ರಾಜ್ಯ

ದರ್ಶನ್‌ ಹಾಸಿಗೆ, ದಿಂಬಿಗಾಗಿ ಕೋರ್ಟ್‌ಗೆ ಹೋಗ್ತಾರೆ. ಆದರೆ ಖೈದಿಗಳಿಗೆ ಎಲ್ಲವೂ ಸಿಗುತ್ತೆ: ಪರಮೇಶ್ವರ್‌ ಸಿಟ್ಟು

ಬೆಂಗಳೂರು: ನಟ ದರ್ಶನ್‌ ಅವರು ದಿಂಬು, ಹಾಸಿಗೆಗೆ ಕೋರ್ಟ್‌ನಲ್ಲಿ ಮನವಿ ಮಾಡುತ್ತಾರೆ. ಆದರೆ ಈ ಖೈದಿಗಳಿಗೆ ಎಲ್ಲವೂ ಸುಲಭವಾಗಿ ಸಿಗುತ್ತದೆ ಎಂದು ಗೃಹ ಸಚಿವ ಪರಮೇಶ್ವರ್‌ ಜೈಲಿನ ಅವ್ಯವಸ್ಥೆ ವಿರುದ್ಧ ಸಿಟ್ಟು ಹೊರಹಾಕಿದ್ದಾರೆ.

ಜೈಲಿನಲ್ಲಿ ಖೈದಿಗಳಿಗೆ ರಾಜಾತಿಥ್ಯ ನೀಡಿ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪದೇ ಪದೇ ಹೀಗಾಗುತ್ತದೆ ಎಂದು ಹಿಂದೆಯೂ ಕ್ರಮ ತೆಗೆದುಕೊಂಡಿದ್ದೆವು. ದಯಾನಂದ್‌ ಅವರ ಜೊತೆ ನಿನ್ನೆ ಮಾತನಾಡಿದ್ದೇನೆ. ಪದೇ ಪದೇ ಇದು ನಡೆಯುತ್ತಿದೆ. ಯಾರು ಉಸ್ತುವಾರಿ ಇದ್ದಾರೆ ಅವರ ವಿರುದ್ಧ ಕ್ರಮ ಆಗಲೇಬೇಕು.

ಈ ಪ್ರಕರಣವನ್ನು ಗಂಭೀರವಾಗಿ ಸ್ವೀಕರಿಸಿದ್ದು, ದಯಾನಂದ್‌ ಅವರಿಂದ ವರದಿ ಕೇಳಿದ್ದೇನೆ. ನಾನೇ ಅಧಿಕಾರಿಗಳ ಸಭೆ ಕರೆಯುತ್ತೇನೆ. ದಯಾನಂದ್‌ ಅವರು ವರದಿ ಕೊಟ್ಟಮೇಲೆ ಪರಿಶೀಲನೆ ನಡೆಸುತ್ತೇನೆ. ವರದಿ ನಮಗೆ ಸಮಾಧಾನ ಆಗದೇ ಇದ್ದರೆ ಉನ್ನತ ಮಟ್ಟದ ತನಿಖೆ ಮಾಡುತ್ತೇವೆ. ತನಿಖೆಗೆ ಸಮಿತಿ ರಚನೆ ಮಾಡುತ್ತೇವೆ ಎಂದು ತಿಳಿಸಿದರು.

ಆಂದೋಲನ ಡೆಸ್ಕ್

Recent Posts

ಕರೂರು ಕಾಲ್ತುಳಿತ ಪ್ರಕರಣ: ಸಿಬಿಐ ವಿಚಾರಣೆಗೆ ಹಾಜರಾದ ದಳಪತಿ ವಿಜಯ್‌

ನವದೆಹಲಿ: ಕರೂರು ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಟಿವಿಕೆ ಪಕ್ಷದ ಸಂಸ್ಥಾಪಕ ದಳಪತಿ ವಿಜಯ್‌ ಮೂರನೇ ಬಾರಿಗೆ ಸಿಬಿಐ ಕಚೇರಿಗೆ ಇಂದು…

8 mins ago

ಇರಾನ್‌-ಇಸ್ರೇಲ್‌ ಯುದ್ಧದ ಎಫೆಕ್ಟ್:‌ ಬಿಕೋ ಎನ್ನುತ್ತಿರುವ ದುಬೈ

ದುಬೈ: ಈ ಅವಧಿಯಲ್ಲಿ ಪ್ರವಾಸಿಗರಿಂದ ತುಂಬಿ ತುಳುಕುತ್ತಿದ್ದ ದುಬೈನ್‌ ಮಾರುಕಟ್ಟೆಗಳು, ಸಮುದ್ರ ತೀರಗಳು ಹಾಗೂ ಐಷಾರಾಮಿ ಹೋಟೆಲ್‌ಗಳು ಈಗ ಜನರಿಲ್ಲದೇ…

13 mins ago

ಬೆಂಜಮಿನ್‌ ನೆತನ್ಯಾಹು ಕ್ಷೇಮವಾಗಿದ್ದಾರೆ: ಇಸ್ರೇಲ್‌ ಪ್ರಧಾನಿ ಕಚೇರಿ ಸ್ಪಷ್ಟನೆ

ಜೆರುಸೇಲಂ: ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಕ್ಷೇಮವಾಗಿದ್ದಾರೆ. ಅವರು ಸಾವನ್ನಪ್ಪಿದ್ದಾರೆ ಎಂಬ ವರದಿ ಸುಳ್ಳು ಎಂದು ಪ್ರಧಾನಿ ಕಚೇರಿ ಸ್ಪಷ್ಟನೆ…

45 mins ago

ಇಂದು ಸಂಜೆ ಕೇಂದ್ರ ಚುನಾವಣಾ ಆಯೋಗ ಸುದ್ದಿಗೋಷ್ಠಿ: ಐದು ರಾಜ್ಯಗಳ ವಿಧಾನಸಭಾ ಚುನಾವಣೆಗೆ ದಿನಾಂಕ ಪ್ರಕಟ ಸಾಧ್ಯತೆ

ನವದೆಹಲಿ: ಇಂದು ಸಂಜೆ ಐದು ರಾಜ್ಯಗಳ ವಿಧಾನಸಭೆ ಚುನಾವಣೆಗೆ ದಿನಾಂಕ ಪ್ರಕಟವಾಗುವ ಸಾಧ್ಯತೆಯಿದೆ. ಇಂದು ಸಂಜೆ ನಾಲ್ಕು ಗಂಟೆಗೆ ಕೇಂದ್ರ…

1 hour ago

ತಾಪಮಾನ ಏರಿಕೆ ಬೆನ್ನಲ್ಲೇ ಮೂರು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ

ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಬಿಸಿಲ ಝಳ ಹೆಚ್ಚಾಗುತ್ತಿರುವ ಬೆನ್ನಲ್ಲೇ ಮೂರು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ…

1 hour ago

ಕ್ಯಾತನಹಳ್ಳಿಯಲ್ಲಿ ಅರ್ಧಕ್ಕೆ ನಿಂತ ಕಾಮಗಾರಿಗಳು

ಮಹೇಶ್ ಕರೋಠಿ ಕಿಕ್ಕೇರಿ: ಇಲ್ಲಿಗೆ ಸಮೀಪದ ಮಂದಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕ್ಯಾತನಹಳ್ಳಿ ಗ್ರಾಮದಲ್ಲಿ ಕಳೆದ ೨-೩ ವರ್ಷಗಳಿಂದ ಹಲವು…

6 hours ago