ರಾಜ್ಯ

ಕೇರಳದಲ್ಲಿ ಕೋವಿಡ್‌ ಹೆಚ್ಚಳ: ಮುನ್ನೆಚ್ಚರಿಕೆಗೆ ಕ್ರಮ

ಬೆಂಗಳೂರು:  ಪಕ್ಕದ ರಾಜ್ಯ ಕೇರಳದಲ್ಲಿ ಹೊಸ ತಳಿಯ ಕೋವಿಡ್​ ಪ್ರಕರಣ ದಾಖಲಾಗುತ್ತಿರುವ ಹಿನ್ನೆಲೆ ಮುನ್ನೆಚ್ಚರಿಕೆಯಾಗಿ ಕರ್ನಾಟಕದಲ್ಲಿ ಆರ್​ಟಿಪಿಸಿಆರ್​​ ಕಿಟ್​ಗಳಿಂದ ಹಿಡಿದು ಕೊರೊನಾ ಪರೀಕ್ಷೆ ತನಕ ಎಲ್ಲದರ ಸಿದ್ಧತೆಯನ್ನು ಈಗಲೇ ಆರೋಗ್ಯ ಇಲಾಖೆ ಮಾಡಿಕೊಳ್ಳಲು ಮುಂದಾಗಿದೆ.

ಈ ಹಿಂದೆ ಭಾರತ ಸೇರಿದಂತೆ ವಿಶ್ವದಲ್ಲಿ ತಲ್ಲಣವನ್ನುಂಟು ಮಾಡಿದ್ದ ಕೋವಿಡ್​ ವೈರಸ್​ ಮತ್ತೆ ಸದ್ದು ಮಾಡುತ್ತಿದೆ. ಪಕ್ಕದ ರಾಜ್ಯಕೇರಳದಲ್ಲಿ ಹೊಸ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಎಚ್ಚೆತ್ತುಕೊಂಡಿರುವ ಕರ್ನಾಟಕ ಸರ್ಕಾರ ರಾಜ್ಯದಲ್ಲಿನ ಆಸ್ಪತ್ರೆಗಳಲ್ಲಿ ಪೂರ್ವ ಸಿದ್ಧತೆಯ ಮಾಕ್‌ ಡ್ರಿಲ್ ಕೈಗೊಳ್ಳಲು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ವಿಕಾಸಸೌಧದಲ್ಲಿ ಕೋವಿಡ್ ಸಂಬಂಧ ಅಧಿಕಾರಿಗಳ ಜೊತೆ ಸಭೆ ನಡೆಸಿ ಬಳಿಕ ಮಾತನಾಡಿದ ಸಚಿವರು, ಆಸ್ಪತ್ರೆಗಳಲ್ಲಿ ಐಸಿಯು ಬೆಡ್‌ಗಳು, ಆಮ್ಲಜನಕದ ಲಭ್ಯತೆ ಮತ್ತು ಔಷಧಗಳು ಸೇರಿದಂತೆ ಹಾಸಿಗೆಗಳ ಸಾಮರ್ಥ್ಯ ಪರಿಶೀಲಿಸಲು ಎಲ್ಲಾ ಆಸ್ಪತ್ರೆಗಳಲ್ಲಿ ಪೂರ್ವ ಸಿದ್ಧತೆ ಪರಿಶೀಲನೆ ನಡೆಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಪರಿಸ್ಥಿತಿ ಆತಂಕಕಾರಿ ಆಗಿಲ್ಲದಿದ್ದರೂ ಅಂತಹ ಪರಿಸ್ಥಿತಿ ಮರುಕಳಿಸಿದರೆ ಸನ್ನದ್ಧರಾಗಿರಲು ಕ್ರಮ ಕೈಗೊಳ್ಳುತ್ತೇವೆ. ಯಾವುದೇ ಕೊರತೆಯಿದ್ದಲ್ಲಿ ಅದನ್ನು ಈಗಲೇ ಸರಿಪಡಿಸಲು ನಿರ್ದೇಶನ ನೀಡಿರುವುದಾಗಿ ತಿಳಿಸಿದರು.

andolanait

Recent Posts

ಮೈಸೂರು | ಗುಂಡೇಟಿನಿಂದ ಚಿರತೆ ಸಾವು ; ತನಿಖೆಗೆ ಈಶ್ವರ ಖಂಡ್ರೆ ಆದೇಶ

ಮೈಸೂರು : ಹುಣಸೂರು ವಿಭಾಗದ ಪಿರಿಯಾಪಟ್ಟಣ ವ್ಯಾಪ್ತಿಯ ಗುಳ್ಳೆದಹಳ್ಳ ರಾಜ್ಯ ಅರಣ್ಯದಿಂದ 2 ಕಿ.ಮೀ ದೂರದಲ್ಲಿರುವ ಕೊಪ್ಪ ವಿಭಾಗದಲ್ಲಿ ಗುಂಡೇಟಿನಿಂದ…

5 hours ago

ಶೀಘ್ರದಲ್ಲೇ ದ್ವಿತೀಯ ಪಿಯುಸಿ ಫಲಿತಾಂಶ : ಡಿಜಿಲಾಕರ್‌ನಲ್ಲೂ ಲಭ್ಯ

ಬೆಂಗಳೂರು : ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ನಡೆಸಿದ 2025-2026ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯ…

6 hours ago

ಏ.7ರಿಂದ ಮೂರು ದಿನ ಮಳೆ, ಮೈಸೂರಿಗೆ ಯೆಲ್ಲೋ ಅಲರ್ಟ್‌

ಬೆಂಗಳೂರು : ಕರ್ನಾಟಕದಲ್ಲಿ ಪೂರ್ವ ಮುಂಗಾರು ಏಪ್ರಿಲ್ 2 ನೇ ವಾರದಿಂದ ಚುರುಕಾಗುತ್ತಿದ್ದು, ಏಪ್ರಿಲ್ 7ರಿಂದ ಮೂರು ದಿನಗಳು ರಾಜ್ಯದಲ್ಲಿ…

6 hours ago

ಟ್ರಂಪ್ ಅಂತಿಮ ಗಡುವು ; ಪ್ರತಿದಾಳಿ ಎಚ್ಚರಿಕೆ ನೀಡಿದ ಇರಾನ್‌

ವಾಷಿಂಗ್ಟನ್ : ಒಪ್ಪಂದಕ್ಕೆ ಬನ್ನಿ, ಇಲ್ಲವೇ ಶರಣಾಗಿ, ಇಲ್ಲದಿದ್ದರೆ ಮಂಗಳವಾರ ರಾತ್ರಿ 8 ಗಂಟೆಯ ನಂತರ ಮತ್ತಷ್ಟು ಮಾರಕ ದಾಳಿ…

6 hours ago

ಕಸ್ಟಡಿ ಸಾವು | 9 ಮಂದಿ ಪೊಲೀಸರಿಗೆ ಮರಣದಂಡನೆ ; ಮಧುರೈ ಕೋರ್ಟ್‌ ಮಹತ್ವದ ತೀರ್ಪು

ಮದುರೈ : ತಮಿಳುನಾಡಿನ ತೂತುಕುಡಿ ಜಿಲ್ಲೆಯ ಶಾಂತನ್‌ಕುಲಂ ಪೊಲೀಸ್ ಠಾಣೆ ಕಸ್ಟಡಿಯಿಂದಲೇ ತಂದೆ,ಮಗ ಸಾವನ್ನಪ್ಪಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಸೋಮವಾರ…

7 hours ago

ಇಂಡಿಯಾ ಸ್ಕಿಲ್ಸ್ 2025-26 ರಾಷ್ಟ್ರೀಯ ಸ್ಪರ್ಧೆ : ಕರ್ನಾಟಕಕ್ಕೆ 3ನೇ ಸ್ಥಾನ

ಬೆಂಗಳೂರು : ಕೌಶಲ್ಯ ಕ್ಷೇತ್ರದಲ್ಲಿ ಕರ್ನಾಟಕ ಈಗ ಇಡೀ ದೇಶದಲ್ಲಿ ಮುಂಚೂಣಿಯತ್ತ ಸಾಗುತ್ತಿದೆ. ಇತ್ತೀಚೆಗೆ ಗ್ರೇಟರ್ ನೋಯ್ಡಾದ ಇಂಡಿಯಾ ಎಕ್ಸ್‌ಪೋ…

7 hours ago