ಬೆಂಗಳೂರು: ಕಳೆದ ವರ್ಷ ನಡೆದ ಕರ್ನಾಟಕ ವಿಧಾನ ಸಭಾ ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷ, ಬಿಜೆಪಿ ವಿರುದ್ಧ ಸುಳ್ಳು ಅಪಪ್ರಚಾರದ ಜಾಹೀರಾತು ನೀಡಿದ ಆರೋಪದ ಮೇಲೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಸಮನ್ಸ್ ನೀಡಲಾಗಿತ್ತು.
ವಿಧಾನಸಭಾ ಚುನಾವಣೆ ವೇಳೆ ಬಿಜೆಪಿ ವಿರುದ್ಧ ಕಾಂಗ್ರೆಸ್ 40% ಕಮಿಷನ್ ಆರೋಪ ಮಾಡಿತ್ತು. ಮತ್ತು ಪೇ ಸಿಎಂ ಪೋಸ್ಟರ್ ಅಂಟಿಸಿ ಪ್ರತಿಭಟನೆ ನಡೆಸಿತ್ತು. ಇದರಿಂದ ಬಿಜೆಪಿಗೆ ಧಕ್ಕೆ ತಂದ ಆರೋಪದಡಿ ಮಾನನಷ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ(ಜೂನ್.೧) ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಅವರು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಹಾಜರಾಗಿದ್ದರು.
42ನೇ ಎಸಿಎಂಎಂ ನ್ಯಾಯಾಧೀಶರಾದ ಕೆ.ಎನ್ ಶಿವಕುಮಾರ್ ಅವರು ವಿಚಾರಣೆ ನಡೆಸಿದ್ದು, ಸಿಎಂ ಮತ್ತು ಡಿಸಿಎಂಗೆ ಜಾಮೀನು ಮಂಜೂರು ಮಾಡಿದ್ದಾರೆ. ಈ ಇಬ್ಬರು ನಾಯಕರು ನಾಯಕರು ಬಾಂಡ್‌ಗೆ ಸಹಿ ಹಾಕಿ ಬಳಿಕ ನ್ಯಾಯಾಲಯದಿಂದ ವಾಪಸಾಗಿದ್ದಾರೆ.
ಬಿಜೆಪಿ ಪರ ವಿನೋದ್ ಕುಮಾರ್ ವಾದ ಮಂಡಿಸಿದರೇ, ಆಡಳಿತ ಪಕ್ಷದ ಪರವಾಗಿ ಎಜಿ ಎಸ್.ಎ ಅಹಮದ್ ವಾದ ಮಂಡಿಸಿದರು.
ಇನ್ನು ಮೂರನೇ ಬಾರಿಗೂ ಕೋರ್ಟ್ ಸಮನ್ಸ್ ನೀಡಿಯೂ ವಿಚಾರಣೆಗೆ ಹಾಜರಾಗದಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಕೋರ್ಟ್ ಅಸಮಧಾನ ವ್ಯಕ್ತಪಡಿಸಿದ್ದು, ರಾಗಾ ಗೆ ವಿನಾಯಿತಿ ನೀಡಬೇಕೋ ಅಥವಾ ವಾರೆಂಟ್ ನೀಡಬೇಕೋ ಎಂಬ ಬಗ್ಗೆ ಇಂದು ಮದ್ಯಾಹ್ನ 3 ಗಂಟೆಗೆ ಕೋರ್ಟ್ ತೀರ್ಪು ಪ್ರಕಟಿಸಲಿದೆ.
ಕೋರ್ಟ್‌ನಿಂದ ವಾಪಸಾಗುವಾಗ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಬಿಜೆಪಿ ನಮ್ಮ ವಿರುದ್ಧ ಸಿವಿಲ್ ರೂಪದ ಖಾಸಗಿ ಕೇಸ್ ದಾಖಲಿಸಿದ್ದಾರೆ. ನಾವು ಕಾನೂನು ಪಾಲಕರಾಗಿದ್ದು, ಹಾಗಾಗಿ ಕೋರ್ಟ್ ಮುಂದೆ ಹಾಜರಾಗಿದ್ದೇವೆ. ನನ್ನ ಹಾಗೂ ರಾಹುಲ್ ವಿರುದ್ಧ ದೂರು ದಾಖಲಾಗಿತ್ತು. ಇಂದು ನನಗೆ ಜಾಮೀನು ಸಿಕ್ಕಿದ್ದು, ರಾಹುಲ್ ಗಾಂಧಿ ಕೋರ್ಟ್ ಮುಂದೆ ಹಾಜರಾಗುತ್ತಾರೆ ಎಂದು ಸಿಎಂ ಸ್ಪಷ್ಟನೆ ನೀಡಿದರು.
ಎಚ್.ಡಿ.ಕೋಟೆ : ತಾಲ್ಲೂಕಿನ ಕ್ಯಾತನಹಳ್ಳಿ, ಆಲನಹಳ್ಳಿ, ಜಿ. ಬಿ. ಸರಗೂರು ವ್ಯಾಪ್ತಿಯ ಐದು ಕೆರೆಗಳಿಗೆ ನೀರು ತುಂಬಿಸಲು ಅಧಿಕಾರಿಗಳು ನಿರ್ಲಕ್ಷಿ…
ಮೈಸೂರಿನ ರಾಮಕೃಷ್ಣನಗರದಲ್ಲಿರುವ ಸುಯೋಗ್ ಆಸ್ಪತ್ರೆ ಎದುರಿನ ರಸ್ತೆಯು ಸಂಪೂರ್ಣ ಹದಗೆಟ್ಟಿದೆ. ಈ ರಸ್ತೆಯಲ್ಲಿ ಎಲ್ಲೆಡೆ ದೊಡ್ಡ ದೊಡ್ಡ ಗುಂಡಿಗಳು ನಿರ್ಮಾಣವಾಗಿದ್ದು,…
ಇತ್ತೀಚಿನ ದಿನಗಳಲ್ಲಿ, ಟೂತ್ ಪೇಸ್ಟ್‌ಗಳಲ್ಲಿ ತಂಬಾಕು ಮತ್ತು ನಿಕೋಟಿನ್ ಅಂಶ ಪತ್ತೆಯಾಗಿದ್ದು, ಇದರ ಸೇವನೆಯಿಂದ ಹಲವು ಮಕ್ಕಳು ತೊಂದರೆಗೊಳಗಾಗಿರುವ ಘಟನೆಗಳು…
ಮೈಸೂರಿನ ಕುವೆಂಪುನಗರದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ (ಸೆಸ್ಕ್) ರಸ್ತೆ, ಗದ್ದಿಗೆ ರಸ್ತೆ, ವಿಶ್ವಮಾನವ ಜೋಡಿ ರಸ್ತೆ, ವಿದ್ಯಾರಣ್ಯಪುರಂ -…
ಆಂದ್ರದಲ್ಲಿನ ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರ ನಾಲ್ಕು ವರ್ಷಗಳ ಹಿಂದೆ ಜಾರಿಗೆ ತಂದ ನೂತನ ಶಿಕ್ಷಣ ನೀತಿಯನ್ನು ಪರಿಣಾಮಕಾರಿಯಾಗಿ…
ತಿ.ನರಸೀಪುರ : ಬೈಕ್ ಗೆ ಎದುರಿಗೆ ವೇಗವಾಗಿ ಬಂದ ಲಾರಿಯೊಂದು ಡಿಕ್ಕಿಯಾದ ಪರಿಣಾಮ ಯುವಕನೋರ್ವ ಸ್ಥಳದಲ್ಲಿಯೇ ಮೃತಪಟ್ಟಿ ಘಟನೆ ತಾಲೂಕಿನ…