ಬೆಂಗಳೂರು: ಸುರಕ್ಷಿತ ಮತ್ತು ಹೆಚ್ಚು ಸುಸ್ಥಿರ ಭವಿಷ್ಯದ ವಿಜ್ಞಾನದ ಶ್ರೇಯೋಭಿವೃದ್ಧಿಗಾಗಿ ಕಾರ್ಪೋರೇಟ್ ವಲಯ ಮುಂದಾಗಬೇಕು ಎಂದು ವಿಜ್ಞಾನ ಮತ್ತು ತಂತ್ರಜ್ಞಾನ, ಸಣ್ಣ ನೀರಾವರಿ ಸಚಿವ ಎನ್.ಎಸ್. ಬೋಸರಾಜು ಶನಿವಾರ (ಆಗಸ್ಟ್ 24) ಹೇಳಿದ್ದಾರೆ.
ಬಳ್ಳಾರಿ ರಸ್ತೆಯಲ್ಲಿ “ಬೆಂಗಳೂರು ಸೈನ್ಸ್ ಗ್ಯಾಲರಿ” ಯಲ್ಲಿ ಆಯೋಜಿಸಲಾಗಿರುವ ಸೈನ್ಸ್ – 560 ಪ್ರದರ್ಶನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ವಿಜ್ಞಾನ, ತಂತ್ರಜ್ಞಾನದ ಅಡಿಪಾಯವನ್ನು ಸುಗಮಗೊಳಿಸಲು ಮತ್ತು ವಿಜ್ಞಾನ ವಲಯದ ಪ್ರವೇಶ, ಈ ಕ್ಷೇತ್ರ ಎಲ್ಲರಿಗೂ ಲಭ್ಯವಾಗುವಂತೆ ಮಾಡಲು ನಮ್ಮ ಪ್ರಯಾಣದಲ್ಲಿ ನಮಗೆ ಸಹಾಯ ಮಾಡಲು, ಸಂಯೋಜಿಸಲು, ಸಹಕರಿಸಲು ಮತ್ತು ಪಾಲುದಾರರಾಗಲು ಕಾರ್ಪೊರೇಟ್ ನಾಯಕರಿಗೆ ಆಹ್ವಾನ ನೀಡಲಾಗುವುದು ಎಂದರು.
ಶಾಂತಿ, ಪ್ರಗತಿ ಮತ್ತು ಸಮೃದ್ಧಿಯನ್ನು ಉತ್ತೇಜಿಸಲು ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೇರಕ ಶಕ್ತಿಗಳಾಗಿವೆ. ಎಲ್ಲರಿಗೂ ಕೈಗೆಟುಕುವ. ಒಟ್ಟಾಗಿ ಸಾಗುವ ಮೂಲಕ ಮತ್ತು ಪರಸ್ಪರ ಬೆಂಬಲಿಸುವ ಮೂಲಕ ನಾವು ಉಜ್ವಲ ಮತ್ತು ಹೆಚ್ಚು ಸಮೃದ್ಧ ಕರ್ನಾಟಕವನ್ನು ನಿರ್ಮಿಸಬಹುದು. ಬೆಂಗಳೂರಿನಲ್ಲಿ ವಿಜ್ಞಾನದ ಶ್ರೀಮಂತ ಇತಿಹಾಸವನ್ನು ಆಚರಿಸುವ ಮತ್ತು ಭವಿಷ್ಯದ ಆವಿಷ್ಕಾರಗಳನ್ನು ನಾವು ಎದುರುನೋಡುತ್ತಿದ್ದೇವೆ. ನಗರದ ವಿಜ್ಞಾನದ ಯಶೋಗಾಥೆಯನ್ನು ಇನ್ನಷ್ಟು ಬರೆಯಲಾಗುವುದು. ಉತ್ತಮವಾದದ್ದು ಇನ್ನೂ ಬರಬೇಕಿದೆ ಎಂದು ಹೇಳಿದರು.
ಬೆಂಗಳೂರು ನಗರ ದೇಶದ ವೈಜ್ಞಾನಿಕ ಪಥವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದು, ಇಂತಹ ಶ್ರೀಮಂತ ಇತಿಹಾಸದ ಆಚರಣೆಯ ಭಾಗವಾಗಿರುವುದು ಹೆಮ್ಮೆಯ ವಿಷಯ. ಇದು ನಮ್ಮ ನಗರವನ್ನು ಮಾತ್ರವಲ್ಲದೆ ನಮ್ಮ ರಾಷ್ಟ್ರದ ವೈಜ್ಞಾನಿಕ ಪಥವನ್ನು ರೂಪಿಸಿದೆ. ಕೇವಲ ಬೆಂಗಳೂರು ಮಾತ್ರವಲ್ಲದೆ ಯುವ ಸಮೂಹ ಸಾರ್ವಜನಿಕವಾಗಿ ತೊಡಗಿಕೊಳ್ಳುವ ಮೂಲಕ ರಾಷ್ಟ್ರದಾದ್ಯಂತ ಸ್ಫೂರ್ತಿಯ ಮೂಲವಾಗಿದೆ ಎಂದರು.
ರೋಹಿಣಿ ನಿಲೇಕಣಿ ಅವರಂತಹ ಲೋಕೋಪಕಾರಿಗಳ ಔದಾರ್ಯದಿಂದ ಬೆಂಬಲಿತವಾದ ಬೆಂಗಳೂರಿನಲ್ಲಿ ದಶಕಗಳ ವೈಜ್ಞಾನಿಕ ನಾವೀನ್ಯತೆ ಮತ್ತು ಸಾಧನೆಗಳನ್ನು ಅನ್ವೇಷಿಸುವ ಪಯಣ ಹೊಂದಿದ್ದೇವೆ. ಈ ಪ್ರದರ್ಶನವು ನಮ್ಮ ನಗರವನ್ನು ಜ್ಞಾನ ಮತ್ತು ಆವಿಷ್ಕಾರದ ದಾರಿದೀಪವನ್ನಾಗಿ ಮಾಡಿದ ಮನಸ್ಸು ಮತ್ತು ಸಂಸ್ಥೆಗಳಿಗೆ ಸಂದ ಗೌರವವಾಗಿದೆ. ಈ ಪ್ರದರ್ಶನ ಕೋಲಾರ ಚಿನ್ನದ ಗಣಿ ನ್ಯೂಟ್ರಿನೊ ಪ್ರಯೋಗಗಳಿಂದ ಹಿಡಿದು ಎಚ್.ಎ.ಎಲ್ ನಲ್ಲಿ ಮೊದಲ ದೇಶೀಯ ವಿಮಾನದ ಅಭಿವೃದ್ಧಿಯವರೆಗೆ ನಮ್ಮನ್ನು ಕರೆದೊಯ್ಯುತ್ತದೆ. ಇದು ಪ್ರಮುಖ ವೈಜ್ಞಾನಿಕ ಸಾಧನೆಗಳಲ್ಲಿ ನಗರದ ಪಾತ್ರವನ್ನು ಅನಾವರಣಗೊಳಿಸುತ್ತದೆ. ಇಂತಹ ಉತ್ತಮ ಪ್ರದರ್ಶನಗಳನ್ನ ಸೈನ್ಸ್ ಗ್ಯಾಲರಿಯಲ್ಲಿ ಆಯೋಜನೆ ಮಾಡುವ ನಿಟ್ಟಿನಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ನೇತೃತ್ವದ ಸರಕಾರ 10 ಕೋಟಿ ರೂಪಾಯಿಗಳ ಕಾರ್ಪಸ್ ಫಂಡ್ ಕೂಡಾ ನೀಡಿದೆ ಎಂದು ಸಚಿವ ಎನ್.ಎಸ್. ಬೋಸರಾಜು ಹೇಳಿದರು.
ಈ ಪ್ರದರ್ಶನವು ಭವಿಷ್ಯದ ಪೀಳಿಗೆಯ ಚಿಂತಕರು ಮತ್ತು ನವೋದ್ಯಮಿಗಳಿಗೆ ಸ್ಫೂರ್ತಿ ನೀಡಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಗೆಗೆ ಅಗತ್ಯವಿರುವ ಎಲ್ಲ ಬೆಂಬಲವನ್ನು ನೀಡಲು ಸರ್ಕಾರ ಬದ್ಧವಾಗಿದೆ ಎಂದು ನುಡಿದರು.
ಬೆಂಗಳೂರು: ಈ ಬಾರಿ ಹೊಸ ವರ್ಷ ಸ್ವಾಗತಿಸಲು ಬೆಂಗಳೂರು ನಗರ ಸಜ್ಜಾಗಿದ್ದು, ಪೊಲೀಸ್ ಇಲಾಖೆ ಹೊಸ ಮಾರ್ಗಸೂಚಿ ಪ್ರಕಟಿಸಿದೆ. 1)…
ಹುಣಸೂರು: ಚಾಲಕನ ನಿಯಂತ್ರಣ ತಪ್ಪಿ ಅಪೆ ಆಟೋವೊಂದು ಕೆರೆಗೆ ಉರುಳಿದ ಪರಿಣಾಮ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹುಣಸೂರು-ಮೈಸೂರು ಹೆದ್ದಾರಿಯಲ್ಲಿ…
ಎಚ್.ಡಿ.ಕೋಟೆ ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ಸಾರ್ವಜನಿಕ ಶೌಚಾಲಯಗಳಿಲ್ಲದೆ ಸಾರ್ವಜನಿಕರು ರಸ್ತೆ ಬದಿಗಳಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ. ಇದರಿಂದ ಅನೈರ್ಮಲ್ಯ ವಾತಾವರಣ…
ವಿಮಾ ವಲಯದಲ್ಲಿ ಶೇ. ೧೦೦ ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆ(ಎ-ಡಿಐ)ಯಿಂದ ವಿಮಾ ರಕ್ಷಣೆ ಪಡೆದ ಜೀವಗಳ ಮತ್ತು ಆಸ್ತಿಗಳ…
ರಾಜ್ಯದ ಅತ್ಯಂತ ಸಜ್ಜನ ರಾಜಕಾರಣಿಗಳಲ್ಲಿ ಒಬ್ಬರೆನಿಸಿದ್ದ ಹಿರಿಯ ರಾಜಕೀಯ ಮುತ್ಸದ್ದಿ ಶಾಮನೂರು ಶಿವಶಂಕರಪ್ಪನವರ ನಿಧನ ನಿಜಕ್ಕೂ ನೋವಿನ ಸಂಗತಿ. ದೇಶದ…
ಶತ್ರುಗಳಿಗೆ ಸೆರೆ ಸಿಕ್ಕು ಚಿತ್ರ ಹಿಂಸೆ ಅನುಭವಿಸಿದರೂ ಗುಟ್ಟು ಬಿಡದ ನೂರ್ ಇನಾಯತ್ ಖಾನ್ ನವೆಂಬರ್ ತಿಂಗಳಲ್ಲಿ ಫ್ರಾನ್ಸ್ ಸರ್ಕಾರ…