ಬೆಂಗಳೂರು : ಚಂದ್ರಯಾನ-3 ಹಾಗೂ ಇಸ್ರೋ ಮಾಜಿ ಮುಖ್ಯಸ್ಥರ ಬಗ್ಗೆ ಲೇವಡಿ ಮಾಡಿದ್ದ ನಟ ಪ್ರಕಾಶ್ ರಾಜ್ ಇದೀಗ ಮತ್ತೆ ಟ್ವೀಟ್ ಮಾಡಿ ನೆಟ್ಟಿಗರಿಗೆ ಆಹಾರವಾಗಿದ್ದಾರೆ.
ಚಾಯ್ ವಾಲ್ ಮಂಗಳ ಹಾಗೂ ಶುಕ್ರ ಗ್ರಹಗಳಲ್ಲಿ ಚಹಾ ಅಂಗಡಿ ತೆರೆದಿದ್ದಾನೆ ಎಂದು ಪರೋಕ್ಷವಾಗಿ ಕೇಂದ್ರ ಸರ್ಕಾರವನ್ನು ಲೇವಡಿ ಮಾಡಿದ್ದಾರೆ.
ಮಲಯಾಳಿ ಚಾಯ್ ವಾಲಾ ಎಲ್ಲಿ ಎಂದು ಇನ್ನೂ ಬಡಬಡಿಸುತ್ತಿರುವ, ಹಾಸ್ಯ ಅರ್ಥವಾಗದ ಹಾಸ್ಯಾಸ್ಪದರೇ, ಅವನು ಬುದ್ದಿವಂತ. ಆತನೀಗ ಮಂಗಳ ಹಾಗೂ ಶುಕ್ರ ಗ್ರಹಗಳಲ್ಲಿ ಅಂಗಡಿಯಿಟ್ಟಿದ್ದಾನೆ. ಸಾಧ್ಯವಾದರೆ ಹೋಗಿ ಎಂದು ವ್ಯಂಗ್ಯವಾಡಿದ್ದಾರೆ.
ಜನರನ್ನು ಮೂರ್ಖರನ್ನಾಗಿ ಮಾಡೋದಕ್ಕೆ ಹೋಗಿ, ನೀನು ಮೂರ್ಖನಾಗಿದ್ದಿ ಅಷ್ಷೇ. ಜನ ಎಷ್ಷು ಉಗಿದರು ಮತ್ತೆ ಮತ್ತೆ ಒರೆಸಿಕೊಂಡು ಬರ್ತಾನೆ ಅಂದರೆ, ಎಷ್ಷು ಉರಿದಿರಿಬೇಕು ಇವನಿಗೆ. ಅತೀ ಶೀಘ್ರದಲ್ಲಿ ಭಕ್ತರು ನಿಮ್ಮನ್ನು ರಾಷ್ಟ್ರವಿರೋಧಿ ಅಂತ ಘೋಷಿಸುತ್ತಾರೆ ಎಂದು ಪ್ರಕಾಶ್ ರಾಜ್ ವಿರುದ್ಧ ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
ಮಲಯಾಳಿ #Chaiwala ಎಲ್ಲಿ ಎಂದು ಇನ್ನೂ ಬಡಬಡಿಸುತ್ತಿರುವ .. ಹಾಸ್ಯ ಅರ್ಥವಾಗದ ಹಾಸ್ಯಾಸ್ಪದರೆ.. ಅವನು ಬುದ್ದಿವಂತ … ಆತನೀಗ ಮಂಗಳ .. ಶುಕ್ರ ಗ್ರಹಗಳಲ್ಲಿ ಅಂಗಡಿಯಿಟ್ಟಿದ್ದಾನೆ .. ಸಾಧ್ಯವಾದರೆ ಹೋಗಿ 😂😂😂 #justasking pic.twitter.com/iufhNFcIWQ
— Prakash Raj (@prakashraaj) August 24, 2023