ರಾಜ್ಯ

ಚೆನ್ನಗಿರಿ ಪ್ರಕರಣ: ಯುವಕನ ಸಾವು ಲಾಕಪ್‌ ಡೆತ್‌ ಅಲ್ಲ; ಸಿಎಂ ಸಿದ್ದರಾಮಯ್ಯ

ಮೈಸೂರು: ದಾವಣಗೆರೆಯ ಚನ್ನಗಿರಿ ಪೊಲೀಸ್‌ ಠಾಣೆಯಲ್ಲಿನ ಯುವಕನ ಸಾವು ಲಾಕಪ್‌ ಡೆತ್‌ ಅಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ಇಂದು(ಮೇ.೨೫) ಮೈಸೂರಿನಲ್ಲಿ ಮಾತನಾಡಿದ ಅವರು, ಮೃತ ಯುವಕ ಆದಿಲ್‌ಗೆ ಮೂರ್ಛೆ ರೋಗ ಇತ್ತು. ಆದ್ದರಿಂದ ಆತ ಮೃತಪಟ್ಟಿದ್ದಾನೆ ಎಂದರು.

ಎಫ್‌ಐಆರ್‌ ಇಲ್ಲದೇ ಪೊಲೀಸರು ವಿಚಾರಣೆಗೆ ಠಾಣೆಗೆ ಕರೆ ತಂದಿದ್ದು ತಪ್ಪು. ಈ ತಪ್ಪಿಗಾಗಿ ಪೋಲಿಸ್‌ ಅಧಿಕಾರಿಗಳ ಅಮಾನತಿಗೆ ಸೂಚಿಸಿದ್ದೇನೆ. ಆತನಿಗೆ ಪಿಟ್ಸ್‌ ಬಂದಿತ್ತು, ತಕ್ಷಣ ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೂ ಕೂಡ ಪ್ರಕರಣದ ಬಗ್ಗೆ ತನಿಖೆ ಮಾಡುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು.

ಏನಿದು ಪ್ರಕರಣ;
ದಾವಣಗೆರೆ ಜಿಲ್ಲೆಯ ಚೆನ್ನಗಿರಿ ಪೊಲೀಸ್‌ ಠಾಣೆ ವ್ಯಾಪ್ತಿಯ ಟಿಪ್ಪು ನಗರದ ನಿವಾಸಿ ಆದೀಲ್(‌೩೦)ನನ್ನು ಮಟ್ಕಾ ಪ್ರಕರಣದಲ್ಲಿ ಠಾಣೆಗೆ ವಿಚಾರಣೆಗೆ ಕರೆತಂದಿದ್ದರು. ಠಾಣೆಗೆ ಕರೆತರುತ್ತಿದ್ದಂತೆ, ಆದಿಲ್‌ ಬಿಪಿ ಲೋ ಆಗಿ ಕುಸಿದು ಬಿದ್ದಿದ್ದಾರೆ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಾಗಲು ಮಾಡಲಾಗಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದಾನೆ. ಇದರಿಂದ ಆಕ್ರೋಶಗೊಂದ ಮೃತನ ಕುಟುಂಬಸ್ಥರು ಪೊಲೀಸ್‌ ಠಾಣೆಗೆ ದಾಳಿ ಮಾಡಿ, ಪೊಲೀಸರೆ ಸಾಯಿಸಿದ್ದಾರೆ ಎಂದು ಆರೋಪಿಸುತ್ತಿದ್ದಾರೆ.

ಈ ಪ್ರಕರಣದಿಂದ ಕಲ್ಲು ತೂರಾಟ ನಡೆಸಿದ್ದು, ೧೧ ಪೊಲೀಸ್‌ ಸಿಬ್ಬಂದಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ೧೦ ಕ್ಕೂ ಹೆಚ್ಚು ಪೊಲೀಸ್‌ ವ್ಯಾನ್‌ಗಳು ಜಖಂಗೊಂಡಿವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ಪ್ರಕರಣ ದಾಖಲಾಗಿದೆ.

ಚಂದು ಸಿಎನ್

ಮೈಸೂರು ಜಿಲ್ಲೆಯ ಹುಣಸೂರಿನ ಚಲ್ಲಹಳ್ಳಿ ಗ್ರಾಮದವನಾದ ನಾನು ಒಂದು ದಶಕದಿಂದ ಮೈಸೂರಿನಲ್ಲಿ ನೆಲೆಸಿದ್ದೇನೆ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ಪಡೆದು ಅಂದಿನಿಂದಲೇ ಹವ್ಯಾಸಿ ಪತ್ರಕರ್ತನಾಗಿ ವೃತ್ತಿ ಆರಿಸಿಕೊಂಡೆ. ನಂತರ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ ಬಳಿಕ ಪತ್ರಿಕೋದ್ಯಮ ಕ್ಷೇತ್ರದಲ್ಲಿ 2 ವರ್ಷಗಳ ಕಾಲ ಅನುಭವ ಪಡೆದಿದ್ದೇನೆ. ಸದ್ಯ ಮೈಸೂರಿನ ಪ್ರತಿಷ್ಠಿತ ಆಂದೋಲನ ಪತ್ರಿಕೆಯ ಡಿಜಿಟಲ್‌ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಾಚೀನ ಪಳಿಯುಳಿಕೆ ಹಾಗೂ ಇತಿಹಾಸದ ಕಡೆ ಎಲ್ಲಿಲ್ಲದ ಒಲವು. ಪ್ರವಾಸ, ಪುಸ್ತಕ ಓದುವುದು ನೆಚ್ಚಿನ ಹವ್ಯಾಸಗಳಾಗಿವೆ. ಮೊಬೈಲ್‌ ಸಂಖ್ಯೆ: 9164535321.

Recent Posts

ಇಂದಿನಿಂದ ಕೊಡವ ಕೌಟುಂಬಿಕ ಕ್ರಿಕೆಟ್‌ ಉತ್ಸವ

24ನೇ ವರ್ಷದ ಕ್ರಿಕೆಟ್ ಪಂದ್ಯಾವಳಿಗೆ ಬೇತ್ರಿ ಮುಕ್ಕಾಟೀರ ಕುಟುಂಬಸ್ಥರಿಂದ ಸಿದ್ದತೆ; 24 ದಿನಗಳ ಕಾಲ ಕ್ರಿಕೆಟ್ ಹಬ್ಬ ಪುನೀತ್ ಮಡಿಕೇರಿ…

1 hour ago

ಓದುಗರ ಪತ್ರ | ಕಠಿಣ ಕ್ರಮ ಕೈಗೊಳ್ಳಿ

ಮುರ್ಖರ ದಿನ ವಾದ ಏಪ್ರಿಲ್ ಒಂದರಂದು ( ಬುಧವಾರ), ಕೆಲವು ಜಾಲತಾಣಗಳಲ್ಲಿ ದೇಶದ ರಾಷ್ಟ್ರೀಯ ಲಾಂಛನದ ಅಡಿಯಲ್ಲಿ,(ಸಿಂಹ ಮತ್ತು ಅಶೋಕ…

1 hour ago

ಓದುಗರ ಪತ್ರ | ನಿ. . . ದರ್ಶನ !

ನಿ. . . ದರ್ಶನ ! ಟೇಪು ಕತ್ತರಿಸಿ, ಗುದ್ದಲಿ ಪೂಜೆ ನೆರವೇರಿಸಿ ಸರಸರನೆ ಪರದೆಯನು ಸರಿಸಿ ನೀಡುವರು ಫೋಟೋಗೆ…

1 hour ago

ಓದುಗರ ಪತ್ರ | ಮಕ್ಕಳ ಸುರಕ್ಷತೆಯ ಬಗ್ಗೆ ಗಮನ ಹರಿಸಿ

ಶಾಲೆಗಳಿಗೆ ಬೇಸಿಗೆ ರಜೆ ಆರಂಭವಾಗಿರುವ ಈ ಸಂದರ್ಭದಲ್ಲಿ ಮಕ್ಕಳ ಸುರಕ್ಷತೆಯ ಬಗ್ಗೆ ಪೋಷಕರು ಹೆಚ್ಚಿನ ನಿಗಾವಹಿಸುವುದು ಅಗತ್ಯವಾಗಿದೆ. ಮಕ್ಕಳು ಬಿಸಿಲಿನಬೇಗೆಯಿಂದ…

1 hour ago

ದ್ವೇಷ ರಾಜಕಾರಣದ ಚಹರೆಗಳು

ರೇಣುಕಾ ನಿಡುಗುಂದಿ ನಿನ್ನೆ (ಏಪ್ರಿಲ್ 2) ಹನುಮ ಜಯಂತಿ. ಒಮ್ಮೆ ಇದೇ ಹನುಮ ಜಯಂತಿಯಂದು ಯಾವುದೋ ಕಾರ್ಯಕ್ರಮಕ್ಕೆಂದು ಹೊರಟವಳು ಸರಿಯಾದ…

1 hour ago

ಬಾ.ನಾ.ಸುಬ್ರಹ್ಮಣ್ಯ ಅವರ ಅಂಕಣ ; ರಾಮಾಯಣದ ರಾವಣ, ಶ್ರೀ ಹನುಮಾನ್‌ ಹನುಮ

ಕನ್ನಡ ನಟರಿಬ್ಬರ ಸೀಮೋಲಂಘನ ನಿನ್ನೆ (ಶುಕ್ರವಾರ) ಹಿಂದಿಯಲ್ಲಿ ತಯಾರಾಗುತ್ತಿರುವ ‘ರಾಮಾಯಣ’ ಚಿತ್ರದ ಮೊದಲ ನೋಟ ಲೋಕಾರ್ಪಣೆ ಆಗಿದೆ. ಇತ್ತೀಚೆಗಷ್ಟೇ ‘ಶ್ರೀ…

1 hour ago