ಬೆಂಗಳೂರು: ‘ಸಿದ್ದರಾಮಯ್ಯ-೭೫’ ಅಮೃತಮಹೋತ್ಸವದ ಅಭೂತಪೂರ್ವ ಯಶಸ್ಸಿನ ಬಳಿಕ ಕಾಂಗ್ರೆಸ್ ತಿರಂಗ ಯಾತ್ರೆಗೆ ಚಾಲನೆ ನೀಡಿದ್ದು, ಆಗಸ್ಟ್ ೧೫ರಂದು ಬೆಂಗಳೂರಿನಲ್ಲಿ ಸುಮಾರು ಒಂದು ಲಕ್ಷ ಮಂದಿ ಸಮಾವೇಶಗೊಂಡು ಪಾದಯಾತ್ರೆ ನಡೆಸಲಿದ್ದಾರೆ.
ಅಂದು ಮಧ್ಯಾಹ್ನ ೨ ಗಂಟೆಯಿಂದ ನಗರದ ಮೆಜೆಸ್ಟಿಕ್‌ನಲ್ಲಿರುವ ಸಂಗೋಳ್ಳಿ ರಾಯಣ್ಣ ಪ್ರತಿಮೆಯಿಂದ ಸ್ವಾತಂತ್ರ್ಯ ನಡಿಗೆ ಆರಂಭಗೊಂಡು ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಸಮಾವೇಶಗೊಳ್ಳಲಿದೆ. ಸುಮಾರು ಒಂದು ಲಕ್ಷ ಮಂದಿ ರಾಷ್ಟ್ರಧ್ವಜ ಹಿಡಿದು ಪಾದಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ. ಪಕ್ಷದ ಕಾರ್ಯಕರ್ತರಷ್ಟೆ ಅಲ್ಲದೆ ಸ್ವಯಂ ಸೇವಾಸಂಸ್ಥೆಗಳು, ಚಲನಚಿತ್ರರಂಗ, ಸಾಂಸ್ಕೃತಿಕ ಕ್ಷೇತ್ರದಲ್ಲಿರುವವರು, ಸಾಹಿತಿಗಳು, ಪ್ರಗತಿಪರರಿಗೆ ಸ್ವತಂತ್ರ ನಡಿಗೆಯಲ್ಲಿ ಭಾಗವಹಿಸಲು ಕರೆ ನೀಡಲಾಗಿದೆ.
ಅಜಾದಿ ಕಾ ಅಮೃತ್ ಮಹೋತ್ಸವದ ಮೂಲಕ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಸ್ವಾತಂತ್ರ್ಯ ಹೋರಾಟವನ್ನು ಹೈಜಾಕ್ ಮಾಡಿದೆ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಪಕ್ಷವಾದರೂ ಅಮೃತ ಮಹೋತ್ಸವದಲ್ಲಿ ಕಾಂಗ್ರೆಸ್ ಅಪರಿಚಿತವಾಗಿ ಉಳಿಯುವಂತಾಗಿದೆ ಎಂಬ ಆಕ್ಷೇಪಗಳು ಕೇಳಿ ಬಂದಿದ್ದವು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್, ಪ್ರತಿಯೊಂದು ವಿಧಾನಸಭಾ ಕ್ಷೇತ್ರದಲ್ಲೂ ತಲಾ ೭೫ ಕಿಲೋ ಮೀಟರ್ ತಿರಂಗ ಯಾತ್ರೆ ನಡೆಸಲು ನಿರ್ಧರಿಸಿದೆ. ಅದರ ಪ್ರಕಾರ ಆಗಸ್ಟ್ ೧ರಿಂದಲೇ ಯಾತ್ರೆಗಳು ಕೆಲವು ಕಡೆಗಳಲ್ಲಿ ಆರಂಭಗೊಂಡಿವೆ. ರಾಜಧಾನಿ ಕೇಂದ್ರ ಸ್ಥಾನದಲ್ಲಿ ಆಗಸ್ಟ್ ೧೫ರಂದು ಬೃಹತ್ ಸಮಾವೇಶ ಮತ್ತು ಪಾದಯಾತ್ರೆಯನ್ನು ಸಂಯೋಜಿಸಲಾಗಿದೆ.
- ಮುಖಪುಟ
- ಮೈಸೂರು
- ಜಿಲ್ಲೆಗಳು
- ರಾಜ್ಯ
- ದೇಶ- ವಿದೇಶ
- ರಾಜಕೀಯ
- ಅಪರಾಧ
- ಮಹಿಳೆ
- ಕೃಷಿ
- ವಿಜ್ಞಾನ ತಂತ್ರಜ್ಞಾನ
- ಕ್ರೀಡೆ
- ವಾಣಿಜ್ಯ
- ಚಿತ್ರಸಂತೆ
- ವಿಶೇಷ
- ಆಂದೋಲನ ಪುರವಣಿ
- ಎಡಿಟೋರಿಯಲ್
- ಆಂದೋಲನ 50
Subscribe to Updates
Get the latest creative news from FooBar about art, design and business.
ಆ.15 ಕಾಂಗ್ರೆಸ್‌ನಿಂದ ತಿರಂಗ ಯಾತ್ರೆ ಬೆಂಗಳೂರಿನಲ್ಲಿ 1 ಲಕ್ಷ ಮಂದಿಯಿಂದ ಪಾದಯಾತ್ರೆಗೆ ಸಿದ್ಧತೆ
Previous Article‘ಹರ್ ಘರ್ ತಿರಂಗಾʼ ಅಭಿಯಾನ: ನ್ಯಾಯಾಲಯ, ನ್ಯಾಯಾಂಗ ಅಧಿಕಾರಿಗಳು ತಮ್ಮ ಮನೆಯಲ್ಲಿ ಧ್ವಜ ಹಾರಿಸಲು ಹೈಕೋರ್ಟ್ ಸುತ್ತೋಲೆ
Next Article ಕೊಡಗಿನಲ್ಲಿ ಹೆಚ್ಚುತ್ತಿದೆ ಕೈ, ಕಾಲು, ಬಾಯಿ ಜ್ವರ..!