ಒಡನಾಡಿಯ ‘ಮಡಿಲು’ವಿನಲ್ಲಿ ಮೈಸೂರು ವಿವಿ ಕುಲಪತಿಗಳ ಹುಟ್ಟು ಹಬ್ಬದ ಆಚರಣೆ

ಮೈಸೂರು: ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್‌ರವರು ತಮ್ಮ ಹುಟ್ಟು ಹಬ್ಬವನ್ನು ಒಡನಾಡಿಯ ಮಕ್ಕಳೊಡನೆ ಆಚರಿಸುವುದರ ಮೂಲಕ ಸಂಭ್ರಮವನ್ನು ಹಂಚಿಕೊಂಡಿದ್ದಾರೆ.

ಪ್ರತೀ ವರ್ಷದಂತೆ ಈ ವರ್ಷವು ಕುಲಪತಿಗಳಾದ ಹೇಮಂತ್ ಕುಮಾರ್‌ರವರು ಒಡನಾಡಿಯಲ್ಲಿ ತಮ್ಮ‌ ಶಿಷ್ಯರು ಹಾಗೂ ಹಿತೈಷಿಗಳ ಜೊತೆಗೂಡಿ ಕೇಕ್ ಕತ್ತರಿಸುವುದರ ಮೂಲಕ ಹುಟ್ಟ ಹಬ್ಬವನ್ನು ಆಚರಿಸಿದರು.

ಮೈಸೂರು ವಿಶ್ವವಿದ್ಯಾನಿಲಯದ ಯುವ ಸಂಪರ್ಕಧಿಕಾರಿಗಳಾದ ಡಾ‌.ನವೀನ್ ಮೌರ್ಯ‌, ಒಡನಾಡಿಯ ನಿರ್ದೇಶಕರಾದ ಶ್ರೀ.ಸ್ಟ್ಯಾನ್ಲಿ, ಭೂಗರ್ಭ ಶಾಸ್ತ್ರದ ಪ್ರಾಧ್ಯಾಪಕರಾದ ಶ್ರೀ.ನಾಗರಾಜ್‌, ಸಂಶೋಧಕ ವಿದ್ಯಾರ್ಥಿಗಳು, ಒಡನಾಡಿಯ ಸಹಭಾಗಿಗಳು, ಮಕ್ಕಳು ಮತ್ತು ಮಹಿಳೆಯರು ಭಾಗವಹಿಸಿದ್ದರು.

× Chat with us