ಬೆಂಗಳೂರು : ಬಿ.ಎಸ್.ಯಡಿಯೂರಪ್ಪ ಸಿಎಂ ಆಗಿದ್ದ ಅವಧಿಯಲ್ಲಿ ನೇಮಕವಾಗಿದ್ದ ನಿಗಮ ಮಂಡಳಿ ಅಧ್ಯಕ್ಷರ ಬದಲಾವಣೆ ಆಗಬೇಕು ಅನ್ನೋದು ಬಿಎಸ್ವೈ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲೇ ಕೋರ್ ಕಮಿಟಿ ಸಭೆಯಲ್ಲಿ ನಿರ್ಧಾರ ಆಗಿತ್ತು. ಆದ್ರೆ ಅಂದು ನಿರ್ಧಾರ ಆಗಿದ್ದರೂ ಇಲ್ಲಿಯ ತನಕ ನಿಗಮ ಮಂಡಳಿ ಅಧ್ಯಕ್ಷರ ಬದಲಾವಣೆ ಮಾಡೋಕೆ ಸಾಧ್ಯವಾಗಿರಲಿಲ್ಲ. ಯಡಿಯೂರಪ್ಪ ಸಿಎಂ ಸ್ಥಾನದಿಂದ ಕೆಳಗಿಳಿದ್ರು. ಬೊಮ್ಮಾಯಿ ಸಿಎಂ ಆಗಿ ಅಧಿಕಾರ ವಹಿಸಿಕೊಂಡ ಮೇಲೂ ನಿಗಮ ಮಂಡಳಿ ಬದಲಾವಣೆ ಇಂದಲ್ಲ ನಾಳೆ, ಇಂದಲ್ಲ ನಾಳೆ ಎನ್ನುವಂತೆ ಆಗಿತ್ತು. ಆದ್ರೆ ಅಂತಿಮವಾಗಿ ಕೋರ್ ಕಮಿಟಿ ಸಭೆಯಲ್ಲಿ ಚರ್ಚೆ ಆಗಿ ನಿರ್ಧಾರ ಮಾಡಿದ ಮೇಲೂ ಒಂದು ವರ್ಷ ಬಳಿಕ ಈಗ ಹೊಸದಾಗಿ ಅಧ್ಯಕ್ಷರ ಬದಲಾವಣೆ ಮಾಡಲು ಸಿಎಂ ಬೊಮ್ಮಾಯಿ ನಿರ್ಧಾರ ಮಾಡಿದ್ದು. ಇಂದು(ಮಂಗಳವಾರ) ಮೊದಲ ಪಟ್ಟಿ ಬಿಡುಗಡೆ ಮಾಡಿದ್ದಾರೆ.
ಹಿರಿಯ ಸಚಿವ ಆರ್. ಅಶೋಕ್, ಮಾಜಿ ಸಚಿವ ಲಕ್ಷ್ಮಣ ಸವದಿ ಪಾರ್ಟಿಯ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನ ಒಳಗೊಂಡ ಮೂವರ ಸಮಿತಿಯನ್ನು ನಿಗಮ ಮಂಡಳಿ ಆಯ್ಕೆ ಪ್ರಕ್ರಿಯೆಗೆ ರಚಿಸಲಾಗಿತ್ತು. ಕಳೆದ ವಾರವೇ ಸಿಎಂ ಬೊಮ್ಮಾಯಿಗೆ ಪಟ್ಟಿ ಸಲ್ಲಿಸಿತ್ತಾದರೂ, ಸಿಎಂ ಬೊಮ್ಮಾಯಿ ನಿನ್ನೆ ಅಂತಿಮವಾಗಿ ಬೊಮ್ಮಾಯಿ ಗ್ರೀನ್ ಸಿಗ್ನಲ್ ನೀಡಿದ್ದಾರೆ.
ರಾಜ್ಯಮಟ್ಟದ ನಿಗಮ ಮಂಡಳಿ ಪ್ರಾಧಿಕಾರಗಳ ಅಧ್ಯಕ್ಷರ ನಾಮನಿರ್ದೇಶನವನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಪಡಿಸಿ ಆದೇಶಿಸಿದೆ. ಮೈಸೂರು ಭಾಗದ ನಿಗಮ ಮಂಡಳಿ ಪ್ರಾಧಿಕಾರಗಳ ಅಧ್ಯಕ್ಷರ ಪಟ್ಟಿ ಇಲ್ಲಿವೆ.
- ಶ್ರೀ ಎನ್ ಶಿವಲಿಂಗಯ್ಯ – ಅಚ್ಚುಕಟ್ಟು ಅಭಿವೃದ್ಧಿ ಪ್ರಾಧಿಕಾರ, ಕಾವೇರಿ ಜಲನಯನ ಯೋಜನೆ (ಕಾಡಾ) ಮೈಸೂರು.
- ಶ್ರೀ ಎಲ್.ಆರ್.ಮಹದೇವಸ್ವಾಮಿ – ಕರ್ನಾಟಕ ಮೃಗಾಲಯ ಪ್ರಾಧಿಕಾರ, ಮೈಸೂರು.
- ಎನ್.ವಿ.ಪಣೀಶ್ – ಮೈಸೂರು ಫೈಂಡ್ಸ್ ಮತ್ತು ವಾರ್ನಿಸ ನಿಯಮಿತ , ಮೈಸೂರು
- ಹೇಮಂತ್ ಕುಮಾರ್ ಗೌಡ, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರ, ಮೈಸೂರು.
- ಶಿವಲಿಂಗೇಗೌಡ ಜೆ.ಬಿನ್. ಜವರೇಗೌಡ, ಮೈಸೂರು ಸಕ್ಕರೆ ಕಾರ್ಖಾನೆ, ಮಂಡ್ಯ