ಬೆಂಗಳೂರು: ಒಕ್ಕಲಿಗರ ಸಂಘದ ವತಿಯಿಂದ ಈಗಲೇ ಜಾತಿ ಗಣತಿ ವಿಚಾರಕ್ಕೆ ಸಂಬಂಧಿಸಿದಂತೆ ಸಭೆ ನಡೆಸುವುದು ಬೇಡ. ಸಭೆಯನ್ನು ಮುಂದೂಡಿ ಯಾರಿಗೂ ಅನ್ಯಾಯವಾಗದಂತೆ ನಾವು ನೋಡಿಕೊಳ್ಳುತ್ತೇವೆ ಎಂದು ಪದಾಧಿಕಾರಿಗಳಿಗೆ ಸೂಚಿಸಿರುವುದಾಗಿ ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಸದಾಶಿವನಗರದ ನಿವಾಸದ ಬಳಿ ಇಂದು(ಜನವರಿ.12) ಈ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ನಾನು ಯಾವುದೇ ಒಕ್ಕಲಿಗ ಪದಾಧಿಕಾರಿಗಳೊಂದಿಗೆ ಯಾವುದೇ ಸಭೆ ನಡೆಸಿಲ್ಲ. ಅವರು ಹೊಸ ವರ್ಷದ ಶುಭಾಶಯ ಕೋರಲು ನನ್ನ ಗೃಹ ಕಚೇರಿಗೆ ಭೇಟಿ ನೀಡಿದ್ದರು ಅಷ್ಟೇ. ಆ ವೇಳೆ ನಾನು ಸಮುದಾಯದ ಹಲವು ವಿಚಾರಗಳ ಬಗ್ಗೆ ಚರ್ಚಿಸಿದೆ. ಅದರಲ್ಲಿ ಇದು ಕೂಡ ಒಂದಾಗಿದ್ದು, ಸಮುದಾಯದ ಪದಾಧಿಕಾರಿಗಳು ಇಂದು ಜಾತಿ ಗಣತಿ ವಿಚಾರವಾಗಿ ಪ್ರತ್ಯೇಕವಾಗಿ ಸಭೆ ನಡೆಸಬೇಕು ಎಂದು ತೀರ್ಮಾನಿಸಿದ್ದರು. ಆದರೆ ನಾನು ಆ ಸಭೆಯಲ್ಲಿ ಭಾಗವಹಿಸುವುದಿಲ್ಲ. ಜಾತಿ ಗಣತಿ ವಿಚಾರಕ್ಕಾಗಿ ಈಗಲೇ ಸಭೆಯನ್ನು ನಡೆಸುವುದು ಬೇಡ. ನಾನು ಈ ವಿಚಾರವಾಗಿ ಶ್ರೀಗಳೊಂದಿಗೆ ಮಾತನಾಡುತ್ತೇನೆ ಎಂದಿರುವೆ ಎಂದು ಹೇಳಿದರು.
ಇನ್ನೂ ಒಕ್ಕಲಿಗರ ಸಂಘದ ಹೊಸ ಪದಾಧಿಕಾರಿಗಳ ತಂಡ ರಾಜಿ ಮಾಡಿಕೊಂಡು ನನ್ನನ್ನು ಭೇಟಿಯಾಗಲು ಬಂದಿದ್ದರು. ಆಗ ನಾನು ಸಮುದಾಯದ ಪದಾಧಿಕಾರಿಗಳ ಮಧ್ಯೆ ಮತ್ತೆ ಯಾವುದೇ ಒಳಜಗಳು ಬೇಡ. ಒಂದು ವೇಳೆ ಕಿತ್ತಾಟವಾದರೆ ಆ ನಂತರ ಆಡಳಿತಾಧಿಕಾರಿ ನೇಮಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದೇನೆ. ಅಲ್ಲದೇ ಎಲ್ಲರೂ ಒಟ್ಟಾಗಿ ಕಾರ್ಯ ನಿರ್ವಹಿಸಬೇಕು. ಜಾತಿ ಗಣತಿ ಸಭೆಯನ್ನು ಮುಂದೂಡಿ, ನಾವು ಯಾರಿಗೂ ಅನ್ಯಾಯವಾಗದಂತೆ ನೋಡಿಕೊಳ್ಳುತ್ತೇವೆ ಎಂದು ಭರವಸೆ ನೀಡಲಾಗಿದೆ ಎಂದು ತಿಳಿಸಿದರು.
ಬೆಂಗಳೂರು: ಇಂದು ಊಹಾ ಪತ್ರಿಕೋದ್ಯಮ ವ್ಯಾಪಕವಾಗುತ್ತಿದೆ. ಇದು ಅಪಾಯಕಾರಿ. ಇಂತಹ ಊಹಾ ಪತ್ರಿಕೋದ್ಯಮ ಸಮಾಜಕ್ಕೆ ಬೇಕಾ ಎಂದು ಸಿಎಂ ಸಿದ್ದರಾಮಯ್ಯ…
ಈ ಘಟನೆ ಅತ್ಯಂತ ಹೇಯ, ವಿಕೃತಿ, ರಾಕ್ಷಸಿ ಕೃತ್ಯ ಎಂದ ಸಚಿವರು ಬೆಂಗಳೂರು: ನಗರದ ಚಾಮರಾಜಪೇಟೆಯಲ್ಲಿ ಹಸುಗಳ ಕೆಚ್ಚಲು ಕುಯ್ದಿರುವ…
ಬೆಂಗಳೂರು: ರಾಜ್ಯದಲ್ಲಿ ಈಗಾಗಲೇ ಆಗಿರುವ ಜಾತಿಗಣತಿ ವರದಿ ದೋಷಪೂರಿತವಾಗಿದೆ. ಗಣತಿ ಆಗಿ ಹತ್ತು ವರ್ಷಗಳು ಮೀರಿದೆ. ಹೀಗಾಗಿ ರಾಜ್ಯ ಜಾತಿಗಣತಿ…
ಬೆಂಗಳೂರು: ಜೆಡಿಎಸ್ ರಾಜ್ಯಾಧ್ಯಕ್ಷರ ಆಯ್ಕೆಯನ್ನು ಮುಂದಿನ ಏಪ್ರಿಲ್ ತಿಂಗಳ ಒಳಗೆ ಚುನಾವಣೆ ಮೂಲಕ ನಡೆಸುವ ನಿರ್ಧಾರವನ್ನು ಜೆಡಿಎಸ್ ಕೈಗೊಂಡಿದೆ ಎಂದು…
ವಿಜಯನಗರ: ಜಾತಿ ವ್ಯವಸ್ಥೆಯನ್ನು ತೊಲಗಿಸಲು 12ನೇ ಶತಮಾನದಲ್ಲಿ ಬಸವಣ್ಣನವರು ಅಂತರ್ಜಾತಿ ವಿವಾಹಕ್ಕೆ ಉತ್ತೇಜನ ನೀಡಿದ್ದರು. ಅದೇ ರೀತಿ ಈಗ ನಾವೆಲ್ಲ…
ಬೆಳಗಾವಿ: ಹಿಂದುತ್ವದ ಬಗ್ಗೆ ಅಪಾರ ಕಾಳಜಿ ಇರುವ, ಕಾಂಗ್ರೆಸ್ ಪಕ್ಷಕ್ಕೆ ಸಿಂಹಸ್ವಪ್ನವಾಗಿ ಕಾಡುವ ಬಿಜೆಪಿ ಎಂ.ಎಲ್.ಸಿ. ಸಿಟಿ ರವಿ ಅವರನ್ನು…