ರಾಜ್ಯ

ಮಹಾಕುಂಭಮೇಳದ ನೀರಿಗೆ ಜಾತಿ, ಧರ್ಮ, ಪಾರ್ಟಿ ಇದೆಯಾ?: ಡಿಸಿಎಂ ಡಿ.ಕೆ.ಶಿವಕುಮಾರ್‌

ಉಡುಪಿ: ನಾನು ಮಹಾಕುಂಭಮೇಳದಲ್ಲಿ ಭಾಗಯಾದರೆ ತಪ್ಪೇನಿದೆ, ಆ ನೀರಿಗೆ ಜಾತಿ, ಧರ್ಮ ಹಾಗೂ ಪಾರ್ಟಿ ಇದೆಯಾ ಎಂದು ಸ್ವಪಕ್ಷದ ನಾಯಕರಿಗೆ ತಿರುಗೇಟು ನೀಡಿದ್ದಾರೆ.

ಉಡುಪಿಯಲ್ಲಿ ಇಂದು(ಮಾರ್ಚ್‌.2) ಈ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ನಾನು ಪ್ರಯಾಗ್‌ ರಾಜ್‌ನ ಮಹಾ ಕುಂಭಮೇಳಕ್ಕೆ ಹೋಗಿದ್ದೆ, ಅಂತೆಯೇ ಟಿ.ನರಸೀಪುರದಲ್ಲಿ ನಡೆದ ಕುಂಭಮೇಳದಲ್ಲೂ ಭಾಗಿಯಾಗಿದ್ದೇನೆ ಅದರಲ್ಲಿ ತಪ್ಪೇನಿದೆ? ಯಾರು ಯಾವ್ಯಾವ ಲೆಕ್ಕಚಾರವನ್ನು ಬೇಕಾದರೂ ಹಾಕಿಕೊಳ್ಳಲಿ. ಅದರ ಅವಶ್ಯಕತೆ ಆಗಲಿ ಅಥವಾ ಲೆಕ್ಕಚಾರದ ಅವಶ್ಯಕತೆ ಆಗಲಿ ನನಗೆ ಬೇಕಾಗಿಲ್ಲ ಎಂದು ತಮ್ಮ ವಿರೋಧಿಗಳಿಗೆ ಟಾಂಗ್‌ ನೀಡಿದರು.

ಇದೇ ಸಂದರ್ಭದಲ್ಲಿ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರ ಹೇಳಿಕೆಗಳ ಬಗ್ಗೆ ಮಾತನಾಡಿದ ಅವರು, ನಾನು ಯಾವ ದೇವಾಲಯಕ್ಕೆ ಹೋದರೂ, ಯಾವ ಧಾರ್ಮಿಕ ವಿಚಾರ ಮಾತನಾಡಿದರೂ ಸಂಚಲನವಾಗುತ್ತದೆ. ನಿಮ್ಮ ಜಿಲ್ಲೆಯವರೇ ನನ್ನನ್ನು ಯೇಸು ಕುಮಾರ ಎಂದಿದ್ದರು. ಯೇಸುವಿನ ಶಿಲಾಮೂರ್ತಿಗೆ ನಾನು ಪ್ರೋತ್ಸಾಹ ಕೊಟ್ಟೆ ಎಂಬ ಕಾರಣಕ್ಕೆ ಹೀಗೆ ಹೇಳಿದ್ದರು. ಯಾರೋ ಒಬ್ಬ ಎಂಪಿ ಅವರು ಮುಸಲ್ಮಾನರ ಎದೆ ಸೀಳಿದರೆ ಮೂರು ಅಕ್ಷರ ಇಲ್ಲ ಅಂದಿದ್ದರು. ಅಲ್ಲದೇ ಅವರು ಕೇವಲ ಪಂಚರ್ ಹಾಕೋಕೆ ಲಾಯಕ್ಕು ಎಂದಿದ್ದ. ಅದಕ್ಕೆ ನಾನು ಪ್ರತಿಕ್ರಿಯೆ ನೀಡಿ, ಅವರೆಲ್ಲ ನಮ್ಮ ಬ್ರದರ್ಸ್‌, ಅವರಿಲ್ಲದೆ ಬದುಕೋಕೆ ಆಗಲ್ಲ ಎಂದಿದ್ದೆ ಎಂದು ಹೇಳಿದರು.

ಇನ್ಮು ನಾವು ಚಿಕನ್ನು ಮತ್ತು ಮಟನ್ನು ಕಡಿಯೋಕೆ ಆಗುತ್ತಾ? ಮುಸಲ್ಮಾನರೇ ಕಡಿಯುವುದು. ಯಾರು ಯಾವ ಕೆಲಸ ನಿರ್ವಹಿಸಬೇಕೋ ಅವರು ಅದನ್ನೇ ಮಾಡಬೇಕು, ಅದನ್ನೇ ಮಾಡುತ್ತಾರೆ. ಅವರನ್ನು ಬ್ರದರ್ಸ್ ಅಂದಿದ್ದಕ್ಕೆ ನನ್ನನ್ನು ಇನ್ನೊಂದು ಹೆಸರಲ್ಲಿ ಕರೆದರು ಎಂದು ವಾಗ್ದಾಳಿ ನಡೆಸಿದರು.

ಅರ್ಚನ ಎಸ್‌ ಎಸ್

Recent Posts

ಇರಾನ್‌ ಮೇಲೆ ಅಮೇರಿಕಾ ಭೀಕರ ದಾಳಿ: ಟಾಪ್‌ ಕಮಾಂಡರ್‌ಗಳ ಹತ್ಯೆ

ಟೆಹರಾನ್:‌ ಟೆಹರಾನ್‌ ಮೇಲೆ ಅಮೇರಿಕಾ ನಡೆಸಿದ ಬೃಹತ್‌ ದಾಳಿಯಲ್ಲಿ ಇರಾನಿನ ಮಿಲಿಟರಿ ಪಡೆಯ ಉನ್ನತ ಕಮಾಂಡರ್‌ಗಳನ್ನು ಹತ್ಯೆ ಮಾಡಲಾಗಿದೆ. ಈ…

15 mins ago

ಮಡಿಕೇರಿ: ಶರಣ್ಯಾಳಿಗಾಗಿ ಇಂದು ಕೂಡ ತೀವ್ರಗೊಂಡ ಶೋಧ ಕಾರ್ಯಾಚರಣೆ

ಮಡಿಕೇರಿ: ತಡಿಯಂಡಮೋಳ್‌ ಬೆಟ್ಟಕ್ಕೆ ಚಾರಣಕ್ಕೆ ತೆರಳಿದ್ದ ಕೇರಳ ಮೂಲದ ಐಟಿ ಉದ್ಯೋಗಿ ಶರಣ್ಯಾ ನಾಪತ್ತೆಯಾಗಿ ಮೂರು ದಿನಗಳು ಕಳೆದರೂ ಈವರೆಗೂ…

28 mins ago

ಓದುಗರ ಪತ್ರ: ರೈಲು ಟಿಕೆಟ್ ರದ್ದತಿ ಹೊಸ ನಿಯಮದ ಬಗ್ಗೆ ಅರಿವಿರಲಿ

ಭಾರತೀಯ ರೈಲ್ವೆ ಇಲಾಖೆಯು ಕಾಯ್ದಿರಿಸುವ ಮುಂಗಡ ಟಿಕೆಟ್ ರದ್ದತಿಯ ಬಗ್ಗೆ ಹೊಸ ನಿಯಮವನ್ನು ಏಪ್ರಿಲ್ ೧ರಿಂದ ಜಾರಿಗೆ ತಂದಿದೆ. ಪ್ರಯಾಣಿಸುವ…

1 hour ago

ಓದುಗರ ಪತ್ರ: ಅಂಚೆ ಕಚೇರಿಯಲ್ಲಿ ಹೆಚ್ಚುವರಿ ಕೌಂಟರ್ ತೆರೆಯಿರಿ

ಮೈಸೂರು ನಗರದ ಪ್ರಧಾನ ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆ ಕೌಂಟರ್‌ಗಳ ಸಂಖ್ಯೆ ಕಡಿಮೆ ಇರುವುದರಿಂದ ನಿಧಾನಗತಿಯಲ್ಲಿ ಕೆಲಸ ಸಾಗುತ್ತಿದೆ. ಹಿರಿಯ…

1 hour ago

ಓದುಗರ ಪತ್ರ: ಇರುವುದರಲ್ಲೇ ತೃಪ್ತಿ ಕಾಣಬೇಕು

ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ! ಜನಪ್ರಿಯ ಕವಿ ಗೋಪಾಲಕೃಷ್ಣ ಅಡಿಗರ ಕವನದ ಈ ಸಾಲು ಇಂದಿನ ಕಾಲಮಾನದ ಜನಮಾನಸಕ್ಕೆ…

1 hour ago

ಹಸಿರುಕ್ರಾಂತಿ ಹರಿಕಾರ ಡಾ.ಬಾಬು ಜಗಜೀವನರಾಮ್

ಎಚ್.ಹಾಲಪ್ಪ ಸಮಾನತೆ ಇಲ್ಲದೆ ಪ್ರಜಾಪ್ರಭುತ್ವ ಅಪೂರ್ಣ ಎಂದು ನಂಬಿದ್ದ ತಮ್ಮ ಕಾರ್ಯಪ್ರವೃತ್ತಿಯಿಂದ ಸಮಾಜದಲ್ಲಿ ಸಮಾನತೆಯನ್ನು ಜೀವಂತಗೊಳಿಸಿದ ದೇಶದಾದ್ಯಂತ ಬಾಬೂಜಿ ಎಂದೇ…

4 hours ago