ರಾಜ್ಯ

ಸಿಎಂ ಸಿದ್ದರಾಮಯ್ಯ ಅವರನ್ನು ಹೈಕೋರ್ಟ್‌ ನಿರಪರಾಧಿಯೆಂದು ಹೇಳಿಲ್ಲ: ವಿಜಯೇಂದ್ರ

ಬೆಂಗಳೂರು: ಮುಡಾ ಪ್ರಕರಣದಲ್ಲಿ ಹೈಕೋರ್ಟ್‌ ಸಿಬಿಐ ತನಿಖೆಗೆ ವಹಿಸುವುದು ಬೇಡವೆಂದು ಹೇಳಿದೆಯೇ ಹೊರತು, ಸಿಎಂ ಸಿದ್ದರಾಮಯ್ಯ ಅವರನ್ನು ನಿಪರರಾಧಿಯೆಂದು ಹೇಳಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಇಂದು(ಫೆಬ್ರವರಿ.೭) ಈ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಹಮಯಿ ಕೃಷ್ಣ ಹೈಕೋರ್ಟ್‌ನಲ್ಲಿ ಮುಡಾ ಕೇಸನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಅರ್ಜಿ ಹಾಕಿದ್ದರು. ಆದರೆ ಹೈಕೋರ್ಟ್‌ ಈ ಅರ್ಜಿಯನ್ನು ವಜಾಗೊಳಿಸಿದೆ. ಹೀಗಾಗಿ ಕೋರ್ಟ್‌ ಸಿಎಂ ಸಿದ್ದರಾಮಯ್ಯ ಮತ್ತು ಅವರ ಕುಟುಂಬದವರನ್ನು ನಿರಪಾಧಿ ಎಂದು ತೀರ್ಪು ಪ್ರಕಟಿಸಿಲ್ಲ ಎಂದು ಹೇಳಿದರು.

ನಮ್ಮ ಪಕ್ಷ ಮುಡಾ ಪ್ರಕಣದಲ್ಲಿ ಹೋರಾಟ ಮಾಡಿದಲ್ಲದೇ ಪಾದಯಾತ್ರೆಯನ್ನು ಮಾಡಿತ್ತು. ಆದರೆ ಇದೀಗ ಹೈಕೋರ್ಟ್‌ ನೀಡಿದ ತೀರ್ಪಿನಿಂದ ಯಾವುದೇ ಹಿನ್ನೆಡೆಯಾಗುವುದಿಲ್ಲ. ಈಗಾಗಲೇ ಮುಡಾ ಪ್ರಕಣವನ್ನು ಇ.ಡಿ. ಹಾಗೂ ಲೋಕಾಯುಕ್ತ ಸಂಸ್ಥೆಗಳು ತನಿಖೆ ಮಾಡುತ್ತಿವೆ. ಹೀಗಾಗಿ ಈ ಪ್ರಕರಣದಲ್ಲಿ ಮುಂದೆ ಏನಾಗುತ್ತೋ ನೋಡೋಣ ಎಂದರು.

ಅರ್ಚನ ಎಸ್‌ ಎಸ್

Recent Posts

ಚಾ.ನಗರ | ಟೊಮೆಟೊ ದರ ಕುಸಿತ; ರೈತರಿಂದ ಹೆದ್ದಾರಿ ತಡೆ

ಚಾಮರಾಜನಗರ : ಟೊಮೆಟೊ ದರ ಕುಸಿತ ಖಂಡಿಸಿ, ಬೆಲೆ ತಾರತಮ್ಯ ವಿರೋಧಿಸಿ ತಾಲ್ಲೂಕಿನ ಚಿಕ್ಕಹೊಳೆ ಚೆಕ್‌ಪೋಸ್ಟ್ ಬಳಿ ಸಾಮೂಹಿಕ ನಾಯಕತ್ವದ…

5 hours ago

ಪಂಜಾಬ್‌ | ಪಾಕ್‌ ಪೋಷಿತ ಉಗ್ರ ಘಟಕದ ಮೇಲೆ ದಾಳಿ, ಇಬ್ಬರ ಬಂಧನ

ಅಮೃತಸರ : ಪಂಜಾಬ್‌ ಪೊಲೀಸರು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಪೋಷಿತ ಭಯೋತ್ಪಾದಕ ಘಟಕವೊಂದನ್ನು ಭೇದಿಸಿ, ಇಬ್ಬರು ಶಂಕಿತರನ್ನು ಬಂಧಿಸಿದ್ದಾರೆ.…

5 hours ago

ಅಮೆರಿಕದೊಂದಿಗೆ ಮಾತುಕತೆ ಇಲ್ಲ, ದೀರ್ಘಕಾಲದ ಯುದ್ಧಕ್ಕೆ ಸಿದ್ಧ ; ಇರಾನ್‌

ಹೊಸದಿಲ್ಲಿ : ಇರಾನ್‌ ನಮ್ಮ ಜೊತೆ ಮಾತುಕತೆಗೆ ಸಿದ್ಧವಿದೆ ಎಂದಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿಕೆಯನ್ನು ತಳ್ಳಿ ಹಾಕಿರುವ…

6 hours ago

ನಂಜನಗೂಡು | ನಾಲೆಯಲ್ಲಿ ನವಜಾತ ಶಿಶು ಪತ್ತೆ

ನಂಜನಗೂಡು : ನವಜಾತ ಶಿಶುವನ್ನು ನಾಲೆಗೆ ಎಸೆದ ದುರಂತ ಘಟನೆ ನಂಜನಗೂಡು ತಾಲ್ಲೂಕಿನ ನಗರ್ಲೆ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಶ್ರೀ…

6 hours ago

ಉತ್ತರ ಕರ್ನಾಟಕದ ಪ್ರಾದೇಶಿಕ ಅಸಮಾನತೆ ನಿವಾರಿಸಲು ಸರ್ಕಾರ ಬದ್ಧ : ಮುಖ್ಯಮಂತ್ರಿ

ಬಾಗಲಕೋಟೆ : ಉತ್ತರ ಕರ್ನಾಟಕದ ಪ್ರಾದೇಶಿಕ ಅಸಮಾನತೆಯನ್ನು ನಿವಾರಿಸಲು ಸರ್ಕಾರ ಬದ್ಧವಾಗಿದ್ದು, ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆಯುವ ಜನರ ಸರ್ಕಾರ…

7 hours ago

ಮಹದೇಶ್ವರ ಬೆಟ್ಟ | ದಾಸೋಹ-ಲಾಡು ಪ್ರಸಾದಕ್ಕೆ ಸಿಲಿಂಡರ್ ಕೊರತೆ ಇಲ್ಲ ; ಅಪಪ್ರಚಾರಕ್ಕೆ ಕಿವಿಗೊಡದಿರಿ

ಹನೂರು : ಶ್ರೀಕ್ಷೇತ್ರ ಮಲೆ ಮಾದೇಶ್ವರ ಬೆಟ್ಟದಲ್ಲಿ ನಡೆಯುವ ದಾಸೋಹ, ಲಾಡು ಪ್ರಸಾದ ತಯಾರಿಸಲು ಯಾವುದೇ ರೀತಿಯ ಸಿಲಿಂಡರ್ ಕೊರತೆಯಾಗಿಲ್ಲ…

9 hours ago