ಬೆಂಗಳೂರು: ಕೊರೋನಾ ರೂಪಾಂತರಿ ಜೆಎನ್1 ಭೀತಿ ಹಿನ್ನಲೆಯಲ್ಲಿ, ನಾಳೆ ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ತಜ್ಞರೊಂದಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಮಹತ್ವದ ಸಭೆಯನ್ನು ನಡೆಸಲಿದ್ದಾರೆ.
ದೇಶದ ವಿವಿಧ ರಾಜ್ಯಗಳಲ್ಲಿ ಕೋವಿಡ್ ರೂಪಾಂತರಿ ಜೆಎನ್1 ಆರ್ಭಟಿಸುತ್ತಿದೆ. ಅದರಲ್ಲೂ ನೆರೆಯ ಕೇರಳ ರಾಜ್ಯದಲ್ಲಿ ಕೊರೋನಾ ಜೆಎನ್1 ರೂಪಾಂತರಿ ಹೆಚ್ಚೇ ಇದೆ. ಈ ಹಿನ್ನಲೆಯಲ್ಲಿ ಈಗಾಗಲೇ ದೇಶಾದ್ಯಂತ ಕೇಂದ್ರ ಸರ್ಕಾರದಿಂದ ಕೋವಿಡ್ ಮಾರ್ಗಸೂಚಿಯನ್ನು ಜಾರಿಗೊಳಿಸಲಾಗಿದೆ.
ಇತ್ತ ಕರ್ನಾಟಕದಲ್ಲೂ ಕೊರೋನಾ ತಡೆಯ ಮುಂಜಾಗ್ರತಾ ಕ್ರಮವಾಗಿ ಮಾರ್ಗಸೂಚಿಯನ್ನು ಜಾರಿಗೊಳಿಸಲಾಗಿದೆ. 60 ವರ್ಷ ಮೇಲ್ಪಟ್ಟವರಿಗೆ ಮಾಸ್ಕ್ ಧರಿಸೋದು ಕಡ್ಡಾಯಗೊಳಿಸಲಾಗಿದೆ. ಈಗಾಗಲೇ ಬೆಂಗಳೂರಿನಲ್ಲಿ ವೃದ್ಧರೊಬ್ಬರು ಕೋವಿಡ್‌ಗೆ ಬಲಿಯಾಗಿದ್ದಾರೆ.
ಈ ಎಲ್ಲಾ ಕಾರಣದಿಂದ ನಾಳೆ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ತಜ್ಞರೊಂದಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಮಹತ್ವದ ಸಭೆಯನ್ನು ನಡೆಸಲಿದ್ದಾರೆ.
ನಾಳೆ ಮಧ್ಯಾಹ್ನ 1 ಗಂಟೆಗೆ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸಭೆಯನ್ನು ನಡೆಸಲಿದ್ದು, ತಜ್ಞರೊಂದಿಗೆ ಚರ್ಚಿಸಿ ಕೋವಿಡ್ ತಡೆಗೆ ಮಹತ್ವದ ನಿರ್ಧಾರಗಳನ್ನು ಪ್ರಕಟಿಸೋ ಸಾಧ್ಯತೆ ಇದೆ.
ಅಕ್ಷತಾ ಹೆಣ್ಣಿನ ತಾಯ್ತನ ಆಕೆ ಗರ್ಭವತಿಯೆಂದು ತಿಳಿದಾಗಿನಿಂದಲೇ ಜಾಗೃತವಾಗುತ್ತದೆ. ತನಗೆ ಹುಟ್ಟಲಿರುವ ಮಗುವಿನ ಬಗ್ಗೆ ಅಂದಿನಿಂದಲೇ ಬಣ್ಣಬಣ್ಣದ ಕನಸುಗಳನ್ನು ಕಾಣಲಾರಂಭಿಸುತ್ತಾಳೆ.…
ಸಿರಿ ಮೈಸೂರು ಮುಖಕ್ಕೆ ಪ್ರಸಾದನ ಮಾಡಿಕೊಂಡು, ಭಾರೀ ವಸ್ತ್ರ ಧರಿಸಿ, ಕತ್ತಿ ಹಿಡಿದು, ವೀರಭದ್ರನ ಧ್ಯಾನ ಮಾಡಿ ವೇದಿಕೆ ಏರಿ…
ಸ್ವಾಮಿ ಪೊನ್ನಾಚಿ ಮಹದೇಶ್ವರನ ಬೆಟ್ಟದ ಪೋಡಿನಿಂದ ಬಂದು ನಮ್ಮ ಮನೆಯಲ್ಲಿ ದನ ಮೇಯಿಸುತ್ತಿದ್ದ ಬೊಮ್ಮ ನನ್ನು ಕಂಡರೆ ನನಗೆ ಅಸಾಧ್ಯ…
ಸಿದ್ದೇಗೌಡ ಕೊಡಿಯಾಲ ಸಮಯಕ್ಕೆ ಬಾರದ ಅಧಿಕಾರಿ-ಸಿಬ್ಬಂದಿ:ಜನತೆ ಹೈರಾಣ ಶ್ರೀರಂಗಪಟ್ಟಣ: ತಾಲ್ಲೂಕಿನ ಅರಕೆರೆ ನಾಡಕಚೇರಿಯು ಅವ್ಯವಸ್ಥೆಯ ಗೂಡಾಗಿ ಮಾರ್ಪಟ್ಟಿದೆ. ಈ ನಾಡಕಚೇರಿಯಲ್ಲಿ…
ಲಕ್ಷ್ಮೀಕಾಂತ್ ಕೋಮಾರಪ್ಪ ಫಸಲು ನಾಶ, ಕಂಗಾಲಾದ ಕೃಷಿಕರು; ಸೂಕ್ತ ಕ್ರಮಕ್ಕೆ ಬೆಳೆಗಾರರ ಒತ್ತಾಯ ಸೋಮವಾರಪೇಟೆ: ತಾಲ್ಲೂಕಿನ ಗಣಗೂರು ಗ್ರಾಮ ಪಂಚಾಯಿತಿ…
ಎಚ್.ಎಸ್.ದಿನೇಶ್ ಕುಮಾರ್ ಕಟ್ಟುನಿಟ್ಟಿನ ಕ್ರಮಗಳ ನಡುವೆಯೂ ನಿಲ್ಲದ ದಂಧೆ; ಪ್ರತಿ ಬಾರಿಯೂ ದಂಧೆಗೆ ಹೊಸ ದಾರಿ ಹುಡುಕುವ ದುರುಳರು ಮೈಸೂರು:…