ಮೈಸೂರು: ಅಯೋಧ್ಯೆಯಲ್ಲಿನ ಶ್ರೀರಾಮ ಮಂದಿರ ಉದ್ಘಾಟನೆಗೆ ಕಾಂಗ್ರೆಸ್ ಕೊಡುಗೆ ಶೂನ್ಯವಾಗಿದ್ದು, ಅವರಿಗೆ ಅಪರಾಧಿ ಪ್ರಜ್ಞೆಯಿದೆ ಹೀಗಾಗಿ ಅವರು ರಾಮ ಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ಹೊಗದಿರಲು ನಿರ್ಧರಿಸಿದ್ದಾರೆ ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ನಗರದಲ್ಲಿಂದು ಮಾಧ್ಯಮಗಳೊಂದಿಗೆ ಅಯೋಧ್ಯೆ ರಾಮ ಮಂದಿರ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಹೋಗದಿರಲು ಕಾಂಗ್ರೆಸ್ ನಿರ್ಣಯಿಸಿದ ಬಗ್ಗೆ ಮಾತನಾಡಿದ ಅವರು, ರಾಮನಿಗಾಗಿ, ರಾಮ ಜನ್ಮಭೂಮಿಗಾಗಿ ರಥಯಾತ್ರೆಯನ್ನು ಎಲ್.ಕೆ ಅಡ್ವಾಣಿ ಅವರು ಮಾಡಿದರು. ರವಿಶಂಕರ್ ಪ್ರಸಾದ್ ಕಾನೂನು ಹೋರಾಟ ಮಾಡಿದರು. ಇವುಗಳನ್ನು ದೇಶದಾದ್ಯಂತ ಜನರಿಗೆ ತಲುಪಿಸಿ ಜಾಗೃತಿ ಮೂಡಿಸಿದ್ದು ಪ್ರಧಾನಿ ನರೇಂದ್ರ ಮೋದಿ ಅವರು, ರಾಮ ಮಂದಿರ ವಿಚಾರದಲ್ಲಿ ಬಿಜೆಪಿಯ ಪಾತ್ರ ಬಹು ದೊಡ್ಡದಾಗಿದೆ. ರಾಮ ಜನ್ಮಭೂಮಿಗೆ ಸಂಬಂಧಿಸಿದಂತೆ ಕಾಂಗ್ರೆಸ್‌ನ ಯಾವುದೇ ಪಾತ್ರವಿಲ್ಲ. ಹಾಗಾಗಿ ಅವರಿಗೆ ಅಪರಾಧಿ ಪ್ರಜ್ಞೆ ಮೂಡಿದ್ದು, ಉದ್ಘಾಟನೆಯಿಂದ ದೂರ ಉಳಿದಿದ್ದಾರೆ.
ಅಯೋಧ್ಯೆಗೆ ಬಿಡಿಗಾಸು ನೀಡುವುದಿಲ್ಲ ಎಂದ ಹೇಳಿದ್ದ ಸಿಎಂ ಸಿದ್ದರಾಯ್ಯ ಅವರು ಉದ್ಘಾಟನೆ ನಂತರ ಹೋಗುವುದಾಗಿ ಹೇಳಿದ್ದಾರೆ. ರಾಮನ ಅಸ್ತಿತ್ವವನ್ನೇ ಪ್ರಶ್ನಿಸಿದ್ದ ಸಿಎಂ ಅವರು ತಮ್ಮ ಪಾಪ ತೊಳೆದುಕೊಳ್ಳಲು ತ್ಮ್ಮ ಶಿಷ್ಯರ ಜೊತೆ ಹೋಗಿ ಬರಲಿ ಎಂದು ವ್ಯಂಗ್ಯವಾಡಿದರು.
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದ ಯತೀಂದ್ರ ಸಿದ್ದರಾಮಯ್ಯ ಅವರು ಸ್ಪರ್ಧಿಸುತ್ತಾರೆ ಎಂಬ ಬಗ್ಗೆ, ಯತೀಂದ್ರ ಅವರು ಸ್ಪರ್ಧಿಸಿದರೇ ಉತ್ತಮ. ನಾನು ಯಾವತ್ತು ಎದುರಾಲಿಯ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ನನ್ನ ಪರ ಬಿಜೆಪಿ-ಜೆಡಿಎಸ್ ಎರಡು ಪಕ್ಷದ ನಾಯಕರ ಆಶೀರ್ವಾದವಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇನ್ನು ಪ್ರದೀಪ್ ಈಶ್ವರ್ ವಿಚಾರವಾಗಿ, ತಿಳಿಗೇಡಿಗಳು ಮಾತ್ರ ಕೊಚ್ಚೆಗೆ ಕಲ್ಲು ಹಾಕುತ್ತಾರೆ. ನಾನು ತಿಳಿಗೇಡಿಯಲ್ಲ. ಹಾಗಾಗಿ ಕೊಚ್ಚೆಗೆ ಕಲ್ಲು ಹಾಕುವುದಿಲ್ಲ ಎಂದು ಹೇಳುವ ಮೂಲಕ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರ ಆಕ್ಷೇಪಾರ್ಹ ಹೇಳಿಕೆಗೆ ಸಂಸದ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದಾರೆ.
ಬೀದರ್: ನಮ್ಮ ತಂದೆ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ವೈದ್ಯರು ಸತತವಾಗಿ ಚಿಕಿತ್ಸೆ ನೀಡುತ್ತಿದ್ದಾರೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ…
ಬೆಂಗಳೂರು: ರಾಜ್ಯದಲ್ಲಿ ಸಿಎಂ ಕುರ್ಚಿ ಕಿತ್ತಾಟ, ನಾಯಕತ್ವ ಬದಲಾವಣೆ ವಿಚಾರ ತಣ್ಣಗಾಗಿರುವ ಬೆನ್ನಲ್ಲೇ ಇಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಎಐಸಿಸಿ…
ಬೆಂಗಳೂರು: ಬಿಗ್‌ಬಾಸ್-12 ರಿಯಾಲಿಟಿ ಶೋನಲ್ಲಿ ರಣಹದ್ದುಗಳ ಬಗ್ಗೆ ನಟ ಕಿಚ್ಚ ಸುದೀಪ್ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಲಾಗಿದ್ದು, ಈ…
ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಚುನಾವಣೆ ಮುಹೂರ್ತ ಫಿಕ್ಸ್ ಆಗಿದ್ದು, ಜೂನ್.30ರೊಳಗೆ ಜಿಬಿಎ ವ್ಯಾಪ್ತಿಯಲ್ಲಿರುವ 5 ಪಾಲಿಕೆಗಳಿಗೆ ಚುನಾವಣೆ ನಡೆಸುವಂತೆ…
ಮೈಸೂರು: ಇತ್ತೀಚಿಗೆ ಹುಬ್ಬಳ್ಳಿಯಲ್ಲಿ ಮಹಿಳೆ ಮೇಲೆ ನಡೆದ ದೌರ್ಜನ್ಯವನ್ನು ಖಂಡಿಸಿ ಮೈಸೂರು ಜಿಲ್ಲಾ ಬಿಜೆಪಿ ಘಟಕದ ಕಾರ್ಯಕರ್ತರು ಪ್ರತಿಭಟನೆ ನಡೆಸಲಾಯಿತು.…
ಮಹೇಂದ್ರ ಹಸಗೂಲಿ ಗುಂಡ್ಲುಪೇಟೆ: ತಾಲ್ಲೂಕಿನ ಪ್ರಸಿದ್ದ ಪ್ರೇಕ್ಷಣಿಯ ಕ್ಷೇತ್ರ ಹಾಗೂ ಹಿಮವದ್ ಗೋಪಾಲಸ್ವಾಮಿ ನೆಲೆಸಿರುವ ಕ್ಷೇತ್ರವಾದ ಹಿಮವದ್ ಗೋಪಾಲಸ್ವಾಮಿ ಬೆಟ್ಟದ…