ಬೆಂಗಳೂರು: ಕಬ್ಬನ್ ಪಾರ್ಕ್ ಹಾಗೂ ಲಾಲ್ ಬಾಗ್ ಬೆಂಗಳೂರು ಹಸಿರಿನ ಹಾಟ್ ಸ್ಪಾಟ್. ಆದ್ರೆ ಈಗ ಕಬ್ಬನ್ ಪಾರ್ಕ್ ವೈಶಿಷ್ಟ್ಯಕ್ಕೆ ಧಕ್ಕೆ ತರುವ ಕೆಲಸ ಸರ್ಕಾರದ ಇಲಾಖೆಯೊಂದರಿಂದ ಆಗುತ್ತಿದೆ. ಹೀಗಾಗಿ ಖುದ್ದು ಸಿಎಂ ಬಸವರಾಜ ಬೊಮ್ಮಾಯಿಗೆ ಪತ್ರ ಬರೆಯಲಾಗಿದೆ.
ಕಬ್ಬನ್ ಪಾರ್ಕ್ ಬೆಂಗಳೂರಿನ ವಾಯುವಿಹಾರಿಗಳ ಪಾಲಿಗೆ ಸ್ವರ್ಗ. ಹಸಿರ ರಾಶಿಯನ್ನೇ ಹೊದ್ದಿರುವ ಕಬ್ಬನ್ ಪಾರ್ಕ್ ಬೆಂಗಳೂರಿನ ಸೌಂದರ್ಯಕ್ಕೆ ಕಲಶವಿದ್ದಂತೆ. ಅಂದ ಹಾಗೆ ಇದೇ ಕಬ್ಬನ್ ಪಾರ್ಕ್ ವ್ಯಾಪ್ತಿಯಲ್ಲಿ ಲೋಕೋಪಯೋಗಿ ಇಲಾಖೆ ಇದೆ. ಈಗ ಈ ಇಲಾಖೆಯವರು, ಇಲ್ಲಿ ಶಾಪ್, ಹೋಟೆಲ್, ವಾಣಿಜ್ಯ ಮಳಿಗೆಗಳ ನಿರ್ಮಾಣಕ್ಕೆ ಟೆಂಡರ್ ಕರೆದಿದ್ದಾರೆ. ಇದು ಈಗ ಹೊಸ ವಿವಾದಕ್ಕೆ ಕಾರಣವಾಗಿದೆ.
ಕಬ್ಬನ್ ಪಾರ್ಕ್ಗೆ ಹೊಂದಿಕೊಂಡಂತೆ ಇರುವ ಲೋಕೋಪಯೋಗಿ ಇಲಾಖೆ ಈ ರೀತಿ ವಾಣಿಜ್ಯ ಚಟುವಟಿಕೆಗಳನ್ನು ಅರಂಭಿಸಲು ಮುಂದಾಗಿದೆ. ಆದ್ರೆ ಇದ್ರಿಂದ ಪಾರ್ಕ್ ಸೌಂದರ್ಯಕ್ಕೆ ಧಕ್ಕೆಯಾಗುತ್ತೆ. ಹೀಗಾಗಿ ಈ ಟೆಂಡರ್ ಪ್ರಕ್ರಿಯೆ ರದ್ದುಗೊಳಿಸಬೇಕು. ಕಬ್ಬನ್ ಪಾರ್ಕ್ಗೆ ಇದ್ರಿಂದ ತೊಂದರೆಯಾಗುತ್ತೆ ಎಂದು ಸಿಎಂ ಬೊಮ್ಮಾಯಿಗೆ ಸಾಮಾಜಿಕ ಕಾರ್ಯಕರ್ತರೊಬ್ಬರು ಪತ್ರ ಬರೆದಿದ್ದಾರೆ.
ಈ ಹಿಂದೆ ಕಬ್ಬನ್ ಪಾರ್ಕ್ ಆವರಣದೊಳಗೆ ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶ ನೀಡೋ ವಿಚಾರದಲ್ಲಿ ದೊಡ್ಡ ಮಟ್ಟದ ಗಲಾಟೆ ಸೃಷ್ಟಿಯಾಗಿತ್ತು. ಈಗ ವಾಣಿಜ್ಯ ಮಳಿಗೆಗಳ ನಿರ್ಮಾಣ ವಿಚಾರ ಸಿಎಂ ಅಂಗಳಕ್ಕೆ ತಲುಪಿದ್ದು, ಏನಾಗುತ್ತೆ ಕಾದು ನೋಡಬೇಕು.