ್ ಟ್ರಸ್ಟ್‌ನ ಮುಖ್ಯಸ್ಥ ಡಿ.ವಿ.ಗಿರೀಶ್, ರಾಜ್ಯ ವನ್ಯಜೀವಿ ಮಂಡಳಿ ಮಾಜಿ ಸದಸ್ಯ ಸ.ಗಿರಿಜಾಶಂಕರ ಹಾಗೂ ವೈಲ್ಡ್ ಕ್ಯಾಟ್-ಸಿ., ಮುಖ್ಯಸ್ಥ ಹಾಗೂ ಮಾಜಿ ಗೌರವ ವನ್ಯಜೀವಿ ಪರಿಪಾಲಕ ಶ್ರೀದೇವ್ ಹುಲಿಕೆರೆ ಹೆಲಿಟೂರಿಸಂಗೆ ತೀವ್ರ ವಿರೋಧ ವ್ಯಕ್ತಪಡಿಸಿ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, ೨೦೨೪ರಲ್ಲಿ ಈ ಯೋಜನೆ ಕಾರ್ಯಗತಗೊಳ್ಳುವ ಸಂಭವವಿದ್ದಾಗ ತಾವು ವಿರೋಽಸಿರುವುದನ್ನು ನೆನಪಿಸಿದ್ದಾರೆ.

ಇದನ್ನು ಓದಿ: ಇತಿಹಾಸ ತಿರುಚಲು ಮೋದಿ ಯತ್ನ : ಗೌರವ್‌ ಗೊಗೊಯ್‌ ಆರೋಪ

ಮಾಹಿತಿ ಪ್ರಕಾರ ಡಿಸೆಂಬರ್ ೧೩ ರಿಂದ ೧೯ರವರೆಗೆ ಚಿಕ್ಕಮಗಳೂರು ತಾಲ್ಲೂಕಿನ ಗಿರಿಭಾಗದ ವೀಕ್ಷಣೆ, ಡಿಸೆಂಬರ್ ೨೦ ರಿಂದ ೨೨ ರವರೆಗೆ ಮೂಡಿಗೆರೆ, ಡಿ.೨೩ ರಂದು ಮೂಡಿಗೆರೆ ತಾಲ್ಲೂಕಿನ ಸುಂಕಸಾಲೆ, ಡಿ.೨೪ ಮತ್ತು ೨೫ ರಂದು ಕಳಸ ಹಾಗೂ ಡಿ.೨೬ ರಿಂದ ಜನವರಿ ೬ರವರೆಗೆ ಮತ್ತೆ ಗಿರಿಭಾಗ – ಹೀಗೆ ಹೆಲಿಟೂರಿಸಂಗೆ ದಿನಾಂಕಗಳನ್ನು ನಿಗದಿಪಡಿಸಲಾಗಿದೆ. ಈ ಎಲ್ಲ ಸ್ಥಳಗಳು ಪರಿಸರ ಸೂಕ್ಷ ವಾಗಿದ್ದು, ಇಲ್ಲಿ ಈ ರೀತಿ ‘ಜಾಯ್‌ರೈಡ್ ಮಾಡುವುದರಿಂದ ಜನರಿಗೇನೋ ಮನರಂಜನೆ ಸಿಗಬಹುದು; ಕೆಲವು ಖಾಸಗಿ ಕಂಪನಿಗಳಿಗೆ ಲಾಭವಾಗಬಹುದು. ಆದರೆ ಈ ಅವೈಜ್ಞಾನಿಕ ಕ್ರಮದಿಂದ ವನ್ಯಪ್ರಾಣಿಗಳ ಸ್ವೇಚ್ಛೆಗೆ ಸಂಚಕಾರವಾಗದೇ. ಈಗಾಗಲೇ ವನ್ಯಜೀವಿ-ಮಾನವ ಸಂಘರ್ಷದಿಂದ ಸಾಕಷ್ಟು ತತ್ತರಿಸಿದ್ದೇವೆ. ಇಷ್ಟಾಗಿಯೂ ಬುದ್ಧಿ ಕಲಿಯದಿದ್ದರೆ ಇದಕ್ಕೇನನ್ನಬೇಕು ಎಂದು ಅವರು ಪ್ರಶ್ನಿಸಿದ್ದಾರೆ.

ಪ್ರವಾಸೋದ್ಯಮವನ್ನು ಉತ್ತೇಜಿಸುವ ಭರದಲ್ಲಿ ಮುಳ್ಳಯ್ಯನಗಿರಿ ಹಾಗೂ ಅದಕ್ಕೆ ಹೊಂದಿಕೊಂಡಿರುವ ಗಿರಿಶ್ರೇಣಿಗಳ ಸೂಕ್ಷ ತೆ ಅರ್ಥ ಮಾಡಿಕೊಳ್ಳುವಲ್ಲಿ ನಮ್ಮ ವ್ಯವಸ್ಥೆ ಸಂಪೂರ್ಣ ವಿಫಲವಾಗಿದೆ. ರಾಜ್ಯದಲ್ಲೇ ಅತೀ ಎತ್ತರದ ಮುಳ್ಳಯ್ಯನಗಿರಿ ಪಶ್ಚಿಮಘಟ್ಟದ ವಿಶೇಷತೆಯಾದ ಶೋಲಾ ಕಾಡುಗಳನ್ನು ತನ್ನ ಇಳಿಜಾರಿನಲ್ಲಿ ಹೊಂದಿದ್ದು, ಕಾಡುಗಳ ಪಕ್ಕದಲ್ಲೇ ಅತ್ಯಂತ ಎತ್ತರದ ಹುಲ್ಲು ಬೆಳೆಯುವ ಪ್ರದೇಶವೂ ಆಗಿದೆ. ಬಹು ಮುಖ್ಯವಾಗಿ ಹೊನ್ನಮ್ಮನಹಳ್ಳ, ಹೆಬ್ಬೇಹಳ್ಳ, ತಡಬೇಹಳ್ಳ, ವಾಟೇಹಳ್ಳ ನೀರಿನ ಮೂಲವೂ ಆಗಿದ್ದು, ಈ ಹಳ್ಳಗಳ ನೀರು ಭದ್ರಾ ನದಿಯ ಉಪನದಿಯಾದ ಸೋಮವಾಹಿನಿಯನ್ನು ಸೇರುತ್ತ್ತಿದೆ. ಇಲ್ಲಿ ವೇದಾ ನದಿ ಹುಟ್ಟುತ್ತದಲ್ಲದೆ, ಮದಗದಕೆರೆ ಮತ್ತು ಅಯ್ಯನಕೆರೆಗೂ ನೀರುಣಿಸುವ ಜಲಮೂಲ ಹೊಂದಿದೆ. ಹಾಗೆಯೇ ಮುಳ್ಳಯ್ಯನಗಿರಿ ಅದರ ತಗ್ಗಿನ ಅನೇಕ ಗ್ರಾಮಗಳಿಗೆ ನೀರುಣಿಸುತ್ತದೆ ಎಂದಿದ್ದಾರೆ.

ಮೂಡಿಗೆರೆ ಹಾಗೂ ಸುಂಕಸಾಲೆ ಭಾಗದಲ್ಲಿ ಮೀಸಲು ಅರಣ್ಯ ಪ್ರದೇಶಗಳಿದ್ದು, ಅಲ್ಲೂ ಕೂಡ ಹೆಲಿಟೂರಿಸಂನಿಂದ ವನ್ಯಜೀವಿಗಳಿಗೆ ಸಮಸ್ಯೆಯಾಗಲಿದೆ. ಜಿಲ್ಲಾಡಳಿತ ಹೆಲಿ ಟೂರಿಸಂ ಕೈಬಿಟ್ಟು ಜಿಲ್ಲೆಯ ಸೂಕ್ಷ ಪ್ರದೇಶಗಳ ಪ್ರಾಮುಖ್ಯತೆ ಅರಿತು ರಕ್ಷಿಸಲು ಮುಂದಾಗಬೇಕು. ಇಲ್ಲಿ ಹುಟ್ಟಿ ಹರಿಯುವ ಜಲಮೂಲಗಳ ಮಾಲಿನ್ಯ ತಡೆಯಲು ಮುಂದಾಗಬೇಕೆಂದು ಅವರು ಆಗ್ರಹಿಸಿದ್ದಾರೆ.

ಆಂದೋಲನ ಡೆಸ್ಕ್

Recent Posts

ಬೇಸಿಗೆಯಲ್ಲಿ ಕುಡಿಯುವ ನೀರಿನ ಅಭಾವ ಇಲ್ಲ: ಸಚಿವ ಪ್ರಿಯಾಂಕ್‌ ಖರ್ಗೆ

ಬೆಂಗಳೂರು: ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇಲ್ಲ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಸ್ಪಷ್ಟನೆ ನೀಡಿದ್ದಾರೆ. ಈ ಕುರಿತು ಮಾತನಾಡಿದ…

13 mins ago

ಪೆಟ್ರೋಲ್‌ ಖಾಲಿ ವದಂತಿ: ಬಂಕ್‌ಗಳಿಗೆ ಮುಗಿಬಿದ್ದ ಜನತೆ

ಚಾಮರಾಜನಗರ: ಇರಾನ್‌-ಇಸ್ರೇಲ್‌ ನಡುವಿನ ಸಂಘರ್ಷ ಮುಂದುವರಿದಿದ್ದು, ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿರುವ ಪರಿಣಾಮ ಸೋಷಿಯಲ್‌ ಮೀಡಿಯಾದಲ್ಲಿ ಪೆಟ್ರೋಲ್‌, ಡೀಸೆಲ್‌…

30 mins ago

ನಂಜನಗೂಡು| ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಕರುವಿನ ಮೇಲೆ ಚಿರತೆ ದಾಳಿ

ನಂಜನಗೂಡು: ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಕರುವಿನ ಮೇಲೆ ಚಿರತೆ ದಾಳಿ ನಡೆಸಿ ಕೊಂದು ಹಾಕಿರುವ ಘಟನೆ ನಂಜನಗೂಡು ತಾಲ್ಲೂಕಿನ ಹನುಮನಪುರ…

38 mins ago

ಇರಾನ್‌ ಜೊತೆ ಕದನ ವಿರಾಮ ಇಲ್ಲ: ಡೊನಾಲ್ಡ್‌ ಟ್ರಂಪ್‌ ಸ್ಪಷ್ಟನೆ

ವಾಷಿಂಗ್ಟನ್:‌ ಇರಾನ್‌ ಜೊತೆ ಕದನ ವಿರಾಮ್‌ ಮಾಡಿಕೊಳ್ಳಲು ಬಯಸಲ್ಲ ಎಂದು ಅಮೇರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ. NATO ಮಿತ್ರರಾಷ್ಟ್ರಗಳನ್ನು…

1 hour ago

ಓದುಗರ ಪತ್ರ: ನಗುಮೊಗದ ಮೌನ ಸಾಧಕ!

ದಣಿವರಿಯದೆ ದುಡಿದಿರಿ ಆರೋಗ್ಯ ಶಿಕ್ಷಣ ಕ್ಷೇತ್ರಗಳಲಿ ಉಸಿರಾಗಿತ್ತು ನಿಮಗೆ ಸಮಾಜಸೇವೆ! ಧಿಕ್ಕರಿಸಿದಿರಿ ಮೌಢ್ಯಕಂದಾಚಾರಗಳ ಪ್ರೀತಿಸಿದಿರಿ ಎಲ್ಲರನೂ ಸಮಭಾವದಲಿ! ಮನಮಾಗಿದ ನಗುಮೊಗದ…

2 hours ago

ಓದುಗರ ಪತ್ರ: ಮಂಗನ ಕೈಗೆ ……….

ನಾರ್ತ್ ಅಟ್ಲಾಂಟಿಕ್ ಟ್ರೀಟಿ ಆರ್ಗನೈಸೇಶನ್ ( ನಾಟೋ) ದೇಶಗಳ ಗುಂಪಿಗೆ ಸೇರಿದ ಕೆನಡಾ, ಆಸ್ಟ್ರೇಲಿಯಾ, ಬ್ರಿಟನ್ ಮುಂತಾದ ದೇಶಗಳು ಇರಾನಿನ…

2 hours ago