ತಿಪಟೂರು : ಕುವೆಂಪು ರಚಿಸಿದ ನಾಡಗೀತೆಗೆ ಅವಮಾನ ಹಾಗೂ ಪಠ್ಯಪರಿಷ್ಕರಣೆಗೆ ಸಂಬಂಧಿಸಿದಂತೆ ರೋಹಿತ್ ಚಕ್ರತೀರ್ಥ ವಿರುದ್ಧ ಕ್ರಮ ಕೈಗೊಳ್ಳದಿರುವುದರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ನೆನ್ನೆ ದಿನ ಎನ್ಎಸ್ಯುಐ ಕಾರ್ಯಕರ್ತರು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ರವರ ಮನೆಮುಂದೆ ಪ್ರತಿಭಟನೆಯನ್ನು ನಡೆಸಿ ದಾಂಧಲೆ ಮಾಡಿ, ಮನೆಗೆ ನುಗ್ಗೆ ಬೆಂಕಿ ಹಚ್ಚಲು ಪ್ರಯತ್ನಿಸಿದ 15 ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದರು.
ಮತ್ತಷ್ಟು ಜನರನ್ನು ವಶಕ್ಕ ಪಡೆಯುವ ಸಾಧ್ಯತೆ ಇದ್ದು. ಸದ್ಯ, ಸಚಿವರ ಬಿ.ಸಿ.ನಾಗೇಶ್ ರವರ ಮನೆ ಮುಂದೆ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದ್ದು, ಐಜಿಪಿ ಚಂದ್ರಶೇಖರ್ ಹಾಗೂ ತುಮಕೂರು ಎಸ್ಪಿ ರಾಹುಲ್ ಕುಮಾರ್ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿದರು. ಇತ್ತ ಪೊಲೀಸರು ಈಗಾಗಲೇ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಎಲ್ಲಾ ಕಾರ್ಯಕರ್ತರ ಹುಡುಕಾಟದಲ್ಲಿ ಪೊಲೀಸರು ನಿರತರಾಗಿದ್ದಾರೆ.