ಬೆಂಗಳೂರು : ಇಡೀ ದೇಶದಲ್ಲಿ ಜಾತಿ ಜನಗಣತಿ ಆರಂಭಿಸಿದ್ದು ಕಾಂಗ್ರೆಸ್ ಸರ್ಕಾರ. ಆದರೆ ಈ ಹಿಂದೆ ನನ್ನ ಅವಧಿಯಲ್ಲಿ ವರದಿ ಬಿಡುಗಡೆ ಆಗಲಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ನಗದರಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಹೋದ್ಮೇಲೆ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ, ಬಿಜೆಪಿ ಹಿರಿಯ ನಾಯಕ ಬಿಎಸ್ ಯಡಿಯೂರಪ್ಪ, ಮಾಜಿ ಸಿಎಂ ಬೊಮ್ಮಾಯಿ ಬಂದರು. ಈ ಹಿಂದೆ ಸಿಎಂ ಆಗಿದ್ದಾಗ ಜಾತಿಗಣತಿಗೆ 165 ಕೋಟಿ ರೂ. ಖರ್ಚು ಮಾಡಿದ್ದೆ ಎಂದು ಹೇಳಿದ್ದಾರೆ.
ಮೈತ್ರಿ ಸರ್ಕಾರ ಇದ್ದಾಗ ವರದಿ ಬಿಡುಗಡೆ ಮಾಡಿದ್ರೆ ತೆಗೆದುಹಾಕ್ತೀವಿ ಅಂತಾ ಅಧಿಕಾರಿಗಳಿಗೆ ಹೆಚ್ಡಿ ಕುಮಾರಸ್ವಾಮಿ ಹೆದರಿಸಿದ್ದರು. ನವೆಂಬರ್ನಲ್ಲಿ ಸರ್ಕಾರಕ್ಕೆ ಜಯಪ್ರಕಾಶ್ ಹೆಗ್ಡೆ ವರದಿ ಕೊಡುತ್ತಾರೆ. ಸಾಮಾಜಿಕ, ಆರ್ಥಿಕವಾಗಿ ಅಭಿವೃದ್ಧಿ ಆಗಬೇಕಾದರೆ ಜಾತಿಗಣತಿ ಮುಖ್ಯ. 90ರ ದಶಕದಲ್ಲೇ ಜಾತಿಗಣತಿ ನಿಲ್ಲಿಸಿಬಿಟ್ಟರು. ಆಗಿನಿಂದ ಆಗಲೇ ಇಲ್ಲ ಎಂದು ಹೇಳಿದ್ದಾರೆ.
ಮೆಡಿಕಲ್ ಕಾಲೇಜು ವಿಚಾರವಾಗಿ ಮಾತನಾಡಿದ ಅವರು, ಜಾಗ ಪುಕ್ಕಟೆ ಕೊಡುತ್ತೇವೆ ಎಂದು ಎಂಟಿಬಿ ಮೆಡಿಕಲ್ ಕಾಲೇಜು ಪ್ರಾರಂಭಿಸಲು ಮುಂದಾಗಿಲ್ಲ. ಏನಪ್ಪ ನಿಮ್ಮಪ್ಪನಿಗೆ ಹೇಳಿದ್ದೆ ಅಲ್ವಾ ಎಂದು ವೇದಿಕೆ ಮೇಲಿದ್ದ ಎಂಟಿಬಿ ಪುತ್ರನನ್ನು ಪ್ರಶ್ನಿಸಿದರು. ಕ್ಷೀರಭಾಗ್ಯ, ಅನ್ನಭಾಗ್ಯ, ವಿದ್ಯಾಸಿರಿ ಬಡವರಿಗೆ ಅನುಕೂಲ ಆಗಲಿ ಅಂತ ಮಾಡಿದೆ. ಮೆಡಿಕಲ್ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ 1 ಲಕ್ಷ ರೂ. ಗೆ 2% ಬಡ್ಡಿಯಂತೆ ನೀಡಿದ್ದು ನಾವು ತಾನೆ. ಆಗ ನಾನು ಅಡುಗೆ ಮಾಡಿಕೊಂಡು, ರೂಂನಲ್ಲಿ ಇದ್ದುಕೊಂಡು ಓದುತ್ತಿದೆ. ಹೀಗಾಗಿಯೇ ವಿದ್ಯಾಸಿರಿ ಕಾರ್ಯಕ್ರಮ ಜಾರಿಗೆ ತಂದೆ. ಹಿಂದುಳಿದ ಜಾತಿಗಳಿಗೆ ಆರ್ಥಿಕವಾಗಿ ಶಕ್ತಿ ಬರಲು ಈ ಯೋಜನೆ. ಪ್ರತಿ ವರ್ಷ 15 ಸಾವಿರ ವಿದ್ಯಾರ್ಥಿ ವೇತನ ನೀಡುವ ಕೆಲಸ ಮಾಡಿದೆ ಎಂದು ತಿಳಿಸಿದರು.
ರೈತರ, ಸರ್ಕಾರಿ ನೌಕಕರು ಮಕ್ಕಳು, ಕೂಲಿ ಕಾರ್ಮಿಕರು, ಪೊಲೀಸರ ಮಕ್ಕಳು ಸೇರಿ ಒಟ್ಟು 170 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುತ್ತಿದ್ದಾರೆ. ಮುಂದಿನ ವರ್ಷ 200 ವಿದ್ಯಾರ್ಥಿಗಳಿಗೆ ನೀಡಲಿ. ಆಗ ಸರ್ಕಾರಿ ವೈದ್ಯಕೀಯ ಆಸ್ಪತ್ರೆಗಳಲ್ಲಿ ಹೆಚ್ಚು ಹುದ್ದೆಗಳು ಖಾಲಿಯಿತ್ತು, ವೈದ್ಯರಿರಲಿಲ್ಲ. ಈಗ ವೈದ್ಯರು ಹೆಚ್ಚಿದ್ದಾರೆ, ಹುದ್ದೆಗಳು ಖಾಲಿ ಇಲ್ಲ. ಸಮಾಜದ ಋಣ ತೀರಿಸುವುದು ನಮ್ಮೆಲ್ಲರ ಕರ್ತವ್ಯ. ಸಮಾಜಕ್ಕೆ ಆಸ್ತಿಯಾಗಿ ಅಂತ ವೈದ್ಯಕೀಯ ವಿದ್ಯಾರ್ಥಿಗಳಿಗೆ ಸಿಎಂ ಕಿವಿಮಾತು ಹೇಳಿದ್ದಾರೆ.
ಸಮಾಜದ ಎಲ್ಲರಿಗೂ ಶಿಕ್ಷಣ ದೊರಕಬೇಕು. ಯಾವುದೇ ಕ್ಷೇತ್ರದಲ್ಲಿ ಅಕ್ಷರ ಸಂಸ್ಕೃತಿಯಿಂದ ವಂಚಿತರಾಗಿದ್ದಾರೆ ಅಕ್ಷರ ಕಲಿಯಲೇ ಬೇಕು. ಯಾರೂ ಮೇದಾವಿಗಳಲ್ಲಿ ಅವಕಾಶದಿಂದ ವಂಚಿತರಾದರೆ ಅವರು ದಡ್ಡರಾಗುತ್ತಾರೆ. ನಮ್ಮ ಸಮಾಜದಲ್ಲಿ ಬಹುತೇಕರು ಅಕ್ಷರ ಸಂಸ್ಕೃತಿಯಿಂದ ವಂಚಿತರಾಗಿದ್ದಾರೆ. ಇಡೀ ನಮ್ಮೂರಿಗೆ ನಾನೇ ಮೊದಲು ಲಾಯರ್. ಅನೇಕರು ಪದವೀಧರರಾಗಿದ್ದರೂ ನಾನೇ ಲಾಯರ್.
ನಮ್ಮಪ್ಪ ಚೆನ್ನಪ್ಪಯ್ಯ ಅಂತ ಶಾನುಭೋಗರ ಮಾತನ್ನ ಬಹಳ ಕೇಳುತ್ತಿದ್ದರು. ಎಂಎಸ್ಸಿ ನನಗೆ ಸೀಟ್ ಸಿಕ್ಕಿರಲಿಲ್ಲ, ಆಗ ವ್ಯವಸಾಯ ಮಾಡೋಕೆ ಹೋದೆ. ನೀನು ಕುರುಬ, ಲಾಯರ್ ಆಗಿ ಕೆಲಸ ಮಾಡೋಕೆ ಆಗುತ್ತಾ? ನಮ್ಮಪ್ಪ ಚೆನ್ನಪ್ಪಯ್ಯ ಮಾತು ಕೇಳಿ ನೀನು ಲಾ ಮಾಡ್ಬೇಡ ಅಂದ್ರು. ಆಮೇಲೆ ಪಂಚಾಯಿತಿ ಸೇರಿಸಿ ಊರಿನವರಿಗೆಲ್ಲ ಹೇಳಿದೆ. ಭಾಗ ಕೊಟ್ಟು ಬಿಡಪ್ಪ ಅಂದೆ, ಅದಕ್ಕೆ ಲಾ ಸೇರಿಸಿದರು ಎಂದು ಹೇಳಿದ್ದಾರೆ.
ಇಸ್ರೇಲ್ : ಇಸ್ರೇಲ್-ಲೆಬನಾನ್ ಉದ್ವಿಗ್ನತೆಗೆ 10 ದಿನಗಳ ಕದನ ವಿರಾಮ ಘೋಷಿಸಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.…
ನವದೆಹಲಿ : ಉತ್ತರ, ದಕ್ಷಿಣ, ದೊಡ್ಡ ಅಥವಾ ಸಣ್ಣ ರಾಜ್ಯಗಳಾವುದೇ ಇರಲಿ ಕ್ಷೇತ್ರ ಪುನರ್ ವಿಂಗಡಣೆಯ ವಿಷಯಕ್ಕೆ ಬಂದಾಗ ರಾಜ್ಯಗಳ…
ಮೈಸೂರು : ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಗಳಿಗೆ…
ನವದೆಹಲಿ : ಇಲ್ಲಿನ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎರಡು ವಿಮಾನಗಳ ನಡುವೆ ಸಣ್ಣ ಘರ್ಷಣೆಯಾಗಿದ್ದು, ಭಾರೀ ಅನಾಹುತ ತಪ್ಪಿದೆ.…
ರಾಯಚೂರು : ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯ ಚಿಲಕಣಡೋಣ ಗ್ರಾಮದ ಸಮೀಪ ಗುರುವಾರ ಬೆಳಗಿನ ಜಾವ ಸಂಭವಿಸಿದ ಭೀಕರ ರಸ್ತೆ…
ಬೆಂಗಳೂರು : ರಾಜ್ಯದ ಐದು ಜಿಲ್ಲೆಗಳನ್ನು ಹೊರತುಪಡಿಸಿ ಬೇರೆ ಎಲ್ಲಾ ಜಿಲ್ಲೆಗಳಲ್ಲಿ ಮುಂಗಾರು ಕೊರತೆಯಾಗುವ ಸಾಧ್ಯತೆಯಿದ್ದು, ಕುಡಿಯುವ ನೀರಿಗೆ ತೊಂದರೆಯಾಗದಂತೆ…