ರಾಮನಗರ: ಚನ್ನಪಟ್ಟಣ ಉಪ ಚುನಾವಣೆಗೆ ಎನ್‌ಡಿಎ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಶುಕ್ರವಾರ ನಾಮಪತ್ರ ಸಲ್ಲಿಸಿದ್ದಾರೆ. ಇನ್ನು ನಿಖಿಲ್ ನಾಮಪತ್ರದಲ್ಲಿ ತಮ್ಮ ಹೆಸರಿನಲ್ಲಿರುವ ಆಸ್ತಿ ವಿವರವನ್ನು ಘೋಷಿಸಿಕೊಂಡಿದ್ದಾರೆ.
ಬೃಹತ್ ರೋಡ್ ಶೋ ಮೂಲಕ ತೆರಳಿ ನಾಮಪತ್ರ ಸಲ್ಲಿಸಿದ ನಿಖಿಲ್, ನಾಮಪತ್ರದಲ್ಲಿ 113 ಕೋಟಿ ರೂ.ಮೌಲ್ಯದ ಆಸ್ತಿಗೆ ಒಡೆಯರಾಗಿರುವುದಾಗಿ ತಿಳಿಸಿದ್ದಾರೆ.
ಒಟ್ಟು 78.15 ಕೋಟಿ ರೂ.ಮೌಲ್ಯದ ಚರಾಸ್ತಿ, 29.34 ಕೋಟಿ ರೂ. ಸ್ಥಿರಾಸ್ತಿಯನ್ನು ಹೊಂದಿದ್ದು, 1.488 ಕೆ.ಜಿ.ಚಿನ್ನ, 16 ಕೆ.ಜಿ. ಬೆಳ್ಳಿಯನ್ನು ಹೊಂದಿದ್ದಾರೆ. ಅಲ್ಲದೇ 70.44 ಕೋಟಿ ರೂ. ಸಾಲ ಇರುವುದಾಗಿ ನಮೂದಿಸಿದ್ದಾರೆ.
ಪತ್ನಿ ರೇವತಿ ಹೆಸರಲ್ಲಿ 5.49 ಕೋಟಿ ರೂ. ಮೌಲ್ಯದ ಚರಾಸ್ತಿ, 43 ಲಕ್ಷ ರೂ. ಮೌಲ್ಯದ ಸ್ಥಿರಾಸ್ತಿ ಇದೆ. ಜೊತೆಗೆ 1.411 ಕೆಜಿ ಚಿನ್ನ, 33.05 ಕೆಜಿ ಬೆಳ್ಳಿ ಹಾಗೂ 13 ಕ್ಯಾರೆಟ್ ವಜ್ರವಿದ್ದು, 4.96 ಕೋಟಿ ರೂ. ಸಾಲ ಇರುವುದಾಗಿ ಹೇಳಿದ್ದಾರೆ.
ಇನ್ನೂ ಪುತ್ರ ಆವ್ಯಾನ್ ದೇವ್ ಹೆಸರಿನಲ್ಲಿ 11 ಲಕ್ಷ ಹಣವಿದೆ. ಅಲ್ಲದೇ, 1 ಇನ್ನೋವಾ ಕ್ರಿಸ್ಟ ಕಾರು, 1 ಇನ್ನೋವಾ ಐ ಕ್ರಾಸ್, 1 ರೆಂಜ್ ರೋವರ್ ಹಾಗೂ ಎರಡೂ ಕ್ಯಾರಾವ್ಯಾನ್ ಇದೆ ಎಂದು ನಿಖಿಲ್ ಕುಮಾರಸ್ವಾಮಿ ತಮ್ಮ ಆಸ್ತಿವಿವರವನ್ನು ಬಹಿರಂಗಪಡಿಸಿದ್ದಾರೆ.
ಮಂಗಳೂರು : ಅಮೆರಿಕ, ಇಸ್ರೇಲ್ ಹಾಗೂ ಇರಾನ್ ನಡುವಿನ ಯುದ್ಧದ ನಡುವೆ ರಷ್ಯಾದಿಂದ 96 ಸಾವಿರ ಮೆಟ್ರಿಕ್ ಟನ್ ಕಚ್ಚಾತೈಲ…
ವಿಶ್ವಸಂಸ್ಥೆ : ಇರಾನ್ ವೈರಿಗಳು ಹಾಗೂ ಅವರೊಂದಿಗೆ ನಂಟು ಹೊಂದಿರುವ ರಾಷ್ಟ್ರಗಳಿಗೆ ಮಾತ್ರ ಹೊರ್ಮುಜ್ ಜಲಸಂಧಿ ಮುಚ್ಚಲಾಗಿದೆ ಎಂದು ವಿಶ್ವಸಂಸ್ಥೆಯ…
ಹನೂರು : ವಿಧಾನಸಭಾ ಕ್ಷೇತ್ರದ ಪ್ರಮುಖ ಜಲಾಶಯಗಳ ಪೈಕಿ ರಾಮನ ಗುಡ್ಡ ಜಲಾಶಯಕ್ಕೆ ಕಳೆದ ಎರಡು ತಿಂಗಳ ಹಿಂದೆ ಕಾವೇರಿ…
ಕೈರೋ: ತಾಂತ್ರಿಕ ದೋಷದಿಂದಾಗಿ ಕತಾರ್ ಹೆಲಿಕಾಪ್ಟರ್ ಅಪಘಾತವಾಗಿ ಆರು ಜನರು ಸಾವನ್ನಪ್ಪಿದ್ದಾರೆ ಎಂದು ಸಚಿವಾಲಯ ಹೇಳಿದೆ. ಕತಾರ್‌ನ ಪ್ರಾದೇಶಿಕ ನೀರಿನಲ್ಲಿ…
ಬೆಂಗಳೂರು: ಬೆಂಗಳೂರಿಗೆ ಕುಡಿಯುವ ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ನಿವಾರಿಸಲು ತಮ್ಮ ಸರ್ಕಾರ ಕ್ರಮ ಕೈಗೊಂಡಿದ್ದು, 6ನೇ ಹಂತದ ಕಾವೇರಿ ನೀರು…
ವಾಷಿಂಗ್ಟನ್: ಸಾರ್ವಜನಿಕವಾಗಿ ಕಾಣಿಸಿಕೊಳ್ಳದ ಇರಾನ್‌ನ ನೂತನ ಸುಪ್ರೀಂ ಲೀಡರ್ ಮೊಜ್ತಾಬಾ ಖಮೇನಿ ಎಲ್ಲಿದ್ದಾರೆ? ಬದುಕಿದ್ದಾರಾ? ಎಂದು ಅಮೇರಿಕಾ ಪ್ರಶ್ನೆ ಮಾಡಿದೆ.…