ರಾಜ್ಯ

ಎಂ.ಆರ್.ಶ್ರೀನಿವಾಸಮರ್ತಿ ಸಮಿತಿಯ ವರದಿ ಜಾರಿಗೆ ಸಿಎಂ ಉತ್ಸುಕ : ವಾರ್ತಾ ಇಲಾಖೆ ಆಯುಕ್ತರ ಜತೆ ಶೀಘ್ರ ಚರ್ಚೆ

ಬೆಂಗಳೂರು : ವಾರ್ತಾ ಇಲಾಖೆಯಲ್ಲಿ ಸಮಗ್ರ ಬದಲಾವಣೆ ತರುವ ಸಂಬಂಧ ನಿವೃತ್ತ ಐಎಎಸ್ ಅಧಿಕಾರಿ ಎಂ.ಆರ್.ಶ್ರೀನಿವಾಸಮೂರ್ತಿ ನೇತೃತ್ವದ‌ ಸಮಿತಿ ಸಲ್ಲಿಸಿದ ವರದಿ ಜಾರಿ ಮಾಡುವಂತೆ ಆಗ್ರಹಿಸಿ, ರಾಜ್ಯ ಗ್ಯಾರಂಟಿ ಪ್ರಾಧಿಕಾರದ ಉಪಾಧ್ಯಕ್ಷ, ವಿಧಾನ ಪರಿಷತ್ ಶಾಸಕರಾದ ದಿನೇಶ ಗೂಳಿಗೌಡ ಅವರು ಮಾಡಿದ ಮನವಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಂದಿಸಿದ್ದಾರೆ.

ತಕ್ಷಣ ಚರ್ಚಿಸುವಂತೆ ವಾರ್ತಾ ಇಲಾಖೆ ಆಯುಕ್ತರಿಗೆ ಸಿಎಂ ನಿರ್ದೇಶನ ನೀಡಿದ್ದಾರೆ.

ಮನವಿಯಲ್ಲಿ ಏನಿದೆ..?
1978ರಲ್ಲಿ ವಾರ್ತಾ ಇಲಾಖೆ ಅಳವಡಿಸಿಕೊಂಡಿದ್ದ ಅವೈಜ್ಞಾನಿಕ ವೃಂದ ಮತ್ತು ನೇಮಕಾತಿ ನಿಯಮದ ಪರಿಣಾಮವಾಗಿ ವಾರ್ತಾ ಇಲಾಖೆ . ಇದನ್ನು ಸರಿಪಡಿಸುವ ಕೆಲಸ ಮಾಡಿಲ್ಲ ಅನುಗುಣವಾಗಿ ಹೊಸ ವೃಂದ ಮತ್ತು ನೇಮಕಾತಿ ನಿಯಮ ಅಳವಡಿಸಿಕೊಳ್ಳುವ ಬದಲು ಹಳೆ ಪದ್ದತಿ ಇದೆ. ಈಗಾಗಲೇ 15-20 ವರ್ಷದಿಂದ ಬಡ್ತಿ ಇಲ್ಲದೆ ಸರ್ಕಾರದ ಕೆಲಸವನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಸಾಧ್ಯವಾಗುವುದಿಲ್ಲ.

ಆದ್ದರಿಂದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಹೊಸದಾಗಿ ಅಳವಡಿಸಿಕೊಳ್ಳಲು ಉದ್ದೇಶಿಸಿರುವ ವೃಂದ ಮತ್ತು ನೇಮಕಾತಿ ನಿಯಮದ ಕರಡು ಪ್ರಸ್ತಾವನೆಯನ್ನು ಎಲ್ಲ ನೌಕರರಿಗೆ ಅಧಿಕೃತವಾಗಿ ನೀಡಿ, ತಕರಾರು, ಸಲಹೆ,‌ ಸೂಚನೆಗಳನ್ನು ಲಿಖಿತವಾಗಿ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ವೈಜ್ಞಾನಿಕ ನೇಮಕಾತಿ ನಿಯಮ ರೂಪಿಸಿ
ಎಲ್ಲ ವೃಂದದ ನೌಕರರಿಗೆ ಸೇವಾ ಅವಧಿಯಲ್ಲಿ ಕನಿಷ್ಠ 3 ಬಡ್ತಿಗಳಾದರೂ ಸಿಗುವಂತೆ ವೈಜ್ಞಾನಿಕವಾಗಿ ಹಾಗೂ ತರ್ಕಬದ್ಧವಾಗಿ ಹೊಸ ವೃಂದ ಮತ್ತು ನೇಮಕಾತಿ ನಿಯಮಗಳನ್ನು ತಯಾರಿಸಲು ಸಂಬಂಧಪಟ್ಟವರಿಗೆ ಸೂಚಿಸಬೇಕು. ಹಳೆಯ ವೃಂದ ಮತ್ತು ನೇಮಕಾತಿ ನಿಯಮದಿಂದ ತೊಂದರೆಗೊಳಗಾದ ನೌಕರರು ಹೊಸ ವೃಂದ ಮತ್ತು ನೇಮಕಾತಿ ನಿಯಮಗಳ ಅಳವಡಿಕೆಯ ನಂತರವೂ ಮತ್ತೆ ಸರಿಯಾದ ಬಡ್ತಿ ಇಲ್ಲದೆ ಅನ್ಯಾಯಕ್ಕೆ ಒಳಗಾಗದಂತೆ ಎಚ್ಚರವಹಿಸಲು ಸಂಬಂಧಪಟ್ಟವರಿಗೆ ಸೂಚಿಸಬೇಕು ಎಂದು ದಿನೇಶ ಗೂಳಿಗೌಡ ಮನವಿ ಮಾಡಿದ್ದರು.

8 ವರ್ಷವಾದರೂ ಜಾರಿಯಾಗದ ವರದಿ
ಹಿಂದೆ ನಮ್ಮದೇ ಸರ್ಕಾರ ಈ ಸಂಬಂಧ ಅಧ್ಯಯನಕ್ಕೆ ನಿವೃತ್ತ ಐ.ಎ.ಎಸ್. ಅಧಿಕಾರಿಯಾದ ಶ್ರೀ ಎಂ. ಆರ್. ಶ್ರೀನಿವಾಸಮೂರ್ತಿ ನೇತೃತ್ವದ ಸಮಿತಿಯನ್ನು ನೇಮಕ ಮಾಡಿತ್ತು. ಸಮಿತಿಯು ವಿವಿಧ ರಾಜ್ಯಗಳಿಗೆ ಹೋಗಿ ಭೇಟಿ ಕೊಟ್ಟು, ಅಲ್ಲಿನ ವ್ಯವಸ್ಥೆಯನ್ನು ಅಧ್ಯಯನ ಮಾಡಿದೆ. ವಿವಿಧ ಕ್ಷೇತ್ರಗಳ ಗಣ್ಯರನ್ನು ಮಾತನಾಡಿಸಿ ಸಮಗ್ರ ವರದಿ ನೀಡಿದೆ. ಆದರೆ, ಸರ್ಕಾರಕ್ಕೆ ವರದಿ ಸಲ್ಲಿಕೆಯಾಗಿ 08 ವರ್ಷ ಕಳೆದರೂ ವರದಿಯು ಅನುಷ್ಠಾನಗೊಂಡಿಲ್ಲ. ಹಳೇ ಪದ್ಧತಿಯನ್ನೇ ಮುಂದುವರಿಸಿಕೊಂಡು ಬಂದಿವೆ. ಇಲಾಖೆಯಲ್ಲಿ ಹಲವಾರು ಅಧಿಕಾರಿಗಳು ಮತ್ತು ಸಿಬ್ಬಂದಿ 15-20 ವರ್ಷಗಳು ಬಡ್ತಿ ಇಲ್ಲದೆ, ಒಂದೇ ವೃಂದ(ಕೇಡರ್)ದಲ್ಲಿ ಸೇವೆ ಸಲ್ಲಿಸುತ್ತಿದ್ದು, ಇದರಿಂದಾಗಿ ನೌಕರರಲ್ಲಿ , ನಿರುತ್ಸಾಹ ಉಂಟಾಗಿದೆ.

ಸರ್ಕಾರದ ಪ್ರಚಾರದ ಕೆಲಸಗಳು ಸಮರ್ಪಕವಾಗಿ ಇನ್ನಷ್ಟು ವೇಗವಾಗಿ ಆಗಬೇಕು ಅನ್ನುವುದು ಜನಪ್ರತಿನಿಧಿಗಳ, ಮಾಧ್ಯಮ ಪ್ರತಿನಿಧಿಗಳ ಅಭಿಲಾಷ ಹೊಂದಿದ್ದಾರೆ. ಇಲಾಖೆಯಲ್ಲಿ ವೃಂದ ಮತ್ತು ನೇಮಕಾತಿ ನಿಯಮಗಳ ತಿದ್ದುಪಡಿಯನ್ನು ಮಾಡಲಾಗುತ್ತಿದ್ದು, ಕೆಲವೇ ಕೆಲವರಿಗೆ ಅನುಗುಣವಾಗಿ ಕರಡು ತಯಾರಿಸಿಕೊಳ್ಳಲಾಗಿದೆ ಎಂಬುದು ತಿಳಿದುಬಂದಿದೆ. ಮನಸೋ ಇಚ್ಛೆ ಸಂಬಂಧವೇ ಇಲ್ಲದ ಒಂದು ವೃಂದದಿಂದ ಮತ್ತೊಂದು ವೃಂದಕ್ಕೆ ಬಡ್ತಿ ನೀಡಲು ಪ್ರಸ್ತಾಪಿಸಲಾಗಿದೆ.

ಹೊಸ ತಿದ್ದುಪಡಿ
ಉದಾಹರಣೆಗೆ ಸಹಾಯಕ ನಿರ್ದೇಶಕ, ಹಿರಿಯ ಸಹಾಯಕ ನಿರ್ದೇಶಕ, ಉಪ ನಿರ್ದೇಶಕ, ಜಂಟಿ ನಿರ್ದೇಶಕ ಹುದ್ದೆಗಳು ವಾರ್ತಾ ವಿಷಯಗಳ ಹಿನ್ನೆಲೆ ಇರುವ ಹುದ್ದೆಗಳಾಗಿವೆ. ಪತ್ರಿಕೋದ್ಯಮ ಶಿಕ್ಷಣ ಹಾಗೂ ಪತ್ರಕರ್ತರಾಗಿ ಸುದ್ದಿ ಮಾಧ್ಯಮದಲ್ಲಿ 2-3 ವರ್ಷ ಕೆಲಸ ಮಾಡಿದ ಅನುಭವ ಹೊಂದಿದವರು ಸಹಾಯಕ ನಿರ್ದೇಶಕರಾಗಿ, ಹಿರಿಯ ಸಹಾಯಕ ನಿರ್ದೇಶಕರಾಗಿ ನಂತರ ಉಪ ನಿರ್ದೇಶಕ ಹುದ್ದೆಗೆ ಬಡ್ತಿ ಹೊಂದಬೇಕಾಗುತ್ತಿದೆ. ಆದರೆ, ಪತ್ರಿಕೋದ್ಯಮದ ಅನುಭವ ಹಾಗೂ ಪ್ರಚಾರ ಕೆಲಸವನ್ನು ಎಂದೂ ನಿರ್ವಹಿಸ ಆಡಳಿತಾಧಿಕಾರಿ ಹುದ್ದೆಯಿಂದ ಉಪ ನಿರ್ದೇಶಕ ಹುದ್ದೆಗೆ ಬಡ್ತಿ ನೀಡುವ ಅವೈಜ್ಞಾನಿಕ ಪ್ರಸ್ತಾವನೆಯನ್ನು ಹೊಸ ತಿದ್ದುಪಡಿಯಲ್ಲಿ ಅಳವಡಿಸಲಾಗುತ್ತಿದೆ. ಇದರಿಂದ ಇಲಾಖೆ ಕಾರ್ಯಸ್ವರೂಪದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ, ಹಿರಿಯ ಸಹಾಯಕ ನಿರ್ದೇಶಕ ಹಾಗೂ ಉಪ ನಿರ್ದೇಶಕ ಹುದ್ದೆಗಳು ಪತ್ರಿಕೋದ್ಯಮ ವಿಷಯದ ತಾಂತ್ರಿಕ ಹುದ್ದೆಗಳಾಗಿರುತ್ತವೆ. ಆದರೆ, ಲಿಪಿಕ ವರ್ಗದಲ್ಲಿ 3-4 ಬಡ್ತಿ ಪಡೆದುಕೊಂಡಿರುವ ಹಾಗೂ ಪತ್ರಿಕೋದ್ಯಮದ ಅನುಭವ ಇಲ್ಲದ ಆಡಳಿತಾಧಿಕಾರಿಯಾದವರನ್ನು ತಾಂತ್ರಿಕ ಹುದ್ದೆಯಾದ ಉಪ ನಿರ್ದೇಶಕ ಹುದ್ದೆಗೆ ಬಡ್ತಿ ಮೂಲಕ ನೇಮಕ ಮಾಡುವ ಅವೈಜ್ಞಾನಿಕ ಕ್ರಮವನ್ನು ಹೊಸ ವೃಂದ ಮತ್ತು ನೇಮಕಾತಿ ನಿಯಮದಲ್ಲಿ ಅಳವಡಿಸಿಕೊಳ್ಳಲಾಗುತ್ತಿದೆ/ಎಂದು ದಿನೇಶ ಗೂಳಿಗೌಡ ತಮ್ಮ ಮನವಿಯಲ್ಲಿ ವಿವರಿಸಿದ್ದಾರೆ.

ಚಂದು ಸಿಎನ್

ಮೈಸೂರು ಜಿಲ್ಲೆಯ ಹುಣಸೂರಿನ ಚಲ್ಲಹಳ್ಳಿ ಗ್ರಾಮದವನಾದ ನಾನು ಒಂದು ದಶಕದಿಂದ ಮೈಸೂರಿನಲ್ಲಿ ನೆಲೆಸಿದ್ದೇನೆ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ಪಡೆದು ಅಂದಿನಿಂದಲೇ ಹವ್ಯಾಸಿ ಪತ್ರಕರ್ತನಾಗಿ ವೃತ್ತಿ ಆರಿಸಿಕೊಂಡೆ. ನಂತರ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ ಬಳಿಕ ಪತ್ರಿಕೋದ್ಯಮ ಕ್ಷೇತ್ರದಲ್ಲಿ 2 ವರ್ಷಗಳ ಕಾಲ ಅನುಭವ ಪಡೆದಿದ್ದೇನೆ. ಸದ್ಯ ಮೈಸೂರಿನ ಪ್ರತಿಷ್ಠಿತ ಆಂದೋಲನ ಪತ್ರಿಕೆಯ ಡಿಜಿಟಲ್‌ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಾಚೀನ ಪಳಿಯುಳಿಕೆ ಹಾಗೂ ಇತಿಹಾಸದ ಕಡೆ ಎಲ್ಲಿಲ್ಲದ ಒಲವು. ಪ್ರವಾಸ, ಪುಸ್ತಕ ಓದುವುದು ನೆಚ್ಚಿನ ಹವ್ಯಾಸಗಳಾಗಿವೆ. ಮೊಬೈಲ್‌ ಸಂಖ್ಯೆ: 9164535321.

Recent Posts

ಓದುಗರ ಪತ್ರ: ಮೇಕೆ.. ಡಿಕೆ !

ಮೇಕೆ.. ಡಿಕೆ ! ಅಂದು, ಹರಿಯುವ ಕಾವೇರಿ ನದಿಯ ಈ ಕಡೆಯಿಂದ ಆ ಕಡೆಗೆ ಜಿಗಿದು ದಾಟಿ ಬಿಟ್ಟಿತಂತೆ ಮೇಕೆ…

16 hours ago

ಓದುಗರ ಪತ್ರ: ಮಂತ್ರಾಲಯ ಮಠದ ಕಾರ್ಯ ಜನಮೆಚ್ಚುವಂತಹದ್ದು

ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದ ವತಿಯಿಂದ ಸುಮಾರು ೪೦ ಎಕರೆ ಪ್ರದೇಶದಲ್ಲಿ ಜಲಾಶಯ…

16 hours ago

ಓದುಗರ ಪತ್ರ: ಕಾವೇರಿ: ಶಾಶ್ವತ ಪರಿಹಾರ ಅಗತ್ಯ

ಕಳೆದ ವಾರ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು ತಮಿಳುನಾಡಿಗೆ ಮುಂದಿನ ೧೫ ದಿನಗಳ ಕಾಲ, ಪ್ರತಿ ದಿನ ೩,೫೦೦ ಕ್ಯೂಸೆಕ್…

16 hours ago

ಕಾಯಕಲ್ಪಕ್ಕೆ ಕಾದಿವೆ ನಿರ್ಲಕ್ಷಿತ ಸರ್ಕಾರಿ ಆಸ್ತಿಗಳು

ವಸಂತಕುಮಾರ್ ಮೈಸೂರು ಮಠ, ಸಾಮಾಜಿಕ ಹೋರಾಟಗಾರ ಮೈಸೂರಿನಲ್ಲಿ ಹಲವೆಡೆ ದುಸ್ಥಿತಿಯಲ್ಲಿರುವ ಹಾಗೂ ಅನೈರ್ಮಲ್ಯ ತಾಣವಾಗಿರುವ ಹಲವು ಸರ್ಕಾರಿ ಕಟ್ಟಡಗಳು, ವಾಚನಾಲಯ…

16 hours ago

ಮೀಸಲಾತಿ ಸೌಲಭ್ಯಕ್ಕೆ ವಿರೋಧವೇಕೆ?

ಟಿ.ಕೆ.ಹರೀಶ್ ಸಾಮಾಜಿಕ ನ್ಯಾಯ ಒದಗಿಸುವ ಸಂವಿಧಾನಾತ್ಮಕ ವ್ಯವಸ್ಥೆ ಮೀಸಲಾತಿ ಭಾರತದಲ್ಲಿ ಮೀಸಲಾತಿ ವ್ಯವಸ್ಥೆಯನ್ನು ಸಾಮಾಜಿಕ ನ್ಯಾಯದ ಸಾಧನವಾಗಿ ಜಾರಿಗೆ ತರಲಾಗಿದೆ.…

16 hours ago

ಬಿರುಕು ಬಿಡುತ್ತಿರುವ ಕೆರೆ ಕೋಡಿಯ ಗೋಡೆ

ದೂರ ನಂಜುಂಡಸ್ವಾಮಿ ದೂರ ಗ್ರಾಮದ ಕೆರೆಯ ಪೂರ್ವಭಾಗದ ಕೋಡಿಯನ್ನು ದುರಸ್ತಿಪಡಿಸಿ, ಹೂಳು ತೆಗೆಯಲು ಆಗ್ರಹ ದೂರ: ಮೈಸೂರು ತಾಲ್ಲೂಕಿನ ಜಯಪುರ…

19 hours ago