ಮೈಸೂರು ಮೃಗಾಲಯದಲ್ಲಿ ‘ಗೋರಿಲ್ಲಾ ಮನೆ’ ಉದ್ಘಾಟನೆ

ಮೈಸೂರು: ಮೈಸೂರು ಮೃಗಾಲಯದಲ್ಲಿ ಗೋರಿಲ್ಲಾ ಮನೆ ಉದ್ಘಾಟನೆ ಮಾಡಲಾಗಿದ್ದು ಗೊರಿಲ್ಲಾಗಳನ್ನ ವೀಕ್ಷಿಸಲು ಪ್ರವಾಸಿಗರಿಗೆ ಅವಕಾಶ ನೀಡಲಾಗಿದೆ.

ಗೊರಿಲ್ಲಾಗಳ ಸಾರ್ವಜನಿಕ ವೀಕ್ಷಣೆಗೆ ವರ್ಚ್ಯುಯಲ್ ಮೂಲಕ ಸಿಎಂ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದರು. ಇನ್ಪೋಸಿಸ್ ವತಿಯಿಂದ‌ ಸಿಎಸ್ ಆರ್ ಅನುದಾನದಲ್ಲಿ ಗೋರಿಲ್ಲಾ ಮನೆ ನಿರ್ಮಾಣವಾಗಿದ್ದು, ಜರ್ಮನಿಯಿಂದ ಗೋರಿಲ್ಲಾಗಳನ್ನು ತರಸಿಕೊಳ್ಳಲಾಗಿದೆ.

ಇನ್ಪೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಲ್ ಆರ್ ಮಹದೇವಸ್ವಾಮಿ,‌ ಡಿಸಿ ಬಗಾದಿ ಗೌತಮ್, ಮೃಗಾಲಯ ನಿರ್ದೇಶಕ ಅಜಿತ್ ಕುಲಕರ್ಣಿ ಸೇರಿ ಹಲವರು ಭಾಗಿಯಾಗಿದ್ದರು. ಮೈಸೂರು ಮೃಗಾಲಯದ ನಿರ್ವಹಣೆ ಬಗ್ಗೆ ಸುಧಾಮೂರ್ತಿ ಅವರು ಮೆಚ್ಚುಗೆ ವ್ಯಕ್ಯಪಡಿಸಿದರು.

× Chat with us