ಬೆಂಗಳೂರು: ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಸಚಿವ ಎಂ.ಬಿ.ಪಾಟೀಲ್ ಅವರು ನಾಳೆ ನಡೆಯುವ ಹೂಡಿಕೆದಾರರ ಸಮಾವೇಶದ ಸ್ಥಳಕ್ಕೆ ಭೇಟಿ ನೀಡಿ, ಸ್ಥಳವನ್ನು ಪರಿಶೀಲಿಸಿದ್ದಾರೆ.
ಬೆಂಗಳೂರು ಅರಮನೆ ಮೈದಾನದಲ್ಲಿ ಹೂಡಿಕೆದಾರರ ಸಮಾವೇಶ ನಾಳೆ(ಫೆ.11) ನಡೆಯಲಿದೆ. ಈ ವಿಚಾರವಾಗಿ ಅರಮನೆ ಮೈದಾನಕ್ಕೆ ಭೇಟಿ ನೀಡಿದ ಡಿ.ಕೆ.ಶಿವಕುಮಾರ್ ಮತ್ತು ಎಂ.ಬಿ.ಪಾಟೀಲ್ ಅವರು ಪ್ರದರ್ಶನ ತಾಣಗಳು, ಗೋಷ್ಠಿಗಳು ನಡೆಯಲಿರುವ ಸ್ಥಳಗಳು ಚರ್ಚೆ ಮತ್ತು ಒಡಂಬಡಿಕೆ ನಡೆಯಲಿರುವ ಸಭಾಂಗಣಗಳು, ಕಂಟ್ರಿ ಪೆವಿಲಿಯನ್ ಹಾಗೂ ಫುಡ್ ಕೋರ್ಟ್ ಸೇರಿದಂತೆ ಇನ್ನಿತರ ಸ್ಥಳಗಳನ್ನು ಖುದ್ದಾಗಿ ವೀಕ್ಷಿಸಿ ಅಂತಿಮ ಕ್ಷಣಗಳ ಕೆಲ ಸುಧಾರಣೆಗಳತ್ತ ಗಮನ ಹರಿಸಿ ಎಂದು ಸಲಹೆಗಳನ್ನು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್ ಅವರು ನಾಳೆ ಸಂಜೆ 4 ಗಂಟೆಗೆ ಸಮಾವೇಶವೂ ಉದ್ಘಾಟನೆಗೊಳ್ಳಲಿದೆ. ಇನ್ನು ಈ ಸಮಾವೇಶವೂ ರಾಜ್ಯದ ಐಟಿ, ಬಿಟಿ ಹಾಗೂ ಕೈಗಾರಿಕಾ ವಲಯಕ್ಕೆ ಮತ್ತಷ್ಟು ಪುಷ್ಟಿ ತುಂಬಲಿದೆ ಎಂದು ಹೇಳಿದರು.
ಮಂಜು ಕೋಟೆ ಜಕ್ಕಹಳ್ಳಿ ಆಶ್ರಮ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಮುಜುಗರ; ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಪೋಷಕರ ಆಗ್ರ ಎಚ್.ಡಿ.ಕೋಟೆ: ಗಿರಿಜನ ಮಕ್ಕಳ…
ಪ್ರಶಾಂತ್ ಎಸ್. ವೇಗ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳದಿದ್ದರೆ ಅನಾಹುತಕ್ಕೆ ಹಾದಿ ಎನ್.ಎಚ್.ಪಾಳ್ಯ,ಟೋಲ್‌ಗೇಟ್, ಶಿವಪುರ ತಿರುವಿನಲ್ಲಿ ರಿಫ್ಲೆಕ್ಟರ್,ಬ್ಯಾರಿಕೇಡ್ ಅಳವಡಿಕೆ ಅಗತ್ಯ ಮೈಸೂರು:…
ರಾಜ್ಯದ ೩೨ ಶೈಕ್ಷಣಿಕ ಜಿಲ್ಲೆಗಳ ೧೩೫ ಪಿಯು ಕಾಲೇಜುಗಳಲ್ಲಿ ೧೮೫ ಕೊಠಡಿಗಳ ನಿರ್ಮಾಣ ಬಾಲಕರ ೪೬, ಬಾಲಕಿಯರ ೫೦ ಶೌಚಾಲಯ…
ಮಳವಳ್ಳಿ : ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿರುವ ದುಷ್ಕರ್ಮಿಗಳು ಶವವನ್ನು ಆತನ ಪಾಳು ಮನೆ ಮುಂದೆ ಎಸೆದು ಹೋಗಿರುವ ದುಷ್ಕೃತ್ಯವೊಂದು ಮಳವಳ್ಳಿ…
ಕೋಲ್ಕತ್ತಾ : ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಸೋಮವಾರ ನಡೆದ ಐಸಿಸಿ ಟಿ20 ವಿಶ್ವಕಪ್ ಪಂದ್ಯದಲ್ಲಿ ಸ್ಕಾಟ್ಲೆಂಡ್ ತಂಡ ಇಟಲಿ ವಿರುದ್ಧ…