ಚಾಮರಾಜನಗರ: ಚಾಮರಾಜನಗ-ಮೈಸೂರು 61ಕಿಮೀ ರೈಲ್ವೆ ವಾರ್ಗವಾಗಿ ವಿದ್ಯುತ್ ಚಾಲಿತ ರೈಲುಗಾಡಿ ಶುಕ್ರವಾರ ಪ್ರಾಯೋಗಿಕ ಸಂಚಾರ ಬೆಳೆಸಿತು.
ಇದರೊಂದಿಗೆ, ಈ ಮಾರ್ಗದಲ್ಲಿ ಡೀಸೆಲ್ ಎಂಜಿನ್ ಬದಲಿಗೆ ವಿದ್ಯುತ್ ಚಾಲಿತ ಎಂಜಿನ್ವುಳ್ಳ ರೈಲುಗಾಡಿಗಳು ಅತಿ ಶೀಘ್ರದಲ್ಲೇ ನಿರಂತರ ಸಂಚಾರ ಆರಂಭಿಸುವುದು ಸ್ಪಷ್ಟವಾಗಿದೆ.
ರೈಲ್ವೆ ಇಲಾಖೆ ಹಿರಿಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ಮಧ್ಯಾಹ್ನ 2.30ರಲ್ಲಿ ಎಂಜಿನ್ಗೆ ಪೂಜೆ ಸಲ್ಲಿಸಿದ ಬಳಿಕ ಚಾಮರಾಜನಗರ ರೈಲ್ವೆ ನಿಲ್ದಾಣದಿಂದ ವಿದ್ಯುತ ಚಾಲಿತ ರೈಲು ಅಧಿಕಾರಿಗಳನ್ನು ವಾತ್ರ ಹೊತ್ತು ಮೈಸೂರಿನತ್ತ ಹೊರಟಿತು.
2ವರ್ಷಗಳ ಹಿಂದೆಯೇ ಪವರ್ ಗುರು ಇನ್ ಪ್ರಾಟೆಕ್ ಪ್ರ್ತ್ಯೈವೇಟ್ ಲಿಮಿಟೆಟ್ ಇವರಿಗೆ ಈ ವಾರ್ಗದ ವಿದ್ಯುದೀಕರಣ ಕಾಮಗಾರಿಯ ಟೆಂಡರ್ ನೀಡಲಾಗಿತ್ತು. ಟೆಂಡರ್ ಮೊತ್ತ ಅಂದಾಜು 20ಕೋಟಿ ರೂ. ಎಂದು ಹೇಳಲಾಗುತ್ತಿದೆ.
ಈ ಕಾಮಗಾರಿ ಮುಗಿದಿರುವುದರಿಂದ ಪ್ರಾಯೋಗಿಕ ಸಂಚಾರ ನಡೆಸಿ ಪರಿಶೀಲನೆ ಮಾಡಲಾಯಿತು. ದೇಶದಾದ್ಯಂತ ರೈಲು ಮಾರ್ಗಗಳನ್ನು ವಿದ್ಯುದೀಕರಣಗೊಳಿಸಲಾಗುತ್ತಿದ್ದು ಅದರಂತೆ ಈ ಮಾರ್ಗದಲ್ಲೂ ಮಾಡಲಾಗಿದೆ.
ಪರಿಸರ ಮಾಲಿನ್ಯ ತಡೆಗೆ ವಿದ್ಯುತ್ ಎಂಜಿನ್ ಬಳಕೆ ಸಹಕಾರಿಯಾಗಿದೆ. ವೇಗದ ದೃಷ್ಟಿಯಿಂದಲೂ ಪರಿಣಾಮಕಾರಿಯಾಗಿದೆ. ಇಲ್ಲಿಂದ ಮೈಸೂರು ತಲುಪಲು ಡೀಸಲ್ ಎಂಜಿನ್ ಚಾಲಿತ ರೈಲು ಒಂದೂವರೆ ಗಂಟೆ ತೆಗೆದುಕೊಂಡರೆ ವಿದ್ಯುತ್ ಚಾಲಿತ ರೈಲು ೪೫ರಿಂದ ೫೦ನಿಮಿಷಕ್ಕೆ ತಲುಪುತ್ತದೆ ಎಂದು ಹೇಳಲಾಗುತ್ತಿದೆ. ವೇಗಕ್ಕಿಂತ ಪರಿಸರಸ್ನೇಹಿ ಆಗಿಸುವುದು ಇದರ ಮೂಲ ಉದ್ದೇಶ ಎಂದು ಅಧಿಕಾರಿಯೊಬ್ಬರು ಪತ್ರಿಕೆಗೆ ತಿಳಿಸಿದರು.
ವಿದ್ಯುತ್- ಡೀಸೆಲ್ ಎರಡೂ ರೀತಿುಂ ಇಂಧನ ಬಳಕೆ ರೈಲ್ವೆಗಾಡಿಗಳು ಈ ಮಾರ್ಗದಲ್ಲಿ ಸಂಚರಿಸಬಹುದಾಗಿದೆ.