ರಾಜ್ಯ

ಬಡವರ ಬದುಕನ್ನು ಬೀದಿಗೆ ತಂದು ನಿಲ್ಲಿಸಿದ್ದೇ ಕಾಂಗ್ರೆಸ್‍ನ ಸಾಧನೆ : ಬಿಜೆಪಿ

ಬೆಂಗಳೂರು : ಬಡವರ ಬದುಕನ್ನು ಬಂಗಾರಗೊಳಿಸುತ್ತೇನೆಂದು ಸುಳ್ಳು ಹೇಳಿ ಅಧಿಕಾರಕ್ಕೇರಿದ ಕಾಂಗ್ರೆಸ್, ಬಡವರ ಬದುಕನ್ನು ಅಕ್ಷರಶಃ ಬೀದಿಗೆ ತಂದು ನಿಲ್ಲಿಸಿದ್ದೇ ಕಾಂಗ್ರೆಸ್‍ನ ಸಾಧನೆ ಎಂದು ಬಿಜೆಪಿ ಟೀಕಾಪ್ರಹಾರವನ್ನು ಮುಂದುವರೆಸಿದೆ.

ಈ ಕುರಿತು ಸಾಮಾಜಿ ಜಾಲತಾಣದಲ್ಲಿ ಸಾಲು ಸಾಲು ಪೋಸ್ಟ್ ಮಾಡಿರುವ ಬಿಜೆಪಿ, ದಕ್ಷಿಣ ಏಷ್ಯಾದಲ್ಲಿಯೇ ಅತ್ಯಂತ ದೊಡ್ಡ ಕೈಗಾರಿಕಾ ಪ್ರದೇಶವಾದ ಪೀಣ್ಯ ಕೈಗಾರಿಕಾ ಪ್ರದೇಶಕ್ಕೆ ಸರ್ಕಾರದ ನಾಲ್ಕು ತಿಂಗಳ ಆಡಳಿತ ಮರಣಶಾಸನವಾಗಿದೆ ಎಂದು ವಾಗ್ದಾಳಿ ನಡೆಸಿದೆ.

ಕೈ ಸರ್ಕಾರ ಹೇರುತ್ತಿರುವ ನಿರಂತರ ಲೋಡ್ ಶೆಡ್ಡಿಂಗ್ ಹಾಗೂ ಅವೈಜ್ಞಾನಿಕ ದರ ಏರಿಕೆಯಿಂದ ಪೀಣ್ಯ ಕೈಗಾರಿಕಾ ಪ್ರದೇಶದ ಕೈಗಾರಿಕೆಗಳಿಗೆ ಶೇ.30ಕ್ಕಿಂತಲೂ ಅಕ ನಷ್ಟವಾಗುತ್ತಿದ್ದು, ವಿಪರೀತ ಉದ್ಯೋಗ ಕಡಿತಕ್ಕೆ ಮುಂದಾಗಿದ್ದು ಮಾತ್ರವಲ್ಲದೆ, ರಾಜ್ಯದಿಂದಲೇ ವಲಸೆ ಹೋಗುವತ್ತ ಚಿಂತಿಸಿವೆ ಎಂದು ಆರೋಪಿಸಿದೆ.
ಕಾಂಗ್ರೆಸ್ ಬಂದಿದೆ ಆದರೆ ಜನರಿಗೆ ಮಾತ್ರ ಏನೂ ಬರುತ್ತಿಲ್ಲ, ಸಿಗುತ್ತಿಲ್ಲ, ಕೊಡುತ್ತಿಲ್ಲ, ತಲುಪುತ್ತಲೂ ಇಲ್ಲ, ಗೃಹ ಜ್ಯೋತಿ ಬರಲಿದೆ ಅಂದರು, ಈಗ ವಿದ್ಯುತ್ತೇ ಕೊಡುತ್ತಿಲ್ಲ.,ಗೃಹ ಲಕ್ಷ್ಮಿ ಅಂದರು, ಎರಡನೇ ತಿಂಗಳಿಂದ ಹಣವನ್ನೇ ಹಾಕಿಲ್ಲ..!

ಅನ್ನಭಾಗ್ಯ ಅಂದರು, ಮೋದಿ ಸರ್ಕಾರದ ಅಕ್ಕಿನೂ ಕಾಂಗ್ರೆಸ್ಸಿಗರೇ ತಿಂದರು. ಉಚಿತ ಬಸ್, ಶಕ್ತಿ ಯೋಜನೆ ಅಂದರು, ಈಗ ಬಸ್‍ಗಳನ್ನೇ ಬಿಡುತ್ತಿಲ್ಲ, ಯುವ ನಿಧಿ ಅಂದರು, ಅದು ಜನರಿಗೆ ಬರಲೇ ಇಲ್ಲ.
ಅಂಗನವಾಡಿ ಕಾರ್ಯಕರ್ತೆಯರಿಗೆ 10 ಸಾವಿರ ಅಂದರು, ಈಗ ಸಂಬಳವನ್ನೇ ಕೊಡುತ್ತಿಲ್ಲ, ಇಂದಿರಾ ಕ್ಯಾಂಟೀನ್ ಸಂಖ್ಯೆ ಹೆಚ್ಚಳ ಅಂದರು ಈಗ ಇದ್ದವೂ ಬಂದ್ ಆಗುತ್ತಿವೆ, ಅಕ್ಕಿ ಇಲ್ಲ ಜನರಿಗೆ ದುಡ್ಡು ತಿನ್ನಿ ಅಂದರು, ಈಗ ದುಡ್ಡನ್ನೂ ಕೊಡುತ್ತಿಲ್ಲ ಎಂದು ಟೀಕೆಗಳ ಸುರಿಮಳೆ ಗೈದಿದೆ.

lokesh

Recent Posts

ಸಿಎಂಗೆ ವಿದ್ಯಾರ್ಥಿಗಳ ಪತ್ರ

ಮಹಾದೇಶ್ ಎಂ ಗೌಡ ಹನೂರು: ತಮ್ಮ ಊರಿನಿಂದ ದೂರದಲ್ಲಿರುವ ಶಾಲಾ ಕಾಲೇಜುಗಳಿಗೆ ಹೋಗುವುದಕ್ಕೆ ಸಮರ್ಪಕವಾಗಿ ಬಸ್ ಸೌಲಭ್ಯ ಕಲ್ಪಿಸಲು ಕೋರಿ…

1 hour ago

ದಿವ್ಯ ಎಂಬ ಅಂದಿನ ಕಾಲದ ಪಣ ಪರೀಕ್ಷೆ

ಬಿ.ಎಸ್.ವಿನಯ್ ಮೊನ್ನೆ ಯಳಂದೂರಿನ ಬೀದಿಯಲ್ಲಿ ಸಾಗುತ್ತಿದ್ದಾಗ ಬಳೆಮಂಟಪದ ಮುಂದೆ ಪರಿಚಿತ ಹಿರಿಯರೊಬ್ಬರು ಎದುರಾದರು. ‘ಯಜಮಾನರೇ, ಕಾರ್ಯಕ್ರಮಕ್ಕೆ ಯಾಕೆ ಬರಲಿಲ್ಲ?’ ಕೇಳಿದರೆ…

1 hour ago

ಎಮ್ಮೆ ನಿನಗೆ ಸಾಟಿ ಇಲ್ಲ…

ವಿನುತ ಕೋರಮಂಗಲ ನಮ್ಮ ಹಟ್ಟಿಯಿಂದ ನಾಲ್ಕೈದು ಕಿ.ಮೀ. ದೂರವಿರುವ ನಮ್ಮೂರಿನ ಕೆರೆಯ ಅಂಗಳಕ್ಕೆ ನಾವೇನು ನಡೆದುಕೊಂಡು ಹೋಗುತ್ತಿರಲಿಲ್ಲ. ಗಂಗೆ ಎಂದು…

2 hours ago

ಭಾನುವಾರದ ಪುರವಣಿಗಳಲ್ಲಿ ಸಾಹಿತ್ಯ ಯಾಕೆ ಮಾಯ?

ಅಕ್ಷತಾ ಖಾಲಿ ಹಾಳೆಯ ಒಂದೇ ಮಗ್ಗುಲಿನಲ್ಲಿ ಚಿತ್ತಿಲ್ಲದಂತೆ ಬರೆದು, ಪದ ಮಿತಿಯನ್ನು ಬೆರಳು ಲೆಕ್ಕದಲ್ಲಿ ಎಣಿಸಿ, ಪತ್ರಿಕೆಯ ವಿಳಾಸಕ್ಕೆ ಕಳುಹಿಸಿದ…

2 hours ago

ಹನೂರು: ಏಕಕಾಲದಲ್ಲೇ ಕಾಣಿಸಿಕೊಂಡ ಎರಡು ಚಿರತೆಗಳು

ಹನೂರು: ತಾಲೂಕಿನ ಲೊಕ್ಕನಹಳ್ಳಿ ಹೋಬಳಿ ವ್ಯಾಪ್ತಿಯ ಮಲೆ ಮಹದೇಶ್ವರ ಅರಣ್ಯ ಪ್ರದೇಶ ವ್ಯಾಪ್ತಿಯ ಬಳಗುಡ್ಡ ಬಿಟ್ ವ್ಯಾಪ್ತಿಯಲ್ಲಿ ಏಕಕಾಲಕ್ಕೆ ಎರಡು…

13 hours ago