ಬೆಂಗಳೂರು : ತಮ್ಮ ಅಧಿಕಾರಾವಧಿಯಲ್ಲಿ ಇದೇ ರೀತಿ ಟೆಂಡರ್ ಕರೆದಿರುವ ಅನುಭವದ ಆಧಾರದ ಮೇಲೆ ಪ್ರತಿ ಪಕ್ಷದವರು ನಮ್ಮ ಸರ್ಕಾರದ ಮೇಲೂ ಆರೋಪ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿರುಗೇಟು ನೀಡಿದ್ದಾರೆ. ಟೆಂಡರ್ ಆರೋಪ ಕುರಿತಂತೆ ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ,ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಕ್ಕೆ ತಿರುಗೇಟು ನೀಡಿದ ಸಿಎಂ, ಹಿಂದೆ ಸಿದ್ದರಾಮಯ್ಯ ಅವರು ಅಧಿಕಾರಾವಧಿಯಲ್ಲಿ ಇದೇ ರೀತಿ ಟೆಂಡರ್ ಕರೆದ ಅನುಭವ ಇರಬಹುದು. ಹೀಗಾಗಿ ನಮ್ಮ ಸರ್ಕಾರದ ಮೇಲೂ ಆರೋಪಿಸಿದ್ದಾರೆ. ಅದಕ್ಕೆಲ್ಲ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದರು. ಕಾಂಗ್ರೆಸ್ ನಾಯಕರು ಮಾಡಿರುವ ಎಲ್ಲಾ ಆರೋಪಗಳಿಗೂ ಸದನದಲ್ಲೇ ಉತ್ತರ ಕೊಡುತ್ತೇನೆ. ಯಾವುದನ್ನೂ ಮುಚ್ಚಿಡುವುದಿಲ್ಲ. ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲೆ ಉತ್ತರ ನೀಡುವಾಗ ಅವರ ಆರೋಪಗಳಿಗೆ ಉತ್ತರ ಕೊಡುತ್ತೇನೆ. ಇದಕ್ಕೆಲ್ಲಾ ಹೆದರುವ ಅಗತ್ಯವಿಲ್ಲ ಎಂದರು.
ಕಳೆದ ಚುನಾವಣೆ ವೇಳೆ ಕಾಂಗ್ರೆಸ್ನವರು ಏನೆಲ್ಲಾ ಕರ್ಮಕಾಂಡ ಮಾಡಿದ್ದರೋ ಅದನ್ನು ನೆನಪು ಮಾಡಿಕೊಂಡು ಮಾತನಾಡಿದ್ದಾರೆ. ಅವರು ಮುಂದೆ ಅಧಿಕಾರಕ್ಕೆ ಬಂದರೆ ಸುಲಿಗೆ ಮಾಡಲು ಬರುತ್ತಿದ್ದಾರೆ ಎಂಬುದು ಅವರ ಆರೋಪಗಳಿಂದಲೇ ಸ್ಪಷ್ಟವಾಗಿದೆ. ಇದು ಅವರ ಅಜೆಂಡಾ ಕೂಡ ಎಂದು ವಾಗ್ದಾಳಿ ನಡೆಸಿದರು.
ನಮ್ಮ ಸರ್ಕಾರದ ಮೇಲೆ 40 ಪರ್ಸೆಂಟ್ ಕಮಿಷನ್ ಆರೋಪ ಮಾಡಿರುವವರು ಈಗಲು ಸಾಬೀತು ಮಾಡಲು ಸಾಧ್ಯವಿಲ್ಲ. ನ್ಯಾಯಾಲಯಕ್ಕೆ ದಾಖಲೆಗಳನ್ನು ಸಲ್ಲಿಸುತ್ತೇವೆ ಎಂದರೂ ಈಗಲೂ ಕೊಟ್ಟಿಲ್ಲ. ಮೊದಲು ಕಾಂಗ್ರೆಸ್ನವರು ತಮ್ಮ ಕಾಲದ ಟೆಂಡರ್ ಹಗರಣಗಳ ಬಗ್ಗೆ ಜನರಿಗೆ ಉತ್ತರ ಕೊಡಲಿ ಅವರ ಕಾಲದ ಅಕ್ರಮಗಳು ಲೋಕಾಯುಕ್ತದಲ್ಲಿ ತನಿಖೆಯಾಗುತ್ತಿದೆ. ಇದಕ್ಕೆ ಏಕೆ ಉತ್ತರ ಕೊಡುತ್ತಿಲ್ಲ ಎಂದು ಸಿಎಂ ಪ್ರಶ್ನಿಸಿದರು.ನಾವು ಟೆಂಡರ್ ಪರಿಶೀಲನೆ ಸಮಿತಿ ಮಾಡಿದ್ದೇವೆ. ಪ್ರತಿಯೊಂದು ಟೆಂಡರ್ ಗಳನ್ನೂ ಪಾರದರ್ಶಕದಿಂದ ನಡೆಸಿದ್ದೇವೆ. ಇದೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಚಿವರಾಗಿದ್ದ ವೇಳೆ ಪರಿಶೀಲನಾ ಸಮಿತಿಯನ್ನು ತೆಗೆದು ಹಾಕಿದ್ದು ಏಕೆ ಎಂಬುದನ್ನು ಬಹಿರಂಗಪಡಿಸಲಿ ಎಂದು ಸವಾಲು ಹಾಕಿದರು.
ಬಿಜೆಪಿಯವರನ್ನು ಜೈಲಿಗೆ ಹಾಕುತ್ತೇವೆ ಎಂಬ ಕಾಂಗ್ರೆಸ್ ನಾಯಕರ ಆರೋಪಕ್ಕೆ ತಿರುಗೇಟು ನೀಡಿದ ಬೊಮ್ಮಾಯಿ, ಮೊದಲು ಅವರು ಜೈಲಿಗೆ ಹೋಗುವುದನ್ನು ತಡೆದುಕೊಳ್ಳಿ. ಜಾಮೀನು ರಕ್ಷಣೆ ಮಾಡಿಕೊಳ್ಳುವ ಪ್ರಯತ್ನ ಮಾಡಲಿ ಎಂದು ವಾಗ್ದಾಳಿ ನಡೆಸಿದರು.
- ಮುಖಪುಟ
- ಮೈಸೂರು
- ಜಿಲ್ಲೆಗಳು
- ರಾಜ್ಯ
- ದೇಶ- ವಿದೇಶ
- ರಾಜಕೀಯ
- ಅಪರಾಧ
- ಮಹಿಳೆ
- ಕೃಷಿ
- ವಿಜ್ಞಾನ ತಂತ್ರಜ್ಞಾನ
- ಕ್ರೀಡೆ
- ವಾಣಿಜ್ಯ
- ಚಿತ್ರಸಂತೆ
- ವಿಶೇಷ
- ಆಂದೋಲನ ಪುರವಣಿ
- ಎಡಿಟೋರಿಯಲ್
- ಆಂದೋಲನ 50
- ಜಾಹೀರಾತು
- Cricket
Subscribe to Updates
Get the latest creative news from FooBar about art, design and business.