ಹೋರಾಟಗಾರ ದಸಂಸ ಮುಖಂಡ ಎಂ.ಬಿ.ಶ್ರೀನಿವಾಸ್ ವಿಧಿವಶ

ಮಂಡ್ಯ: ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕರಾಗಿದ್ದ ಎಂ.ಬಿ.ಶ್ರೀನಿವಾಸ್(60) ಭಾನುವಾರ ಮುಂಜಾನೆ ನಿಧನರಾದರು.

ಹೃದಾಂಘಾತವಾಗಿ ಕೆಲ ದಿನಗಳಿಂದ ಮೈಸೂರಿನ ಜುಂದೇವ ಆಸ್ಪತ್ರೆುಂಲ್ಲಿ ಚಿಕಿತ್ಸೆ ಪಡೆುುಂತ್ತಿದ್ದ ಅವರು ಚಿಕಿತ್ಸೆ ಫಲಿಸದೆ ಭಾನುವಾರ ಮುಂಜಾನೆ ಇಹಲೋಕ ತ್ಯಜಿಸಿದರು.

ಮೃತರಿಗೆ ಪತ್ನಿ, ಪುತ್ರ ಹಾಗೂ ಪುತ್ರಿ ಇದ್ದಾರೆ. ಮೃತರ ಅಂತ್ಯಕ್ರಿಯೆಯನ್ನು ಅವರ ಸ್ವಗ್ರಾಮ ಮೇಲುಕೋಟೆಯ ಮೇನಾಗರ ಗ್ರಾಮದಲ್ಲಿ ನ.22ರ ಸೋಮವಾರ ಬೆಳಿಗ್ಗೆ 10ಕ್ಕೆ ನಡೆಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.

ಹೋರಾಟಗಳಲ್ಲಿ ಮುಂಚೂಣಿಯಲ್ಲಿರುತ್ತಿದ್ದ ಎಂ.ಬಿ.ಶ್ರೀನಿವಾಸ್ ನಿಧನಕ್ಕೆ ಅನೇಕ ಗಣ್ಯರು ಕಂಬನಿ ಮಿಡಿದಿದ್ದಾರೆ.

ಭಾನುವಾರ ನಗರದ ಅಂಬೇಡ್ಕರ್ ಭವನದಲ್ಲಿ ಎಂ.ಬಿ.ಶ್ರೀನಿವಾಸ್ ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕರ ಅಂತಿಮ ದರ್ಶನಕ್ಕೆ ಮಧ್ಯಾಹ್ನದವರೆಗೆ ಇಡಲಾಗಿತ್ತು. ಈ ವೇಳೆ ಜಿಲ್ಲಾಧಿಕಾರಿ ಎಸ್.ಅಶ್ವಥಿ ಭೇಟಿ ನೀಡಿ ಮೃತರ ಅಂತಿಮ ದರ್ಶನ ಪಡೆದು ಕುಟುಂಬದವರಿಗೆ ಸಾಂತ್ವನ ಹೇಳಿದರು. ನಂತರ ಜಿಲ್ಲಾಡಳಿತದಿಂದ ಗೌರವ ಸೂಚಿಸಲಾಯಿತು. ಬಳಿಕ ಸಾರ್ವಜನಿಕರು ಮಧ್ಯಾಹ್ನ 2ರವರೆಗೆ ಅಂತಿಮ ದರ್ಶನ ಪಡೆದ ನಂತರ ಸ್ವಗ್ರಾಮ ಮೇನಾಗರಕ್ಕೆ ಕೊಂಡೊಯ್ಯಲಾಗಿದೆ.

ಎಂ.ಬಿ.ಶ್ರೀನಿವಾಸ್ ಅವರು ಜಾ.ದಳ ಪರಿಶಿಷ್ಟ ಜಾತಿ ವಿಭಾಗದ ರಾಜ್ಯ ಉಪಾಧ್ಯಕ್ಷರಾಗಿ ಕಾಂರ್ುನಿರ್ವಹಿಸುತ್ತಿದ್ದರು. ವಿಶೇಷವಾಗಿ ಎಲ್ಲೇ ಆಗಲಿ ಶೋಷಿತರ ಮೇಲೆ ನಡೆುುಂವ ದೌರ್ಜನ್ಯಗಳ ವಿರುದ್ಧ ಹಲವು ಹೋರಾಟ, ಚಳವಳಿ ನಡೆಸಿಕೊಂಡು ಬಂದಿದ್ದರಲ್ಲದೆ, ಮೈಶುಗರ್ ಕಾರ್ಖಾನೆ ಸರ್ಕಾರಿ ಸ್ವಾಮ್ಯದಲ್ಲಿಯೇ ನಡೆಸಬೇಕೆಂಬ ನಿಟ್ಟಿನಲ್ಲಿ ನಿರಂತರ ಧರಣಿಯಲ್ಲಿ ಮುಂಚೂಣಿಯಲ್ಲಿದ್ದರು.

ದಲಿತರ ಮೇಲೆ ದೌರ್ಜನ್ಯ ದಬ್ಬಾಳಿಕೆ ವಿರುದ್ಧ ಯಾವುದೇ ಅಳುಕು, ಮುಜುಗರವಿಲ್ಲದೆ ಧೈರ್ಯದಿಂದ ಹೋರಾಟಕ್ಕಿಳಿಯುತ್ತಿದ್ದರು. ಇತ್ತೀಚೆಗೆ ಎಂ.ಬಿ.ಶ್ರೀನಿವಾಸ್ ಅವರ ಅಭಿನಂದನಾ ಗ್ರಂಥ ಕೂಡ ಬಿಡುಗಡೆ ವಾಡಲಾಗಿತ್ತು. ಆಗ ವಾಜಿ ಸಿಎಂ ಎಚ್.ಡಿ.ಕುವಾರಸ್ವಾಮಿ ಸವಾರಂಭಕ್ಕೆ ಆಗಮಿಸಿ ಶುಭ ಕೋರಿದ್ದರು.

× Chat with us