ಬೆಂಗಳೂರು : ಸಚಿವ ಸಂಪುಟ ರಚನೆಗೂ ಮುನ್ನ ತಮ್ಮ ಸಮುದಾಯಕ್ಕೆ ಐದಾರು ಸಚಿವ ಸ್ಥಾನ ಸಿಗುತ್ತದೆ ಎಂದು ವೀರಶೈವ ಲಿಂಗಾಯತರು ನಿರೀಕ್ಷೆಯಲ್ಲಿದ್ದರು, ಆದರೆ ಸಮುದಾಯಕ್ಕೆ ಏಳು ಸಚಿವ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್ ನಾಯಕತ್ವವು ಲಿಂಗಾಯತ ಸಮುದಾಯದ ಮಹತ್ವವನ್ನು ಅರ್ಥಮಾಡಿಕೊಂಡಿದೆ ಎಂದು ತೋರುತ್ತದೆ.
2024ರ ಲೋಕಸಭಾ ಚುನಾವಣೆಯಲ್ಲಿ ಹಲವು ಕ್ಷೇತ್ರಗಳಲ್ಲಿ ಚುನಾವಣಾ ಫಲಿತಾಂಶದ ಮೇಲೆ ಸುಲಭವಾಗಿ ಪ್ರಭಾವ ಬೀರುವ ಕಾರಣ, ಕ್ಯಾಬಿನೆಟ್ ಸ್ಥಾನಮಾನದೊಂದಿಗೆ ಯೋಜನಾ ಆಯೋಗದ ಉಪಾಧ್ಯಕ್ಷರಾಗಿ ಜಗದೀಶ್ ಶೆಟ್ಟರ್ ಅವರನ್ನು ಪ್ರಮುಖ ಹುದ್ದೆಯಲ್ಲಿ ಇರಿಸುವ ಬಗ್ಗೆಯೂ ಚರ್ಚೆ ನಡೆಯುತ್ತಿದೆ.