ರಾಜ್ಯ

ಯತ್ನಾಳ್, ರಮೇಶ್ ಜಾರಕಿಹೊಳಿ ವಿರುದ್ದ ಹೈಕಮಾಂಡ್‌ಗೆ ದೂರು ; ರೇಣುಕಾಚಾರ್ಯ

ಬೆಂಗಳೂರು: ಬಸವನಗೌಡ ಪಾಟೀಲ್ ಯತ್ನಾಳ ಹಾಗೂ ರಮೇಶ್ ಜಾರಕಿಹೊಳಿ‌ ವಿರುದ್ದ ಶೀಘ್ರದಲ್ಲೇ ಹೈಕಮಾಂಡ್ ಗೆ ದೂರು ನೀಡುವುದಾಗಿ ಮಾಜಿ ಸಚಿವ ರೇಣುಕಾಚಾರ್ಯ ಹೇಳಿದ್ದಾರೆ.

ಭಾನುವಾರ  ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಯತ್ನಾಳ್ ಅವರನ್ನು ಈ ಹಿಂದೆ ಪಕ್ಷ ಉಚ್ಚಾಟನೆ‌ ಮಾಡಿತ್ತು ಆಗ ಯಡಿಯೂರಪ್ಪ ಅವರ ಕಾಲಿಗೆ ಬಿದ್ದಿ ಬಿಜೆಪಿಗೆ ಬಂದಿದ್ದೀರಿ. ನಿಮಗೆ ಯಡಿಯೂರಪ್ಪ ಬಗ್ಗೆ ಮಾತಾಡಲು ಯಾವ ನೈತಿಕತೆ ಇದೆ? ಅಂತ ಪ್ರಶ್ನೆ ಮಾಡಿದ್ದಾರೆ.

ಯಡಿಯೂರಪ್ಪ ಅವರು ಕಾಲಿಗೆ ಚಕ್ರ ಕಟ್ಟಿ, ಸೈಕಲ್, ಸ್ಕೂಟರ್, ಬಸ್, ಕಾರಲ್ಲಿ ಓಡಾಡಿ ಪಕ್ಷ ಕಟ್ಟಿದ್ದಾರೆ ಯಡಿಯೂರಪ್ಪ ಪಕ್ಷ ಕಟ್ತಿದ್ದಾಗ ಯತ್ನಾಳದ ಕಣ್ ಬಿಟ್ಟಿರಲಿಲ್ಲ ಎಚ್ಚರಿಕೆಯಿಂದ ಯತ್ನಾಳ್ ಮಾತನಾಡಬೇಕು. ಹೀಗೆಲ್ಲ ಮಾತಾಡೋದನ್ನ ಇನ್ನು‌ಮುಂದೆ ಸಹಿಸಲು ಸಾದ್ಯವಿಲ್ಲ ಎಂದು ಹೇಳಿದ್ದಾರೆ.

ವಿಜಯೇಂದ್ರ ಅವರನ್ನ ಅಧ್ಯಕ್ಷ ಮಾಡಿದ್ದು ಹೈಕಮಾಂಡ್ ವಿಜಯೇಂದ್ರ ಅವರಿಗೆ ಬೈದರೆ ಹೈಕಮಾಂಡ್ ಗೆ ಬೈದಂತೆ. ನೀವು ಏನೇ ಮಾಡಿದ್ರೂ ವಿಜಯೇಂದ್ರ ವರ್ಚಸ್ಸು ಕುಗ್ಗಲ್ಲ. ನಿಮಗೆ ಯಡಿಯೂರಪ್ಪ ಬಗ್ಗೆ ಮಾತಾಡೋಕ್ಕೆ ಯಾವ ನೈತಿಕತೆ ಇದೆ? ಎಂದು ಪ್ರಶ್ನಿಸಿದ್ದಾರೆ.

ಯತ್ನಾಳ್ ಒಬ್ಬ ಗೋಮುಖ ವ್ಯಾಘ್ರ?
ಯತ್ನಾಳ್ ಕಾಂಗ್ರೆಸ್ ಏಜೆಂಟ್ ನಂತೆ ವರ್ತನೆ ಮಾಡ್ತಿದ್ದಾರೆ, ರಾಜ್ಯದ ಕೆಲವರು ಮಗು ಚಿವುಟಿ ತೊಟ್ಟಿಲು ತೂಗ್ತಿದ್ದಾರೆ ಇಲ್ಲಿ ಯತ್ನಾಳ್ ನ ಎತ್ತಿ ಕಟ್ತಿದ್ದಾರೆ ಕೆಲವರು ವಿಜಯೇಂದ್ರರ ವರ್ಚಸ್ಸು ಕುಗ್ಗಿಸಬಹುದು ಅಂತ ಅಂದುಕೊಂಡಿದ್ದಾರೆ. ಬಹಳ ಗೌರವ ಕೊಟ್ಟು ಇದುವರೆಗೂ ನಿನ್ನ ಬಗ್ಗೆ ಇದುವರೆಗೆ‌‌ ಮಾತಾಡಿದ್ದೇವೆ, ಇನ್ಮುಂದೆ ಸಹಿಸಲ್ಲ ಮುಂದಿನ ಶನಿವಾರ ನಾವು ಸಭೆ ಸೇರುತ್ತೇವೆ ಹೈಕಮಾಂಡ್ ಬಳಿಗೆ ಹೋಗಿ ದೂರು ಕೊಡುತ್ತೇವೆ .

ಯತ್ನಾಳ್ ದು ಹರಕು ಬಾಯಿ

ಯಡಿಯೂರಪ್ಪ ವಿರುದ್ಧ ಸಂಚು ಮಾಡಿದಾಗಲೆಲ್ಲ ಬಿಜೆಪಿಗೆ ಕಮ್ಮಿ ಸ್ಥಾನ ಬಂದಿದೆ ಎಂದು ಅನಗತ್ಯ ಟೀಕೆ ಮಾಡ್ತಿದ್ದೀರಿ, ಇದನ್ನ ಸಹಿಸಲ್ಲ ಈ ಮನುಷ್ಯನಿಗೆ ಮೂರು ಮುಖವಾಡ ಇದೆ. ಉತ್ತರ ಕರ್ನಾಟಕದ ಹುಲಿ ಅಂತಾರೆ, ಉ.ಕಕ್ಕೆ ಎಷ್ಟು ಅನುದಾನ ಕೊಂಡೊಯ್ದಿರಿ?

ಹಿಂದೂ ಹುಲಿ ಆದೋರು ಟಿಪ್ಪು ಟೋಪಿ ಹಾಕಿ, ಖಡ್ಗ ಹಿಡಿದು ಅವರ ಜತೆ ಊಟ ಮಾಡಿದ್ರಿ, ಎಲ್ಲಿ ಹೋಗಿತ್ತು ಆಗ ಹಿಂದೂ ಹುಲಿ?,  ಪಂಚಮಸಾಲಿ ಹೋರಾಟದಲ್ಲಿ ಯತ್ನಾಳ್ ದು ದ್ವಂದ್ವ ನಿಲುವಿನ‌ ಮುಖವಾಡ. ಎಲ್ರೂ 2ಎ ಗಾಗಿ ಹೋರಾಟ ಮಾಡಿದ್ರೆ, ನಮಗೆ 2ಎ ಮೀಸಲಾತಿ ಬೇಡ ಅಂತಾರೆ . ತಮ್ಮ ಸ್ವಾರ್ಥಕ್ಕೆ ಯತ್ನಾಳ್ ಮೂರು ಮುಖವಾಡ ಹಾಕಿದ್ದಾರೆ, ಈಗ ಅವರ ಮುಖವಾಡ ಕಳಚಿದೆ. ನಿಮ್ಮ ಬೆಂಬಲಕ್ಕೆ ಸಂಸದರು ಇದ್ದಾರೆ ಅಂದ್ರಲ್ಲ, ತಾಕತ್ ಇದ್ರೆ ಅವರ ಹೆಸರು ಹೇಳಿ..

ಯತ್ನಾಳ್ ಗೆ ರೇಣುಕಾಚಾರ್ಯ ಸವಾಲ್

ವಿಜಯೇಂದ್ರ ಬಚ್ಚಾ ಅಲ್ಲ, ಸಮರ್ಥ, ನುರಿತ ರಾಜಕಾರಣಿ. ವಿಜಯೇಂದ್ರ ಗೆ ಜ್ಞಾನ ಇದೆ, ಪಕ್ಷ ಅಧಿಕಾರಕ್ಕೆ ತರುವ ಛಲ ಇದೆ. ಯತ್ನಾಳ್ ಮತ್ತು ತಂಡ ಮುಖವಾಡದಲ್ಲಿ ಸ್ವಾರ್ಥ ರಾಜಕಾರಣ ಮಾಡ್ತಿದ್ದಾರೆ. ಇದನ್ನು ಸಹಿಸಲ್ಲ, ಏನೇ ಇದ್ರೂ ನಾಲ್ಕು ಗೋಡೆ ಮಧ್ಯೆ ಮಾತನಾಡಬೇಕು. ಯತ್ನಾಳ್, ರಮೇಶ್ ಜಾರಕಿಹೊಳಿ ಮಾತುಗಳಿಂದ ಕಾರ್ಯಕರ್ತರ ಮನಸಿಗೆ ನೋವಾಗಿದೆ. ಕೆಲವರು ಅವರನ್ನು ಬೆಂಬಲಿಸ್ತಿದ್ದಾರೆ. ಆಕಾಶಕ್ಕೆ ಉಗುಳಿದರೆ, ಅದು ಉಗುಳಿದವರ ಮೇಲೆಯೇ ಬೀಳುತ್ತೆ. ವಿಜಯೇಂದ್ರ ಮುಂದುವರೀತಾರೆ, ಅವರ ನೇತೃತ್ವದಲ್ಲಿ ಪಕ್ಷ ಕಟ್ತೇವೆ, ಮತ್ತೆ ಅಧಿಕಾರಕ್ಕೆ ತರುತ್ತೇವೆ. ಯತ್ನಾಳ್, ರಮೇಶ್ ಜಾರಕಿಹೊಳಿ ಹುಚ್ಚು ಹುಚ್ಚಾಗಿ ಮಾತಾಡಿದ್ದಾರೆ. ಅವರಿಬ್ಬರನ್ನ ಮುಲಾಜಿಲ್ಲದೇ ಉಚ್ಛಾಟನೆ ಮಾಡಿ ಅಂತ ಹೈಕಮಾಂಡ್ ಗೆ ಹೇಳ್ತೇವೆ. ಕಾಂಗ್ರೆಸ್ ಒಳ ಕಚ್ಚಾಟ ಮರೆಸಲು ಯತ್ನಾಳ್, ರಮೇಶ್ ವಿಜಯೇಂದ್ರ ವಿರುದ್ಧ ಮಾತಾಡ್ತಿದ್ದಾರೆ. ಅದಕ್ಕೇ ನಾನು ಹೇಳಿದ್ದು, ಅವರು ಕಾಂಗ್ರೆಸ್ ಏಜೆಂಟರು ಅಂತ ಬಹಿರಂಗ ವಾಗಿ ಹೇಳುತ್ತೇನೆ. ಯಾರು ಯಡಿಯೂರಪ್ಪ ಅವರಿಂದ ಅಧಿಕಾರ ಪಡೆದಿದ್ರು ಅವರೆ ಇವತ್ತು ಎತ್ತಕಟ್ಟುತ್ತಿದ್ದಾರೆ. ಯತ್ನಾಳ , ರಮೇಶ್ ಜಾರಕಿಹೊಳಿ ಅವರನ್ನ ಎತ್ತಿ ಕಟ್ಟುತ್ತಿದ್ದಾರೆ. ರಮೇಶ್ ಜಾರಕಿಹೊಳಿ ಯತ್ನಾಳ್ ಒಳ್ಳೆಯವರೆ, ಆದ್ರೆ ಪಕ್ಷದ ಕೆಲವರು ಅವರಿಗೆ ಪ್ರಚೋದನೆ ಕೊಡ್ತಿದ್ದಾರೆ. ಹೈಕಮಾಂಡ್ ಗೆ ಎಲ್ಲಾ ವರದಿ ಗೊತ್ತಿದೆ ಸಮಯ ಬಂದಾಗ ಎಲ್ಲವನ್ನು‌ ಬಿಚ್ವಿಡುತ್ತೇವೆ ಎಂದು ಹೇಳಿದ್ದಾರೆ.

ಚಂದು ಸಿಎನ್

ಮೈಸೂರು ಜಿಲ್ಲೆಯ ಹುಣಸೂರಿನ ಚಲ್ಲಹಳ್ಳಿ ಗ್ರಾಮದವನಾದ ನಾನು ಒಂದು ದಶಕದಿಂದ ಮೈಸೂರಿನಲ್ಲಿ ನೆಲೆಸಿದ್ದೇನೆ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ಪಡೆದು ಅಂದಿನಿಂದಲೇ ಹವ್ಯಾಸಿ ಪತ್ರಕರ್ತನಾಗಿ ವೃತ್ತಿ ಆರಿಸಿಕೊಂಡೆ. ನಂತರ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ ಬಳಿಕ ಪತ್ರಿಕೋದ್ಯಮ ಕ್ಷೇತ್ರದಲ್ಲಿ 2 ವರ್ಷಗಳ ಕಾಲ ಅನುಭವ ಪಡೆದಿದ್ದೇನೆ. ಸದ್ಯ ಮೈಸೂರಿನ ಪ್ರತಿಷ್ಠಿತ ಆಂದೋಲನ ಪತ್ರಿಕೆಯ ಡಿಜಿಟಲ್‌ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಾಚೀನ ಪಳಿಯುಳಿಕೆ ಹಾಗೂ ಇತಿಹಾಸದ ಕಡೆ ಎಲ್ಲಿಲ್ಲದ ಒಲವು. ಪ್ರವಾಸ, ಪುಸ್ತಕ ಓದುವುದು ನೆಚ್ಚಿನ ಹವ್ಯಾಸಗಳಾಗಿವೆ. ಮೊಬೈಲ್‌ ಸಂಖ್ಯೆ: 9164535321.

Recent Posts

ಕಾರು ಅಪಘಾತ : ಕಾರಿನಲ್ಲಿ‌10ಕ್ಕೂ ಹೆಚ್ಚು ಕರುಗಳು ಪತ್ತೆ

ಮಂಡ್ಯ: ನಾಗಮಂಗಲ ತಾಲೂಕು ಯರಗಟ್ಟಿ ಗೇಟ್ ಬಳಿ ಶುಕ್ರವಾರ ರಾತ್ರಿ ಅಪಘಾತಕ್ಕೊಳಗಾದ ಸ್ಕಾರ್ಪಿಯೋ ಕಾರಿನಲ್ಲಿ ಮೃತಪಟ್ಟಿರುವ ಹತ್ತಕ್ಕೂ ಹೆಚ್ಚು ಕರುಗಳು…

2 hours ago

ಮದ್ದೂರು |‌ ದೇವಾಲಯಗಳಲ್ಲಿ ಸರಣಿ ಕಳ್ಳತನ

ಮದ್ದೂರು: ದುಷ್ಕರ್ಮಿಗಳು ದೇವಾಲಯಗಳ ಬಾಗಿಲು ಮುರಿದು ಸರಣಿ ಕಳ್ಳತನ ಮಾಡಿರುವ ಘಟನೆ ತಾಲ್ಲೂಕಿನ ಕೆಸ್ತೂರು ಪೊಲೀಸ್ ಠಾಣೆ ವ್ಯಾಪ್ತಿಯ ಅಡಗನಹಳ್ಳಿ…

4 hours ago

ಎಚ್ಚೆತ್ತ ಪೊಲೀಸರು : ರಾಸಾಯನಿಕ ತಯಾರಿಕಾ ಘಟಕದ ಮೇಲೆ ದಾಳಿ,ಪರಿಶೀಲನೆ

ಮೈಸೂರು : ಎನ್‌ಸಿಬಿ ಪೊಲೀಸರು ನಗರದ ಹೆಬ್ಬಾಳು ಕೈಗಾರಿಕಾ ಪ್ರದೇಶದ ರಾಸಾಯನಿಕ ತಯಾರಿಕಾ ಘಟಕದ ಮೇಲೆ ದಾಳಿ ನಡೆಸಿದ ನಂತರ…

6 hours ago

ರಾಜೀವ್‌ಗೌಡಗೆ ಜಾಮೀನು : ಪಟಾಕಿ ಸಿಡಿಸಿ ಸಂಭ್ರಮಿಸದಂತೆ ಕೋರ್ಟ್‌ ತಾಕೀತು

ಚಿಕ್ಕಬಳ್ಳಾಪುರ : ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತಾ ಗೌಡ ಅವರಿಗೆ ಬೆದರಿಕೆ ಹಾಕಿದ್ದ ಪ್ರಕರಣದಲ್ಲಿ ಆರೋಪಿ ರಾಜೀವ್ ಗೌಡಗೆ ಜಾಮೀನು…

6 hours ago

ಉದ್ಯಮಿ ಸಿ.ಜೆ.ರಾಯ್‌ ಆತ್ಮಹತ್ಯೆ

ಬೆಂಗಳೂರು : ದಕ್ಷಿಣ ಭಾರತದ ಪ್ರಮುಖ ರಿಯಲ್ ಎಸ್ಟೇಟ್ ಕಂಪನಿ ಕಾನ್ಫಿಡೆಂಟ್ ಗ್ರೂಪ್‌ನ ಸ್ಥಾಪಕ ಮತ್ತು ಚೇರ್ಮನ್ ಡಾ.ಸಿ.ಜೆ. ರಾಯ್…

6 hours ago

ಸಿಎಂ,ಡಿಸಿಎಂ ವಿರುದ್ಧ ಮಾನಹಾನಿಕ ಪೋಸ್ಟ್‌ : ಬಿಜೆಪಿ ವಿರುದ್ಧ ದೂರು

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಇತರ ಸಚಿವರನ್ನು ಗುರಿಯಾಗಿಸಿಕೊಂಡು ‘ಮಾನಹಾನಿಕರ’ ಪೋಸ್ಟ್‌ನ್ನು ಬಿಜೆಪಿಯ ‘ಎಕ್ಸ್’ ಖಾತೆಯಲ್ಲಿ…

6 hours ago